For Quick Alerts
ALLOW NOTIFICATIONS  
For Daily Alerts

ಒಂದು ತಿಂಗಳಿನಲ್ಲಿ ಗರಿಷ್ಠ ಮಟ್ಟಕ್ಕೆ ಏರಿಕೆಯಾದ ಚಿನ್ನ, ಬೆಳ್ಳಿ ದರ

By Rajashekhar
|

ನವದೆಹಲಿ, ಸೆಪ್ಟೆಂಬರ್ 4: ಭಾರತದಲ್ಲಿ ಚಿನ್ನದ ಡೀಲರ್‌ಗಳು ಔನ್ಸ್‌ಗೆ 2 ಡಾಲರ್‌ಗಳಷ್ಟು ಪ್ರೀಮಿಯಂ ಅನ್ನು ಅಧಿಕೃತವಾಗಿ ನಿಗದಿಗೊಳಿಸಿದ್ದಾರೆ. ಕೆಳದ ವಾರಕ್ಕೆ ಹೋಲಿಸಿದರೆ ಈ ವಾರ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ರಾಯಟರ್ಸ್ ವರದಿ ಮಾಡಿದೆ.

 

ಭಾರತದಲ್ಲಿ ಚಿನ್ನದ ದರವು ಶೇ.10.75ರಷ್ಟು ಆಮದು ಸುಂಕದ ಜೊತೆಗೆ ಶೇ.3ರಷ್ಟು ಸರಕು ಮತ್ತು ಸೇವಾ ತೆರಿಗೆ(GST) ಸೇರಿವೆ. ಶುಕ್ರವಾರ, MCX ನಲ್ಲಿ ಚಿನ್ನದ ದರವು ಸುಮಾರು 500 ರೂಪಾಯಿಯಷ್ಟು ಏರಿಕೆಯಾಗಿದ್ದು, ಗರಿಷ್ಠ ಮಟ್ಟಕ್ಕೆ ತಲುಪಿದೆ. 10 ಗ್ರಾಂ ಚಿನ್ನದ ದರ 47487 ರೂಪಾಯಿ ಆಗಿದೆ. ಬೆಳ್ಳಿಯ ಮೇಲೂ ಆಮದು ಸುಂಕದ ಜೊತೆಗೆ ಶೇ.3ರಷ್ಟು ಜಿಎಸ್ ಟಿ ವಿಧಿಸಲಾಗುತ್ತದೆ. ಈ ಹಿನ್ನೆಲೆ ಒಂದು ಕೆಜಿ ಬೆಳ್ಳಿಯ ದರದಲ್ಲಿ 1900 ರೂಪಾಯಿ ಏರಿಕೆಯಾಗಿದ್ದು, ಒಂದು ಕೆಜಿ ಬೆಳ್ಳಿಗೆ 65,154 ರೂಪಾಯಿ ಆಗಿದೆ.

 

ಚಿನ್ನದ ಬೆಲೆ ಕೊಂಚ ಇಳಿಕೆ: ಸೆಪ್ಟೆಂಬರ್ 04ರ ಬೆಲೆ ಬಗ್ಗೆ ಮಾಹಿತಿಚಿನ್ನದ ಬೆಲೆ ಕೊಂಚ ಇಳಿಕೆ: ಸೆಪ್ಟೆಂಬರ್ 04ರ ಬೆಲೆ ಬಗ್ಗೆ ಮಾಹಿತಿ

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರವು ಏಳು ವಾರಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಅಮೆರಿಕಾದಲ್ಲಿ ನಿರೀಕ್ಷೆಗಿಂತ ಕಡಿಮೆ ಉದ್ಯೋಗ ಸೃಷ್ಟಿ ಮತ್ತು ಫೆಡರಲ್ ರಿಸರ್ವ್ ನೀಡಿದ ಉತ್ತೇಜನವನ್ನು ಶೀಘ್ರ ಹಿಂದಿರುಗಿಸುತ್ತದೆ ಎಂಬ ಆತಂಕ ಕಡಿಮೆಯಾಗಿದೆ. ಇದರ ಬೆನ್ನಲ್ಲೇ ಚಿನ್ನದ ದರಗಳು ಶುಕ್ರವಾರ ಏಳು ವಾರಗಳ ಗರಿಷ್ಠ ಮಟ್ಟಕ್ಕೆ ತಲುಪಿವೆ. ಭಾರತದಲ್ಲಿ ಭೌತಿಕ ಚಿನ್ನದ ಬೇಡಿಕೆಯು ತಟಸ್ಥವಾಗಿದೆ. ದೇಶೀಯ ಬೆಲೆಯಲ್ಲಿ ಏರಿಕೆಯಿಂದಾಗಿ ಖರೀದಿ ಪ್ರಮಾಣ ಇಳಿಕೆಯಾಗಿದ್ದರೂ, ಮುಂಬರುವ ಹಬ್ಬಗಳು ಹೊಸ ಭರವಸೆಯನ್ನು ಮೂಡಿಸಿದೆ.

ಒಂದು ತಿಂಗಳಿನಲ್ಲಿ ಗರಿಷ್ಠ ಮಟ್ಟಕ್ಕೆ ಏರಿಕೆಯಾದ ಚಿನ್ನ, ಬೆಳ್ಳಿ ದರ

ಚಿನ್ನದ ದರದಲ್ಲಿ ಏರಿಕೆ:

ಕಳೆದ ಶುಕ್ರವಾರ ಚಿನ್ನದ ದರದಲ್ಲಿ ಶೇ.1ರಷ್ಟು ಏರಿಕೆಯಾಗಿದ್ದು, 1,830 ಡಾಲರ್ ತಲುಪಿದೆ. ಬೆಳ್ಳಿ ದರದಲ್ಲಿ ಶೇ.3.6ರಷ್ಟು ಜಿಗಿದಿದೆ. ಶುಕ್ರವಾರ ಬಿಡುಗಡೆಯಾದ ಅಂಕಿ-ಅಂಶಗಳ ಪ್ರಕಾರ, ಯುಎಸ್ ನಲ್ಲಿ ಆಗಸ್ಟ್ ತಿಂಗಳಿನಲ್ಲಿ ನಾನ್ಫಾರ್ಮ್ ವೇತನದಾರರ ಪಟ್ಟಿ 235,000 ಹೆಚ್ಚಾಗಿದ್ದು, ಇದು ಅರ್ಥಶಾಸ್ತ್ರಜ್ಞರ ಮುನ್ಸೂಚನೆಗಿಂತ ಕಡಿಮೆಯಾಗಿದೆ. ಡಾಲರ್ ಸೂಚ್ಯಂಕ 92.132ಕ್ಕೆ ಕುಸಿದಿದೆ.

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಜಾಗತಿಕ ಮಟ್ಟದಲ್ಲಿ ಆರ್ಥಿಕತೆಯ ಮರುಗಳಿಕೆಯಲ್ಲಿ ಈ ವರ್ಷ ಚಿನ್ನ ಹೆಣಗಾಡುವಂತಾಗಿದೆ. ಇದು ಕೇಂದ್ರೀಯ ಬ್ಯಾಂಕುಗಳು ತಮ್ಮ ಬೃಹತ್ ವಿತ್ತೀಯ ಉತ್ತೇಜನವನ್ನು ಹೆಚ್ಚಿಸುವ ನಿರೀಕ್ಷೆಯನ್ನು ಹೆಚ್ಚಿಸಿದೆ. ಆದರೆ ಆರ್ಥಿಕ ತಜ್ಞರು ಹೇಳುವಂತೆ ಉದ್ಯೋಗ ಸೃಷ್ಟಿಯು ನಿರಾಶಾದಾಯಕವಾಗಿದ್ದು, ಸೆಪ್ಟೆಂಬರ್ 21-22ರಂದು ನಡೆಯುವ ಫೆಡ್ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಕಳೆದ ವಾರ ಫೆಡ್ ಅಧ್ಯಕ್ಷ ಜೆರೋಮ್ ಪೊವೆಲ್ ಮಾಸಿಕ ಬಾಂಡ್ ಖರೀದಿಯಲ್ಲಿ ಈ ವರ್ಷದ ಆರಂಭದಲ್ಲಿ ಕಡಿತವಾಗಬಹುದು ಎಂದು ಹೇಳಿದ್ದಾರೆ.

ಇಟಿಎಫ್ ಹೊರಹರಿವು ಹೂಡಿಕೆದಾರರ ಆಸಕ್ತಿ ದುರ್ಬಲವಾಗಿರುವುದನ್ನು ತೋರಿಸಿದೆ. ಕೋಟಕ್ ಸೆಕ್ಯುರಿಟೀಸ್ ಪ್ರಕಾರ, ವಿಶ್ವದ ಅತಿದೊಡ್ಡ ಚಿನ್ನದ ಬೆಂಬಲಿತ ವಿನಿಮಯ ವ್ಯಾಪಾರ ನಿಧಿಯಾದ ಎಸ್‌ಪಿಡಿಆರ್ ಇಟಿಎಫ್‌ನ ಚಿನ್ನದ ಹಿಡುವಳಿಗಳು 1.7 ಟನ್‌ಗಳಷ್ಟು ಕುಸಿದು 998.52 ಟನ್‌ಗಳಿಗೆ ಕುಸಿದಿದೆ. ಜಾಗತಿಕ ಆರ್ಥಿಕತೆಗೆ ಹೆಚ್ಚುತ್ತಿರುವ ಸವಾಲುಗಳು ಮತ್ತು ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ನಡುವೆ ಚಿನ್ನದ ಬಗೆಗಿನ ಸಾಮಾನ್ಯ ಪಕ್ಷಪಾತವು ಧನಾತ್ಮಕವಾಗಿ ಉಳಿದಿದೆ ಎಂದು ಕೋಟಕ್ ಸೆಕ್ಯುರಿಟೀಸ್ ಹೇಳಿದೆ.

ಯುಎಸ್ ಡಾಲರ್, ಇಕ್ವಿಟಿಗಳು, ಬಾಂಡ್ ಇಳುವರಿಗಳು ಚಿನ್ನ ಮತ್ತು ಬೆಳ್ಳಿಯ ಮೇಲೆ ಪರಿಣಾಮ ಬೀರಬಹುದು ದೇಶದ ಪ್ರಮುಖ ಆರ್ಥಿಕತೆಗಳ ಮೇಲೆ ದತ್ತಾಂಶಗಳ ಆಧಾರದಲ್ಲಿ ಗಮನವನ್ನು ಕೇಂದ್ರೀಕರಿಸಲಾಗುವುದು. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಪರಿಸ್ಥಿತಿಗೆ ಸಂಬಂಧಿಸಿದ ಬೆಳವಣಿಗೆಗಳು, ಚೀನಾದ ನಿಯಂತ್ರಕ ದಮನ ಮತ್ತು ಅಫ್ಘಾನಿಸ್ತಾನದಲ್ಲಿನ ಉದ್ವಿಗ್ನತೆ, ದಲ್ಲಾಳಿತನದ ಬಗ್ಗೆ ಸೆಂಟ್ರಲ್ ಬ್ಯಾಂಕ್ ಹೇಳಿದೆ.

English summary

Gold prices rise to near one-month high after big gain, silver rates rised

Gold and silver rates increased in global markets, Gold prices rise to near one-month high after big gain, silver rates rised. Take a look.
Story first published: Saturday, September 4, 2021, 13:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X