For Quick Alerts
ALLOW NOTIFICATIONS  
For Daily Alerts

ಚಿಲ್ಲರೆ ವ್ಯಾಪಾರಿಗಳ ಅನುಕೂಲಕ್ಕಾಗಿ ಕಾನೂನು ರೂಪಿಸಲು ಕೇಂದ್ರದ ಸಿದ್ಧತೆ

|

ದೇಶಾದ್ಯಂತ ಚಿಲ್ಲರೆ ವ್ಯಾಪಾರಿಗಳ ಅನುಕೂಲಕ್ಕಾಗಿ 'ರಾಷ್ಟ್ರೀಯ ಚಿಲ್ಲರೆ ವ್ಯಾಪಾರ ಕಾನೂನು' ರೂಪಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಮಾರುಕಟ್ಟೆ ದೈತ್ಯ ಕಂಪನಿಗಳಾದ ಅಮೆಜಾನ್, ಫ್ಲಿಪ್ ಕಾರ್ಟ್ ಸೇರಿದಂತೆ ಅನೇಕ ಇ-ಕಾಮರ್ಸ್ ಕಂಪನಿಗಳಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ನಿಯಮಗಳನ್ನು ಸರಳೀಕೃತಗೊಳಿಸಿ ಚಿಲ್ಲರೆ ವ್ಯಾಪಾರಿಗಳಿಗೆ ವೇದಿಕೆ ಕಲ್ಪಿಸಲು ಕೇಂದ್ರ ಮುಂದಾಗಿದೆ.

 

ರಾಷ್ಟ್ರೀಯ ಚಿಲ್ಲರೆ ವ್ಯಾಪಾರ ಕಾನೂನು ಯೋಜನೆಯಡಿ ನೋಂದಣಿ ಶುಲ್ಕ, ತ್ವರಿತ ಸಾಲ, ಎಲೆಕ್ಟ್ರಾನಿಕ್ ಪಾವತಿ ವ್ಯವಸ್ಥೆ, ಅನೇಕ ಹೊಸ ಮಾದರಿಯ ವ್ಯವಸ್ಥೆಯನ್ನು ಕಲ್ಪಿಸಿಕೊಡಲು ಸಿದ್ಧತೆ ನಡೆಸಲಾಗುತ್ತಿದೆ.

 
ಚಿಲ್ಲರೆ ವ್ಯಾಪಾರಿಗಳ ಅನುಕೂಲಕ್ಕಾಗಿ ಕಾನೂನು ರೂಪಿಸಲು ಸಿದ್ಧತೆ

ಈಗಾಗಲೇ ವಿವಿಧ ರಾಜ್ಯಗಳಲ್ಲಿ ಕಿರಾಣಿ ಹಾಗೂ ಚಿಲ್ಲರೆ ಅಂಗಡಿಗಳ ವಿಚಾರವಾಗಿ ಪ್ರತ್ಯೇಕ ನಿಯಮಗಳಿವೆ. ಈ ಅಂಗಡಿಗಳು ರಾಜ್ಯದ ವ್ಯಾಪ್ತಿಗೆ ಬರಲಿದ್ದು, ಅವುಗಳ ಕುರಿತು ಮಾಹಿತಿ ನೀಡುವಂತೆ ರಾಜ್ಯಗಳಿಗೆ ಈಗಾಗಲೇ ತಿಳಿಸಲಾಗಿದೆ.

ದೇಶಾದ್ಯಂತ 6 ಕೋಟಿಗೂ ಅಧಿಕ ಚಿಲ್ಲರೆ ಅಂಗಡಿಗಳಿದ್ದು, 25 ಕೋಟಿಗೂ ಅಧಿಕ ಮಂದಿಗೆ ಸೇವೆ ಒದಗಿಸುತ್ತಿದೆ. ದೇಶದ ಆರ್ಥಿಕ ಬೆಳವಣಿಗೆಗೂ ಸಹಾಯ ಮಾಡುತ್ತಿರುವ ಈ ಅಂಗಡಿಗಳು ಜಿಡಿಪಿಗೆ ಶೇಕಡಾ 15ರಷ್ಟು ಕೊಡುಗೆ ನೀಡುತ್ತಿವೆ. ಒಟ್ಟಾರೆ ಚಿಲ್ಲರೆ ಅಂಗಡಿಗಳ ಪೈಕಿ ಶೇಕಡಾ 65ರಷ್ಟು ಮಂದಿ ಡಿಜಿಟಲ್ ವ್ಯವಸ್ಥೆ ಅಳವಡಿಸಿಲ್ಲ. ಹೀಗಾಗಿ ಹೊಸ ಕಾನೂನಿನ ಮೂಲಕ ಡಿಜಿಟಲ್ ಪಾವತಿ ಹೆಚ್ಚಿಸುವುದು ಕೇಂದ್ರದ ಉದ್ದೇಶವಾಗಿದೆ.

English summary

Government planning for new retailer law

Government planning to improve retail business to compete with amazon, flipcart companies
Story first published: Friday, November 22, 2019, 11:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X