ಈ ಹೆದ್ದಾರಿಯ 3 ಟೋಲ್ ನಿಂದ 4 ವರ್ಷದಲ್ಲಿ 2500 ಕೋಟಿ ಸಂಗ್ರಹ

ಗುರುಗ್ರಾಮ- ಜೈಪುರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಗ್ರಹ ಆಗಿರುವ ಟೋಲ್ ಮೊತ್ತ ಎಷ್ಟು ಗೊತ್ತಾ? 2500 ಕೋಟಿ ರುಪಾಯಿ. ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಸಚಿವಾಲಯದಿಂದ ನಾಲ್ಕು ವರ್ಷದ ಹಿಂದೆ ಈ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಿಸಲು ಆರಂಭಿಸಲಾಗಿತ್ತು. ಈ ಹೆದ್ದಾರಿಯನ್ನು NH8 ಅಂತಲೇ ಕರೆಯಲಾಗುತ್ತದೆ. ಮೂರು ಕಡೆಗಳಲ್ಲಿ ಟೋಲ್ ಸಂಗ್ರಹಿಸಲಾಗುತ್ತದೆ.

2016-17ನೇ ಸಾಲಿನ ಆರ್ಥಿಕ ವರ್ಷದಿಂದ 2020ರ ಫೆಬ್ರವರಿ ತನಕ 2500 ಕೋಟಿ ರುಪಾಯಿಯಷ್ಟು ಸುಂಕ ವಸೂಲಿ ಮಾಡಲಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಸೋಮವಾರದಂದು ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ. ಈ ಟೋಲ್ ಪ್ಲಾಜಾಗಳು ಶಹಜಹಾನ್ ಪುರ್, ಮನೋಹರ್ ಪುರ್ ಹಾಗೂ ದೌಲತ್ ಪುರ ಪ್ರದೇಶಗಳಿವೆ. ಇವುಗಳು ಬಿಒಟಿ (ಬಿಲ್ಟ್ ಆಪರೇಟ್ ಅಂಡ್ ಟ್ರಾನ್ಸ್ ಫರ್) ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತವೆ.

ಈ ಹೆದ್ದಾರಿಯ 3 ಟೋಲ್ ನಿಂದ 4 ವರ್ಷದಲ್ಲಿ 2500 ಕೋಟಿ ಸಂಗ್ರಹ

ಇನ್ನು ಯಾವ ವರ್ಷದಲ್ಲಿ ಎಷ್ಟು ಸುಂಕ ಸಂಗ್ರಹ ಆಗಿದೆ ಎಂಬ ಬಗ್ಗೆಯೂ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ. 2016-17: 569 ಕೋಟಿ, 2017-18: 666 ಕೋಟಿ, 2018-19: 708 ಕೋಟಿ ಹಾಗೂ 2020ರ ಫೆಬ್ರವರಿ ತನಕದ ಸುಂಕ ವಸೂಲಾತಿ ಕಡಿಮೆ, ಅಂದರೆ 555 ಕೋಟಿ ರುಪಾಯಿ ಆಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+