For Quick Alerts
ALLOW NOTIFICATIONS  
For Daily Alerts

ಚೀನಾದಿಂದ ಹೊರ ಬರುವ ಕಂಪನಿಗಳಿಗೆ ರೆಡ್‌ ಕಾರ್ಪೆಟ್: 10 ವರ್ಷ ತೆರಿಗೆ ವಿನಾಯಿತಿ ಚಿಂತನೆ

|

ಚೀನಾ ಸಹವಾಸ ಸಾಕಪ್ಪ! ಎಂದು ಹೊರಬರಲು ಸಿದ್ಧತೆ ನಡೆಸಿರುವ ಕಂಪನಿಗಳನ್ನು ಭಾರತದತ್ತ ಸೆಳೆಯಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಎಂದೇ ಮಾಸ್ಟರ್ ಪ್ಲಾನ್‌ವೊಂದನ್ನು ತಯಾರು ಮಾಡುತ್ತಿದ್ದು, ಭಾರೀ ವಿನಾಯಿತಿಗಳನ್ನು ನೀಡುವ ಯೋಜನೆ ರೂಪಿಸುತ್ತಿದೆ.

 

ಕೊರೊನಾವೈರಸ್‌ನಿಂದಾಗಿ ಇಡೀ ಜಗತ್ತಿನ ಆರ್ಥಿಕತೆ ತತ್ತರಿಸಿದೆ. ಇದಕ್ಕೆ ಪ್ರಮುಖ ಕಾರಣ ಚೀನಾ ಎಂದು ವಿಶ್ವವೇ ಡ್ರ್ಯಾಗನ್ ರಾಷ್ಟ್ರದ ಮೇಲೆ ಸಿಟ್ಟಾಗಿದೆ. ಹೀಗಾಗಿಯೇ ಅಮೆರಿಕಾ, ಜಪಾನ್, ದಕ್ಷಿಣ ಕೊರಿಯಾ, ಕೆನಡಾ ಸೇರಿದಂತೆ ಹಲವಾರು ದೇಶಗಳ ಕಂಪನಿಗಳನ್ನು ಭಾರತದತ್ತ ಕರೆತರಲು ಸಿದ್ಧತೆ ನಡೆಯುತ್ತಿದೆ.

10 ವರ್ಷ ತೆರಿಗೆ ವಿನಾಯಿತಿ ಚಿಂತನೆ

10 ವರ್ಷ ತೆರಿಗೆ ವಿನಾಯಿತಿ ಚಿಂತನೆ

ಚೀನಾದಿಂದ ಮುನಿಸಿಕೊಂಡಿರುವ ರಾಷ್ಟ್ರಗಳ ಕಂಪನಿಗಳನ್ನು ತನ್ನತ್ತ ಸೆಳೆಯಲು ಭಾರತ ಕಾರ್ಯತಂತ್ರ ರೂಪಿಸಿದೆ. ದೇಶದಲ್ಲಿ ಮುಂದಿನ ಮೂರು ವರ್ಷಗಳ ಕಾಲ ಹೊಸದಾಗಿ 500 ಮಿಲಿಯನ್‌ ಡಾಲರ್‌ವರೆಗೂ ಹೂಡಿಕೆ ಮಾಡುವ ಕಂಪನಿಗಳಿಗೆ 10 ವರ್ಷದವರೆಗೆ ತೆರಿಗೆ ವಿನಾಯಿತಿ ನೀಡುವ ಚಿಂತನೆಯಲ್ಲಿ ವಿತ್ತ ಸಚಿವಾಲಯ ಇದೆ. ಈ ಬಗ್ಗೆ ಕೇಂದ್ರ ವಾಣಿಜ್ಯ ಸಚಿವಾಲಯ ನೀಲನಕ್ಷೆ ಸಿದ್ಧಪಡಿಸಿದ್ದು, ಸದ್ಯ ಹಣಕಾಸು ಇಲಾಖೆ ಬಳಿ ಈ ಪ್ರಸ್ತಾವನೆ ಇದೆ ಎಂಬುದಾಗಿ ಬ್ಲೂಮ್‌ಬರ್ಗ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೇ ಅವಕಾಶವಾಗಿ ಬಳಸಿಕೊಳ್ಳಲು ಮುಂದಾಗಿರುವ ಕೇಂದ್ರ ಸರಕಾರವು, ಇಲ್ಲಿ ಹೂಡಿಕೆ ಮಾಡಬಯಸುವ ಕಂಪೆನಿಗಳಿಗೆ 10 ವರ್ಷ ಸಂಪೂರ್ಣ ತೆರಿಗೆ ವಿನಾಯಿತಿ ನೀಡಲು ಯೋಜನೆಯೊಂದನ್ನು ಸಿದ್ಧಪಡಿಸಿದೆ.

ಟ್ಯಾಕ್ಸ್‌ ಹಾಲಿಡೇ ಪಡೆಯಲು 3 ವರ್ಷದೊಳಗೆ ಭಾರತದಲ್ಲಿ ಹಣ ಹೂಡಬೇಕು

ಟ್ಯಾಕ್ಸ್‌ ಹಾಲಿಡೇ ಪಡೆಯಲು 3 ವರ್ಷದೊಳಗೆ ಭಾರತದಲ್ಲಿ ಹಣ ಹೂಡಬೇಕು

ಜೂನ್ 1ರಿಂದ ಆರಂಭವಾಗಿ ಮುಂದಿನ 3 ವರ್ಷಗಳ ಒಳಗೆ 500 ದಶಲಕ್ಷ ಡಾಲರ್‌ ಹೂಡಿಕೆ ಮಾಡುವ ಕಂಪೆನಿಗಳಿಗೆ 10 ವರ್ಷಗಳ ತೆರಿಗೆ ವಿನಾಯಿತಿ ನೀಡುವ ಅವಕಾಶ ಸಿಗುತ್ತದೆ. ಅದರಲ್ಲೂ ಈ ಹಣವನ್ನು ವೈದ್ಯಕೀಯ ಉಪಕರಣ, ಎಲೆಕ್ಟ್ರಾನಿಕ್ಸ್‌, ಟೆಲಿಕಾಂ ಉಪಕರಣ ಮತ್ತು ಕ್ಯಾಪಿಟಲ್‌ ಗೂಡ್ಸ್‌ ಮೇಲೆ ಹೂಡಿಕೆ ಮಾಡಬೇಕು.

ಅಲ್ಪಾವಧಿಯ ತೆರಿಗೆ ವಿನಾಯಿತಿಯು ಸಿಗುತ್ತದೆ
 

ಅಲ್ಪಾವಧಿಯ ತೆರಿಗೆ ವಿನಾಯಿತಿಯು ಸಿಗುತ್ತದೆ

10 ವರ್ಷದ ತೆರಿಗೆ ವಿನಾಯಿತಿ ಜೊತೆಗೆ ಕಂಪನಿಗಳಿಗೆ ಅಲ್ಪಾವಧಿಯ ತೆರಿಗೆ ವಿನಾಯಿತಿ ನೀಡುವ ಬಗ್ಗೆ ಹಣಕಾಸು ಸಚಿವಾಲಯ ಚಿಂತನೆ ನಡೆಸುತ್ತಿದೆ. 100 ದಶಲಕ್ಷ ಡಾಲರ್‌ ಹಣವನ್ನು ಹೂಡಿಕೆ ಮಾಡುವ ಕಂಪೆನಿಗಳು ಜವಳಿ, ಆಹಾರ ಸಂಸ್ಕರಣೆ, ಚರ್ಮ ಮತ್ತು ಪಾದರಕ್ಷೆ ಉದ್ಯಮದಲ್ಲಿ ಹಣ ಹೂಡಿಕೆ ಮಾಡಬೇಕಾಗುತ್ತದೆ. ಈ ಕಂಪನಿಗಳಿಗೆ 4 ವರ್ಷದವರೆಗೂ ತೆರಿಗೆ ವಿನಾಯಿತಿ ನೀಡುವ ಯೋಚನೆ ಹಣಕಾಸು ಇಲಾಖೆಗೆ ಮುಂದಿದೆ. ಜೊತೆಗೆ 6 ವರ್ಷಗಳಿಗೆ ಕೇವಲ 10 ಪರ್ಸೆಂಟ್ ಕಾರ್ಪೊರೇಟ್‌ ತೆರಿಗೆ ನಿಗದಿ ಮಾಡುವ ಬಗ್ಗೆಯೂ ಪ್ರಸ್ತಾವನೆ ಇದೆ.

ಕಂಪನಿಗಳಿಗೆ ಸುಲಭವಾಗಿ ಭೂಮಿ ದೊರೆಯುವಂತೆ ಮಾಡುವುದು

ಕಂಪನಿಗಳಿಗೆ ಸುಲಭವಾಗಿ ಭೂಮಿ ದೊರೆಯುವಂತೆ ಮಾಡುವುದು

ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿರುವ ಭಾರತದಲ್ಲಿ ಹಣ ಹೂಡಿಕೆ ಮಾಡಲಿರುವ ಕಂಪನಿಗಳಿಗೆ ಸುಲಭವಾಗಿ ಭೂಮಿಯನ್ನು ದೊರೆಯುವಂತೆ ಮಾಡುವುದು ಸಹ ಸರ್ಕಾರದ ಕಾರ್ಯತಂತ್ರಗಳಲ್ಲಿ ಒಂದಾಗಿದೆ. ಈಗಾಗಲೇ ಚೀನಾದಿಂದ ಹೊರಬಂದಿರುವ, ಹಾಗೂ ಹೊರಬರಲು ಮನಸ್ಸು ಮಾಡಿರುವ ಕಂಪನಿಗಳನ್ನು ಆಕರ್ಷಿಸಲು ನಾನಾ ರೂಪುರೇಷೆಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ.

English summary

Govt Gameplan May Offer A Tax Holiday To Fewer Companies

The India's Government to offer tax holiday to encourage companies to bring new investment, that will support the government to boost the COVID-19 pandemic hit economy.
Story first published: Wednesday, May 13, 2020, 13:39 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X