For Quick Alerts
ALLOW NOTIFICATIONS  
For Daily Alerts

ಎಕ್ಸಿಸ್ ಬ್ಯಾಂಕ್‌ನಿಂದ ಸರ್ಕಾರ ಎಕ್ಸಿಟ್; ಷೇರು ಬೆಲೆ ಕುಸಿತ

|

ನವದೆಹಲಿ, ನ. 10: ಕೇಂದ್ರ ಸರ್ಕಾರ ಎಕ್ಸಿಸ್ ಬ್ಯಾಂಕ್‌ನಲ್ಲಿರುವ ತನ್ನ ಪಾಲಿನ ಶೇ. 1.55ರಷ್ಟು ಷೇರುಗಳನ್ನು ಮಾರಲು ನಿರ್ಧರಿಸಿದೆ. ರೆಗ್ಯುಲೇಟರಿ ಫೈಲಿಂಗ್ ವೇಳೆ ನೀಡಿರುವ ಮಾಹಿತಿ ಪ್ರಕಾರ ಎಕ್ಸಿಸ್ ಬ್ಯಾಂಕ್‌ನಲ್ಲಿ ಸರ್ಕಾರಿ ಸ್ವಾಮ್ಯದ ಎಸ್‌ಯುಯುಟಿಐಗೆ ಸೇರಿದ 4.65 ಕೋಟಿ ಷೇರುಗಳು ಇವೆ. ಇವೆಲ್ಲವನ್ನೂ ಸರ್ಕಾರ ಮಾರುತ್ತಿರುವುದು ತಿಳಿದುಬಂದಿದೆ. ಇದೇನಾದರೂ ಆದಲ್ಲಿ ಎಕ್ಸಿಸ್ ಬ್ಯಾಂಕ್‌ನಿಂದ ಸರ್ಕಾರ ಸಂಪೂರ್ಣ ಹೊರಬಿದ್ದಂತಾಗುತ್ತದೆ. ನವೆಂಬರ್ 10 ಮತ್ತು 11, ಇಂದು ಮತ್ತು ನಾಳೆ ಈ ಷೇರುಗಳನ್ನು ಮಾರಾಟಕ್ಕಿಡಲಾಗಿದೆ.

ಎಕ್ಸಿಸ್ ಬ್ಯಾಂಕ್‌ನಲ್ಲಿ ಎಸ್‌ಯುಯುಟಿಐ 4,65,34,903 ಷೇರುಗಳನ್ನು ಹೊಂದಿದೆ. ಸದ್ಯ ಎಕ್ಸಿಸ್ ಬ್ಯಾಂಕ್ ಷೇರು ಬೆಲೆ 875 ರೂ ಆಸುಪಾಸಿನಲ್ಲಿ ಇದೆ. ಇಷ್ಟೂ ಷೇರುಗಳನ್ನು ಮಾರಿದರೆ ಸರ್ಕಾರಕ್ಕೆ ಸುಮಾರು 4 ಸಾವಿರ ಕೋಟಿ ರೂಪಾಯಿ ಆದಾಯ ಬರುವ ನಿರೀಕ್ಷೆ ಇದೆ.

ಸೌರಶಕ್ತಿ ಬಳಕೆ; ಭಾರತದ ಗಣನೀಯ ಸಾಧನೆ; ಚೀನಾ ಮತ್ತಿತರ ದೇಶಗಳು ಹೇಗೆ?ಸೌರಶಕ್ತಿ ಬಳಕೆ; ಭಾರತದ ಗಣನೀಯ ಸಾಧನೆ; ಚೀನಾ ಮತ್ತಿತರ ದೇಶಗಳು ಹೇಗೆ?

ಕಳೆದ ವರ್ಷ ಮೇ ತಿಂಗಳಲ್ಲೂ ಎಸ್‌ಯುಯುಟಿಐ ಮೂಲಕ ಎಕ್ಸಿಸ್ ಬ್ಯಾಂಕ್‌ನಲ್ಲಿ ಹೊಂದಿದ್ದ ಶೆ. 1.95ರಷ್ಟು ಷೇರುಗಳನ್ನು ಸರ್ಕಾರ ಮಾರಿ 4 ಸಾವಿರ ರೂಪಾಯಿ ಆದಾಯ ಗಳಿಸಿತ್ತು. ಈಗ ಬಾಕಿ ಇರುವ ತನ್ನ ಪಾಲಿನ ಶೇ. 1.55ರಷ್ಟು ಷೇರುಗಳನ್ನು ಮಾರುತ್ತಿದೆ. ಇಂದು ನಾನ್-ರೀಟೈಲ್ ಇನ್‌ವೆಸ್ಟರ್‌ಗಳು ಷೇರು ಖರೀದಿಗೆ ಬಿಡ್ಡಿಂಗ್ ನಡೆಸುತ್ತಿದ್ದಾರೆ.

ಎಕ್ಸಿಸ್ ಬ್ಯಾಂಕ್‌ನಿಂದ ಸರ್ಕಾರ ಎಕ್ಸಿಟ್; ಷೇರು ಬೆಲೆ ಕುಸಿತ

ಷೇರು ಬೆಲೆ ಕುಸಿತ

ಸರ್ಕಾರ ಎಕ್ಸಿಸ್ ಬ್ಯಾಂಕ್‌ನಲ್ಲಿನ ತನ್ನ ಅಂತಿಮ ಪಾಲನ್ನು ಮಾರಲು ಹೊರಟಿರುವುದು ಹೂಡಿಕೆದಾರರಿಗೆ ಅಪಥ್ಯವೆಂಬಂತಾಗಿದೆ. ಷೇರುಪೇಟೆಯಲ್ಲಿ ಎಕ್ಸಿಸ್ ಬ್ಯಾಂಕ್‌ನ ಷೇರು ಶೇ. 4ರಷ್ಟು ಕುಸಿತ ಕಂಡಿದೆ. ಸೆನ್ಸೆಕ್ಸ್ 500 ಪಾಯಿಂಟ್ ಕುಸಿದಿದೆ.

ಕಾಂತಾರಾ ನೋಡಿ ಬೆರಗಾದ ಝೀರೋಧ ಸಿಇಒ ಹೇಳಿದ್ದೇನು?ಕಾಂತಾರಾ ನೋಡಿ ಬೆರಗಾದ ಝೀರೋಧ ಸಿಇಒ ಹೇಳಿದ್ದೇನು?

ಒಟ್ಟು 4.18 ಕೋಟಿ ಷೇರುಗಳ ಪೈಕಿ ಶೇ. 4ರಷ್ಟು, ಅಂದರೆ 16 ಲಕ್ಷ ಷೇರುಗಳ ಖರೀದಿಗೆ ಬಿಡ್ಡಿಂಗ್ ಬಂದಿದೆ. ಇದು ಗುರುವಾರ ಬೆಳಗ್ಗೆ 11 ಗಂಟೆಯವರೆಗಿನ ಮಾಹಿತಿ. ಈ ಮಾರಾಟ ಪ್ರಕ್ರಿಯೆಯಲ್ಲಿ ಐಸಿಐಸಿಐ ಸೆಕ್ಯೂರಿಟೀಸ್, ಸಿಟಿಗ್ರೂಪ್ ಗ್ಲೋಬಲ್ ಮಾರ್ಕೆಟ್ಸ್ ಇಂಡಿಯಾ, ಮಾರ್ಗನ್ ಸ್ಟಾನ್ಲೀ ಇಂಡಿಯಾ ಸಂಸ್ಥೆಗಳು ಮಧ್ಯವರ್ತಿಯಾಗಿ (ಬ್ರೋಕರ್) ಕಾರ್ಯ ನಿರ್ವಹಿಸುತ್ತಿವೆ. ಬ್ಲೂಮ್‌ಬರ್ಗ್ ದತ್ತಾಂಶದ ಪ್ರಕಾರ ಬಹುತೇಕ ಅನಾಲಿಸ್ಟ್‌ಗಳು ಎಕ್ಸಿಸ್ ಬ್ಯಾಂಕ್ ಷೇರು ಖರೀದಿಗೆ ಶಿಫಾರಸು ಮಾಡಿವೆ.

ಅಮೆರಿಕದ ಹೂಡಿಕೆ ಸಂಸ್ಥೆ ಬೇನ್ ಕ್ಯಾಪಿಟಲ್ ಇತ್ತೀಚೆಗಷ್ಟೇ ಎಕ್ಸಿಸ್ ಬ್ಯಾಂಕ್‌ನಲ್ಲಿ ತಾನು ಹೊಂದಿದ್ದ ಶೇ. 0.54ರಷ್ಟು ಪಾಲಿನ ಷೇರುಗಳನ್ನು 1,487 ಕೋಟಿ ರೂಪಾಯಿಗೆ ಮಾರಾಟ ಮಾಡಿತ್ತು. ಮುಕ್ತ ಮಾರುಕಟ್ಟೆಯಲ್ಲಿ ಆ ವಹಿವಾಟು ನಡೆದಿತ್ತು.

ಎಕ್ಸಿಸ್ ಬ್ಯಾಂಕ್‌ನಿಂದ ಸರ್ಕಾರ ಎಕ್ಸಿಟ್; ಷೇರು ಬೆಲೆ ಕುಸಿತ

ಉತ್ತಮ ಲಾಭ

ಎಕ್ಸಿಸ್ ಬ್ಯಾಂಕ್ ಕಳೆದ ಬಾರಿಯ ತ್ರೈಮಾಸಿಕ ಅವಧಿಯಲ್ಲಿ ಒಳ್ಳೆಯ ಲಾಭ ತೋರಿಸಿದೆ. ಸೆಪ್ಟೆಂಬರ್ ಅಂತ್ಯದ ಕ್ವಾರ್ಟರ್‌ನಲ್ಲಿ ಎಕ್ಸಿಸ್ ಬ್ಯಾಂಕ್ 5,330 ಕೋಟಿ ರೂಪಾಯಿ ನಿವ್ವಳ ಲಾಭ ಮಾಡಿದೆ. ಇದು ಹಿಂದಿನ ವರ್ಷದಕ್ಕೆ ಹೋಲಿಸಿದರೆ ಶೇ. 70ರಷ್ಟು ಲಾಭ ಹೆಚ್ಚಳವಾದಂತಾಗಿದೆ. ನಿವ್ವಳ ಬಡ್ಡಿ ಆದಾಯ ಕೂಡ ಶೇ. 31ರಷ್ಟು ಹೆಚ್ಚಾಗಿ 10,360.3 ಕೋಟಿ ರೂ ತಲುಪಿದೆ. ಇನ್ನು, ನಿವ್ವಳ ಬಡ್ಡಿ ಅಂತರ (ನೆಟ್ ಇಂಟರೆಸ್ಟ್ ಮಾರ್ಜಿನ್) ಶೇ. 3.96 ಇದೆ.

English summary

Government Selling All Its Stake in Axis Bank, Know the Latest Share Price

Central government has started selling its final 1.55% stake in Axis bank on November 10th. Total of around Rs 4000 crore is expected to be earned from this sale.
Story first published: Thursday, November 10, 2022, 12:59 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X