For Quick Alerts
ALLOW NOTIFICATIONS  
For Daily Alerts

2020 ಕ್ಕೆ 2020 ರುಪಾಯಿ ಗೆಲ್ಲುವ 'ಗೂಗಲ್ ಪೇ' ಆಫರ್

|

ಹಣ ವರ್ಗಾಯಿಸುವ, ಬಿಲ್ ಪಾವತಿಸುವ ಡಿಜಿಟಲ್ ಆ್ಯಪ್ ಗೂಗಲ್ ಪೇ ಮತ್ತೊಮ್ಮೆ ಸ್ಟ್ಯಾಂಪ್ಸ್ ಸಂಗ್ರಹಿಸಿ ಹಣ ಗಳಿಸುವ ಆಫರ್ ನೀಡಿದೆ. 7 ಸ್ಟ್ಯಾಂಪ್ಸ್ ಸಂಗ್ರಹಿಸಿ 202 ರುಪಾಯಿಯಿಂದ 2020 ರುಪಾಯಿಗಳವರೆಗೆ ಗೆಲ್ಲಬಹುದು ಎಂದು ಗೂಗಲ್ ಪೇ ತಿಳಿಸಿದೆ.

ಬಳಕೆದಾರರನ್ನು ಹೆಚ್ಚು ಆಕರ್ಷಿಸಲು ಗೂಗಲ್ ಪೇ ಈ ಮೊದಲು ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಂಗೋಲಿ ಸ್ಟ್ಯಾಂಪ್ ಗಳನ್ನು ಸಂಗ್ರಹಿಸುವ ಆಫರ್ ನೀಡಿತು. ಇದು ಮೊದಲು ದೀಪಾವಳಿವರೆಗೆ ಮಾತ್ರ ನಿಗದಿಪಡಿಸಲಾಗಿತ್ತು. ಆದರೆ ಜನರಿಂದ ಹೆಚ್ಚು ಪ್ರತಿಕ್ರಿಯೆ ಮತ್ತು ಪ್ರೋತ್ಸಾಹ ಬಂದ ಕಾರಣ ಈ ಆಫರ್ ನವೆಂಬರ್ 11ರ ವರೆಗೆ ವಿಸ್ತರಿಸಲಾಗಿತ್ತು. ಇದೇ ಮಾದರಿಯನ್ನು ಈಗ ಅನುಸರಿಸಲಾಗಿದ್ದು, ಡಿಸೆಂಬರ್ 23 ರಿಂದ 31ರವರೆಗೆ ವೆಲ್‌ಕಂ 2020 ಸ್ಟ್ಯಾಂಪ್ಸ್ ಆಫರ್ ನೀಡಿದೆ.

ಹಾಗಿದ್ದರೆ ಗೂಗಲ್‌ ಪೇನಲ್ಲಿ ಸ್ಟ್ಯಾಂಪ್ ಗಳನ್ನ ಸಂಗ್ರಹಿಸುವುದು ಹೇಗೆ ಎಂಬುದರ ಬಗ್ಗೆ ವಿವರಣೆ ಈ ಕೆಳಗಿದೆ.

7 ಸ್ಟ್ಯಾಂಪ್ಸ್‌ಗಳನ್ನು ಸಂಗ್ರಹಿಸಬೇಕು

7 ಸ್ಟ್ಯಾಂಪ್ಸ್‌ಗಳನ್ನು ಸಂಗ್ರಹಿಸಬೇಕು

ಗೂಗಲ್ ಪೇ ವೆಲ್‌ಕಂ 2020 ಗೇಮ್‌ನಲ್ಲಿ ಒಟ್ಟು 7 ಸ್ಟ್ಯಾಂಪ್ಸ್‌ಗಳನ್ನು ಸಂಗ್ರಹಿಸಬೇಕು. ಕೇಕ್ ಮಾದರಿಯಲ್ಲಿರುವ ಈ ಗೇಮ್‌ನಲ್ಲಿ ಸ್ಟ್ಯಾಂಪ್ಸ್‌ಗಳನ್ನು ಸಂಗ್ರಹಿಸುತ್ತಾ ಹೋದಂತೆ ಗೇಮ್ ಮುಕ್ತಾಯಗೊಳ್ಳುತ್ತದೆ. ಬಲೂನ್, ಡಿಜೆ, ಸನ್‌ಗ್ಲಾಸ್, ಟಾಫಿ, ಸೆಲ್ಫಿ, ಪಿಜ್ಹಾ, ಡಿಸ್ಕೊ ಎಂಬ ಹೆಸರಿನ 7 ಸ್ಟ್ಯಾಂಪ್ಸ್ ಸಂಗ್ರಹಿಸಿದರೆ ಹಣ ಗಳಿಸಬಹುದು ಎಂದು ಗೂಗಲ್ ಪೇ ಪ್ರಕಟಿಸಿದೆ.

ಸ್ಟ್ಯಾಂಪ್ಸ್ ಸಂಗ್ರಹಿಸುವುದು ಹೇಗೆ?

ಸ್ಟ್ಯಾಂಪ್ಸ್ ಸಂಗ್ರಹಿಸುವುದು ಹೇಗೆ?

* 98 ರುಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ಗೂಗಲ್ ಪೇ ಬಳಸುವ ನಿಮ್ಮ ಸ್ನೇಹಿತರಿಗೆ, ಸಂಬಂಧಿಕರಿಗೆ ಅಥವಾ ಗೂಗಲ್ ಪೇ ಉಳ್ಳ ಅಂಗಡಿಗಳಲ್ಲಿ QR ಕೋಡ್ ಸ್ಕ್ಯಾನ್ ಮಾಡಿ ಪಾವತಿಸುವ ಮೂಲಕ ಸ್ಟ್ಯಾಂಪ್ ಸಂಗ್ರಹಿಸಬಹುದು.

* 300 ರುಪಾಯಿಗಿಂತ ಅಥವಾ ಅದಕ್ಕಿಂತ ಹೆಚ್ಚಿನ ಬಿಲ್ ಪಾವತಿ ಮೂಲಕ ಅಥವಾ 98 ರುಪಾಯಿಗಿಂತ ಹೆಚ್ಚಿನ ಮೊಬೈಲ್ ರೀಚಾರ್ಜ್ ಮೂಲಕ ಸ್ಟ್ಯಾಂಪ್ ಸಂಗ್ರಹಿಸುವುದು

* ಸ್ನೇಹಿತರು, ಸಂಬಂಧಿಕರಿಗೆ ಗೂಗಲ್ ಪ್ಲೇ ಲಿಂಕ್‌ ಕಳುಹಿಸಿ ಇನ್ವೈಟ್ ಮಾಡಿ, ಅವರು ನಿಮ್ಮ ರೆಫರಲ್ ಕೋಡ್ ಮೂಲಕ ಗೂಗಲ್ ಪೇ Sign UP ಆದರೆ ಸ್ಟ್ಯಾಂಪ್ ಪಡೆಯಬಹುದು

* ನಿಮ್ಮ ಗಿಫ್ಟ್‌ಬೋರ್ಡ್ ಮೂಲಕ ನಿಮ್ಮ ಸ್ನೇಹಿತರು ಗಿಫ್ಟ್ ಸ್ವೀಕರಿಸಿದರೆ ಸ್ಟ್ಯಾಂಪ್ ಗೆಲ್ಲಬಹುದು

* ನಿಮ್ಮ ಸುತ್ತಮುತ್ತಲಿರುವ ಯಾವುದೇ 2020 ಸಂಖ್ಯೆಯನ್ನು ಸ್ಕ್ಯಾನ್ ಮಾಡಿದರೆ ಸ್ಟ್ಯಾಂಪ್ ಸಿಗುತ್ತದೆ

 

ಸ್ಟ್ಯಾಂಪ್ಸ್ ಸಂಗ್ರಹಿಸಲು ಇರುವ ನಿಯಮಗಳೇನು?

ಸ್ಟ್ಯಾಂಪ್ಸ್ ಸಂಗ್ರಹಿಸಲು ಇರುವ ನಿಯಮಗಳೇನು?

* ಡಿಸೆಂಬರ್ 23 ರಿಂದ 31ರವರೆಗಿನ ಅವಧಿಯಲ್ಲಿ 7 ಸ್ಟ್ಯಾಂಪ್ಸ್‌ಗಳನ್ನು ಸಂಗ್ರಹಿಸಿಬೇಕು

* ಕೇಕ್‌ನ ಮೂರು ಹಂತಗಳಲ್ಲಿ ಒಂದು ಹಂತವನ್ನು ಮುಗಿಸಿದರೂ 1 ಬೋನಸ್ ರಿವಾರ್ಡ್ ಸಿಗಲಿದೆ, ಮೂರು ಹಂತ ಮುಗಿಸಿದರೆ ಮೂರು ಬೋನಸ್ ರಿವಾರ್ಡ್ ಸಿಗುತ್ತದೆ

* ಡಿಸೆಂಬರ್ 23 ರಿಂದ 31ರವರೆಗಿನ ಅವಧಿಯಲ್ಲಿ ಈ ಕೆಳಗಿನ ರೀತಿಯಲ್ಲಿ ಮಾಡಿದ್ದಲ್ಲಿ ಈ ಸ್ಟ್ಯಾಂಪ್‌ಗಳು ಸಿಗುತ್ತದೆ

ಬಿಲ್‌ ಪಾವತಿಗೆ (ಟಾಫಿ ಸ್ಟ್ಯಾಂಪ್)
ಮೊಬೈಲ್ ರೀಚಾರ್ಜ್ (ಡಿಜೆ ಸ್ಟ್ಯಾಂಪ್)
ಸ್ನೇಹಿತರನ್ನು ಗೂಗಲ್‌ ಪೇಗೆ ಇನ್ವೈಟ್ ಮಾಡಿ ನಿಮ್ಮ ಕೋಡ್ ಮೂಲಕ Sign up ಆದರೆ (ಪಿಜ್ಹಾ ಸ್ಟ್ಯಾಂಪ್)

* 7 ವಿಭಿನ್ನ ವಿಧಾನಗಳಿಂದ ಮಾತ್ರ 7 ಸ್ಟ್ಯಾಂಪ್‌ಗಳನ್ನು ಸಂಗ್ರಹಿಸಲು ಸಾಧ್ಯವಾಗಿದೆ

* ಸ್ಟ್ಯಾಂಪ್ಸ್ ಸಂಗ್ರಹಿಸಲು ದಿನಕ್ಕೆ ಮಿತಿಯಿದ್ದು , ಇನ್ನಷ್ಟು ತಿಳಿಯಲು ನಿಯಮ ಮತ್ತು ಷರತ್ತುಗಳನ್ನು ಓದಿ

 

English summary

Google Pay Welcome 2020 Stamps Collection Offer

Google pay again launched stamps after success of diwali festival stamps. Collect these 7 stamps and win upto 2020 rupees says google pay.
Story first published: Thursday, December 26, 2019, 17:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X