For Quick Alerts
ALLOW NOTIFICATIONS  
For Daily Alerts

ಜಿಎಸ್ ಟಿ ಸಂಗ್ರಹ 1 ಲಕ್ಷ ಕೋಟಿಯೊಳಗೆ ಕುಸಿತ

|

ಮಾರ್ಚ್ ತಿಂಗಳ ಜಿಎಸ್ ಟಿ (ಸರಕು ಮತ್ತು ಸೇವಾ ತೆರಿಗೆ) ಸಂಗ್ರಹ 97,597 ಕೋಟಿ ರುಪಾಯಿಗೆ ಕುಸಿದಿದೆ. ಸರ್ಕಾರದಿಂದ 1.15 ಲಕ್ಷ ಕೋಟಿ ಗುರಿ ಇರಿಸಿಕೊಳ್ಳಲಾಗಿತ್ತು. ಫೆಬ್ರವರಿ ತಿಂಗಳಲ್ಲಿ 1.05 ಲಕ್ಷ ಕೋಟಿ ಸಂಗ್ರಹವಾಗಿತ್ತು. 2020ರ ಫೆಬ್ರವರಿಯಿಂದ ಮಾರ್ಚ್ 31ರ ತನಕ 76.5 ಲಕ್ಷ ಜನರು GSTR- 3B ರಿಟರ್ನ್ಸ್ ಫೈಲ್ ಮಾಡಿದ್ದಾರೆ.

ಒಟ್ಟು 97,597 ಕೋಟಿ ಆದಾಯದಲ್ಲಿ ಕೇಂದ್ರ ಜಿಎಸ್ ಟಿ 19,183 ಕೋಟಿಯಾದರೆ, ರಾಜ್ಯ ಜಿಎಸ್ ಟಿ 25,601 ಕೋಟಿ. ಮತ್ತು ಇಂಟಿಗ್ರೇಟೆಡ್ ಜಿಎಸ್ ಟು 44,508 ಕೋಟಿ ಇದ್ದು, ಅದರಲ್ಲಿ ಆಮದಿನ ಮೇಲೆ 18,056 ಕೋಟಿ ಸಂಗ್ರಹಿಸಲಾಗಿದೆ ಎಂದು ಹಣಕಾಸು ಸಚಿವಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪೆಬ್ರವರಿ ತಿಂಗಳಲ್ಲಿ ಸತತವಾಗಿ ನಾಲ್ಕನೇ ತಿಂಗಳು ಜಿಎಸ್ ಟಿ ಸಂಗ್ರಹ 1 ಲಕ್ಷ ಕೋಟಿ ರುಪಾಯಿ ದಾಟಿತ್ತು. ಕಂದಾಯ ಇಲಾಖೆಯು ಜನವರಿ ತಿಂಗಳಲ್ಲಿ ಫೆಬ್ರವರಿಗೆ ಜಿಎಸ್ ಟಿ ಸಂಗ್ರಹ ಗುರಿಯನ್ನು 1.15 ಲಕ್ಷ ಕೋಟಿಗೆ ನಿಗದಿ ಪಡಿಸಿತ್ತು. ಇನ್ನು ಮಾರ್ಚ್ ಗೆ 1.25 ಲಕ್ಷ ಕೋಟಿ ನಿಗದಿ ಮಾಡಲಾಗಿತ್ತು. ಈ ಹಿಂದೆ ಪ್ರತಿ ತಿಂಗಳ ಗುರಿ 1.1 ಲಕ್ಷ ಕೋಟಿ ಇತ್ತು.

ಜಿಎಸ್ ಟಿ ಸಂಗ್ರಹ 1 ಲಕ್ಷ ಕೋಟಿಯೊಳಗೆ ಕುಸಿತ

ಇನ್ನು ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ನಲ್ಲಿನ ವಂಚನೆಯನ್ನು ತಡೆಯುವ ಸಲುವಾಗಿ ಸಿಬಿಐಸಿ (ಸೆಂಟ್ರಲ್ ಬೋರ್ಡ್ ಫಾರ್ ಇಂಡೈರೆಕ್ಟ್ ಟ್ರಾಕ್ಸ್ ಅಂಡ್ ಕಸ್ಟಮ್ಸ್) ಬಹಳ ಶ್ರಮಿಸುತ್ತಿದೆ.

English summary

GST Collection For March Month Below 1 Lakh Crore

GST collection for the month March stand at 97,597 crore. Which was below 1 lakh crore. Here is the complete details.
Story first published: Wednesday, April 1, 2020, 20:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X