For Quick Alerts
ALLOW NOTIFICATIONS  
For Daily Alerts

ಆಮದು ಮಾಡಿಕೊಂಡ 35,857 ಟನ್‌ ಈರುಳ್ಳಿ ವಿಲೇವಾರಿ ಪೂರ್ಣಗೊಳಿಸಿದ ಸರ್ಕಾರ

|

ಕಳೆದ ವರ್ಷ ಈರುಳ್ಳಿ ಬೆಲೆ ನಿಯಂತ್ರಣಕ್ಕಾಗಿ ಸರ್ಕಾರಿ ಸ್ವಾಮ್ಯದ ಎಂಎಂಟಿಸಿ ಆಮದು ಮಾಡಿಕೊಂಡ 35,857 ಟನ್ ಈರುಳ್ಳಿಯನ್ನು ವಿಲೇವಾರಿ ಮಾಡುವುದನ್ನು ಸರ್ಕಾರ ಪೂರ್ಣಗೊಳಿಸಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಈರುಳ್ಳಿ ತೀವ್ರ ಬೆಲೆ ಏರಿಕೆ ಸಂದರ್ಭದಲ್ಲಿ 2019 ರ ನವೆಂಬರ್‌ನಲ್ಲಿ ಎಂಎಂಟಿಸಿ ಮೂಲಕ 1.2 ಲಕ್ಷ ಟನ್ ಈರುಳ್ಳಿ ಆಮದು ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿತ್ತು. ಅಂದಿನಿಂದ, 35,857 ಟನ್ ಈರುಳ್ಳಿಯನ್ನು ಸಾಗರೋತ್ತರ ಮಾರುಕಟ್ಟೆಯಿಂದ ಬೆಲೆ ಸ್ಥಿರೀಕರಣ ನಿಧಿ (ಪಿಎಸ್‌ಎಫ್) ಅಡಿಯಲ್ಲಿ ಖರೀದಿಸಿತು.

ಆಮದು ಮಾಡಿಕೊಂಡ 35,857 ಟನ್‌ ಈರುಳ್ಳಿ ವಿಲೇವಾರಿ ಪೂರ್ಣ:ಸರ್ಕಾರ

ಹೀಗೆ ಆಮದು ಮಾಡಿಕೊಂಡ ಈರುಳ್ಳಿ ವಿಲೇವಾರಿಯನ್ನು ಮಾರ್ಚ್ ಅಂತ್ಯದ ವೇಳೆಗೆ ಪೂರ್ಣಗೊಳಿಸಿದೆ ಎಂದು ಸಚಿವಾಲಯ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ. ಒಟ್ಟು 35,857 ಟನ್ ಆಮದು ಮಾಡಿಕೊಂಡ ಈರುಳ್ಳಿಯನ್ನು ಆಂಧ್ರಪ್ರದೇಶ, ಕೇರಳ, ತೆಲಂಗಾಣ, ಚಂಡೀಗಡ, ಉತ್ತರ ಪ್ರದೇಶ, ಅಸ್ಸಾಂ, ಉತ್ತರಾಖಂಡ್, ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಳ, ಮತ್ತು ಗೋವಾ ಸೇರಿದಂತೆ ಮುಂತಾದ ರಾಜ್ಯಗಳಿಗೆ ರವಾನಿಸಲಾಗಿದೆ.

ಸ್ವಲ್ಪ ಪ್ರಮಾಣದ ಈರುಳ್ಳಿಯನ್ನು ಹರಾಜಿನ ಮೂಲಕ ಮಾರಾಟ ಮಾಡಲಾಯಿತು. ಮದರ್ ಡೈರಿ, ಕೇಂದ್ರೀಯ ಭಂಡಾರ್ ಮತ್ತು ನಾಫೆಡ್ ನಂತಹ ಏಜೆನ್ಸಿಗಳು ಆಮದು ಮಾಡಿದ ಈರುಳ್ಳಿಯನ್ನು ಬೆಲೆಗಳನ್ನು ತಣ್ಣಗಾಗಿಸಲು ಚಿಲ್ಲರೆ ಮಾರಾಟ ಮಾಡಲು ಸೂಚಿಸಲಾಗಿದೆ ಎಂದು ವರದಿ ತಿಳಿಸಿದೆ.

English summary

Govt Completes Disposal Of 35857 Tonnes Of Imported Onions

The government has completed the disposal of 35,857 tonne of onion, imported by state-owned MMTC in 2019
Story first published: Friday, April 24, 2020, 19:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X