For Quick Alerts
ALLOW NOTIFICATIONS  
For Daily Alerts

ಸುಂದರ್ ಪಿಚೈನಿಂದ ಮತ್ತೊಂದು ಮೆಟ್ಟಿಲು ಎತ್ತರಕ್ಕೆ ಹೆಜ್ಜೆ, ಆಲ್ಫಾಬೆಟ್ ಸಿಇಒ

|

ಗೂಗಲ್ ಸಿಇಒ- ಭಾರತ ಮೂಲದ ಸುಂದರ್ ಪಿಚೈ ಗೂಗಲ್ ನ ಮಾತೃ ಸಂಸ್ಥೆ ಆಲ್ಫಾಬೆಟ್ ನ ನಾಯಕತ್ವ ಜವಾಬ್ದಾರಿ ವಹಿಸಲಿದ್ದಾರೆ. ಲ್ಯಾರಿ ಪೇಜ್ ಮತ್ತು ಸೆರ್ಗಿ ಬ್ರಿನ್ ಸಕ್ರಿಯ ಆಡಳಿತದಿಂದ ಕೆಳಗಿಳಿದ ನಂತರ ಪಿಚೈ ಜವಾಬ್ದಾರಿ ತೆಗೆದುಕೊಳ್ಳಲಿದ್ದಾರೆ. ಈ ಮೂಲಕ ಸುಂದರ್ ಪಿಚೈ ಅವರು ಜಗತ್ತಿನ ಅತ್ಯಂತ ಶಕ್ತಿಯುತ ಕಾರ್ಪೊರೇಟ್ ನಾಯಕರಾಗಲಿದ್ದಾರೆ.

ಸಿಇಒ ಮತ್ತು ಅಧ್ಯಕ್ಷ ಹುದ್ದೆಯಿಂದ ಪೇಜ್ ಮತ್ತು ಬ್ರಿನ್ ಕೆಳಗಿಳಿಯಲಿದ್ದಾರೆ ಎಂದು ಮಂಗಳವಾರದಂದು ಅಲ್ಫಾಬೆಟ್ ಕಂಪೆನಿ ಘೋಷಣೆ ಮಾಡಿದೆ. ನಲವತ್ತೇಳು ವರ್ಷದ ಸುಂದರ್ ಪಿಚೈ ಸದ್ಯಕ್ಕೆ ಗೂಗಲ್ ನ ಸಿಇಒ ಹಾಗೂ ಎಕ್ಸ್ ಕ್ಯೂಟಿವ್ ಹುದ್ದೆಯಲ್ಲಿದ್ದು, ಹೆಚ್ಚುವರಿಯಾಗಿ ಆಲ್ಫಾಬೆಟ್ ನ ಸಿಇಒ ಹುದ್ದೆಯಾಗಿ ಜವಾಬ್ದಾರಿ ವಹಿಸಲಿದ್ದಾರೆ.

ಗೂಗಲ್ ನ ದತ್ತಾಂಶ ಖಾಸಗಿತನದ ವಿಚಾರವಾಗಿ ಭಾರೀ ಚರ್ಚೆ ಆಗುತ್ತಿದ್ದು, ಇಂಥ ಸನ್ನಿವೇಶದಲ್ಲಿ ಮಾಡಿರುವ ಬದಲಾವಣೆ ಕುತೂಹಲಕ್ಕೆ ಕಾರಣವಾಗಿದೆ. ನಾಲ್ಕು ವರ್ಷದ ಹಿಂದೆ ಸುಂದರ್ ಪಿಚೈ ಸಿಇಒ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದರು. ಕಂಪೆನಿಯ ಕಾರ್ಪೊರೇಟ್ ಪುನಾರಚನೆ ಮಾಡಿ, ಆಲ್ಫಾಬೆಟ್ ನ ರಚನೆಯ ಭಾಗವಾಗಿದ್ದರು.

ಸುಂದರ್ ಪಿಚೈನಿಂದ ಮತ್ತೊಂದು ಎತ್ತರಕ್ಕೆ ಹೆಜ್ಜೆ, ಆಲ್ಫಾಬೆಟ್ ಸಿಇಒ

ಅದಕ್ಕೂ ಮುನ್ನ ಸುಂದರ್ ಗೂಗಲ್ ನಲ್ಲಿ ನಾನಾ ಹುದ್ದೆಗಳನ್ನು ನಿಭಾಯಿಸಿದ್ದರು. ಪೇಜ್ ಹಾಗೂ ಸೆರ್ಗೆ ತಮಗೆ ಸುಂದರ್ ಪಿಚೈ ಮೇಲೆ ಇರುವ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ. ಅಂದ ಹಾಗೆ ಸುಂದರ್ ಮೂಲತಃ ತಮಿಳುನಾಡಿನ ಮದುರೈನವರು. ಐಐಟಿ ಖರಗ್ ಪುರ್, ಸ್ಟ್ಯಾನ್ ಫೋರ್ಡ್ ವಿ.ವಿ.ಯ ವಾರ್ಟನ್ ಬಿಜಿನೆಸ್ ಸ್ಕೂಲ್ ನಲ್ಲಿ ವ್ಯಾಸಂಗ ಮಾಡಿದ್ದಾರೆ.

English summary

Google CEO Sundar Pichai Will Be CEO Of Alphabet

Indian origin- Google CEO Sundar Pichai will be CEO of parent company Alphabet.
Story first published: Wednesday, December 4, 2019, 17:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X