For Quick Alerts
ALLOW NOTIFICATIONS  
For Daily Alerts

ಷೇರುಪೇಟೆಯ ವಾರದ ಕಥೆ; 9 ಕಂಪನಿಗಳಿಂದ 2.12 ಲಕ್ಷ ಕೋಟಿ ರೂ; ಅತಿಹೆಚ್ಚು ಲಾಭ ಯಾರಿಗೆ?

|

ನವದೆಹಲಿ, ನ. 13: ಕಳೆದ ವಾರ ಷೇರುಪೇಟೆ ಬಹಳಷ್ಟು ಮಿಂಚಿದೆ. ಮಂಗಳವಾರ ರಜಾ ದಿನ ಹೊರತುಪಡಿಸಿ ಸೋಮವಾರದಿಂದ ಶುಕ್ರವಾರದವರೆಗೂ ನಡೆದ ವಹಿವಾಟಿನಲ್ಲಿ ಬಹಳಷ್ಟು ಷೇರುಗಳು ಏರಿಕೆ ಕಂಡಿವೆ. 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ ಶೇ. 1.38ರಷ್ಟು ಏರಿಕೆಯಾಗಿ 844.68 ಅಂಕಗಳಷ್ಟು ಉಬ್ಬಿತ್ತು.

 

ಈ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್‌ನಲ್ಲಿ ಅತಿ ಹೆಚ್ಚು ಮೌಲ್ಯದ ಅಗ್ರ 10 ಕಂಪನಿಗಳ ಪೈಕಿ ಹಿಂದೂಸ್ತಾನ್ ಯೂನಿಲಿವರ್ ಲಿ ಹೊರತುಪಡಿಸಿ ಉಳಿದ 9 ಷೇರುಗಳು ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿವೆ. ಈ ಒಂಬತ್ತು ಕಂಪನಿಗಳಿಂದ ಷೇರುಪೇಟೆಗೆ 2,12,478.82 ಲಕ್ಷ ಕೋಟಿ ರೂ ಹೂಡಿಕೆ ಸೇರ್ಪಡೆಯಾಗಿದೆ.

ಗುಡ್ ಫ್ರೈಡೆ; ಷೇರುಪೇಟೆ ಶೈನಿಂಗ್; ಡಾಲರ್ ಎದುರು ರೂಪಾಯಿ ಹೈಜಂಪ್ಗುಡ್ ಫ್ರೈಡೆ; ಷೇರುಪೇಟೆ ಶೈನಿಂಗ್; ಡಾಲರ್ ಎದುರು ರೂಪಾಯಿ ಹೈಜಂಪ್

ಎಚ್‌ಡಿಎಫ್‌ಸಿ ಅತಿಹೆಚ್ಚು

ಎಚ್‌ಡಿಎಫ್‌ಸಿ ಅತಿಹೆಚ್ಚು

ದೇಶದ ಅಗ್ರಗಣ್ಯ ಬ್ಯಾಂಕುಗಳಲ್ಲಿ ಒಂದೆನಿಸಿದ ಎಚ್‌ಡಿಎಫ್‌ಸಿ ಕಳೆದ ವಾರದ ಷೇರುಪೇಟೆ ವಹಿವಾಟಿನಲ್ಲಿ ಅತಿ ಹೆಚ್ಚು ಲಾಭ ಗಳಿಸಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನೊಂದರಿಂದಲೇ ಷೇರುಪೇಟೆಗೆ ಕಳೆದ ವಾರ 63,462.58 ಕೋಟಿ ರೂ ಸೇರ್ಪಡೆಯಾಗಿದೆ. ಇದರಿಂದ ಷೇರುಪೇಟೆಯಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಒಟ್ಟು ಮೌಲ್ಯ ಬರೋಬ್ಬರಿ 8,97,980.25 ಕೋಟಿ ರೂಗೆ ಏರಿದಂತಾಗುತ್ತದೆ.

ಟಾಪ್ 10 ಕಂಪನಿಗಳ ಪೈಕಿ ಹಿಂದೂಸ್ತಾನ್ ಯೂನಿಲಿವರ್ ಲಿ (ಎಚ್‌ಯುಎಲ್) ಕಂಪನಿ ಮಾತ್ರ ಷೇರುಪೇಟೆಯಲ್ಲಿ ಕಳೆದ ವಾರ ಹಿನ್ನಡೆ ಕಂಡಿರುವುದು. ಹೆಚ್‌ಯುಎಲ್‌ನ ಷೇರು ಮೌಲ್ಯ ಕುಸಿತದಿಂದ ಕಂಪನಿಗೆ 3,912.07 ಕೋಟಿ ರೂ ನಷ್ಟವಾಗಿದೆ. ಈಗ ಅದರ ಮಾರ್ಕೆಟ್ ವ್ಯಾಲ್ಯುಯೇಷನ್ 5,88,220.17 ಕೋಟಿ ರುಪಾಯಿಗೆ ಬಂದಿಳಿದಿದೆ.

ಕಳೆದ ವಾರ ಷೇರುಪೇಟೆಯಲ್ಲಿ ಟಾಪ್-10 ಕಂಪನಿಗಳ ಲಾಭ-ನಷ್ಟ

ಕಳೆದ ವಾರ ಷೇರುಪೇಟೆಯಲ್ಲಿ ಟಾಪ್-10 ಕಂಪನಿಗಳ ಲಾಭ-ನಷ್ಟ

1) ಎಚ್‌ಡಿಎಫ್‌ಸಿ ಬ್ಯಾಂಕ್: 63,462.58 ಕೋಟಿ ರೂ ಗಳಿಕೆ
2) ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್: 36,517.34 ರೂ ಗಳಿಕೆ
3) ಎಚ್‌ಡಿಎಫ್‌ಸಿ: 29,422.52 ಕೋಟಿ ರೂ ಗಳಿಕೆ
4) ರಿಲಾಯನ್ಸ್ ಇಂಡಸ್ಟ್ರೀಸ್: 26,317.30 ಕೋಟಿ ರೂ ಗಳಿಕೆ
5) ಇನ್ಫೋಸಿಸ್: 23,626.96 ಕೋಟಿ ರೂ ಗಳಿಕೆ
6) ಅದಾನಿ ಎಂಟರ್ಪ್ರೈಸಸ್: 20,103.92 ಕೋಟಿ ರೂ ಗಳಿಕೆ
7) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: 6,559.59 ಕೋಟಿ ರೂ ಗಳಿಕೆ
8) ಭಾರ್ತಿ ಏರ್ಟೆಲ್: 5,591.05 ಕೋಟಿ ರೂ ಗಳಿಕೆ
9) ಐಸಿಐಸಿಐ ಬ್ಯಾಂಕ್: 877.56 ಕೋಟಿ ರೂ ಗಳಿಕೆ
10) ಹಿಂದೂಸ್ತಾನ್ ಯೂನಿಲಿವರ್ ಲಿ: 3,912.07 ಕೋಟಿ ರೂ ನಷ್ಟ

 

ಬಿಎಸ್‌ಇ: ಅತಿಹೆಚ್ಚು ಮೌಲ್ಯದ ಟಾಪ್-10 ಕಂಪನಿಗಳು
 

ಬಿಎಸ್‌ಇ: ಅತಿಹೆಚ್ಚು ಮೌಲ್ಯದ ಟಾಪ್-10 ಕಂಪನಿಗಳು

1) ರಿಲಾಯನ್ಸ್ ಇಂಡಸ್ಟ್ರೀಸ್ (ಆರ್‌ಐಎಲ್): 17,80,206.22 ಕೋಟಿ ರೂ
2) ಟಿಸಿಎಸ್: 12,13,378.03 ಕೋಟಿ ರೂ
3) ಎಚ್‌ಡಿಎಫ್‌ಸಿ ಬ್ಯಾಂಕ್: 8,97,980.25 ಕೋಟಿ ರೂ
4) ಇನ್ಫೋಸಿಸ್: 6,60,650.10 ಕೋಟಿ ರೂ
5) ಐಸಿಐಸಿಐ ಬ್ಯಾಂಕ್: 6,32,192.05 ಕೋಟಿ ರೂ
6) ಹಿಂದೂಸ್ತಾನ್ ಯೂನಿಲಿವರ್ ಲಿ: 5,88,220.17 ಕೋಟಿ ರೂ
7) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: 5,36,458.41 ಕೋಟಿ ರೂ
8) ಎಚ್‌ಡಿಎಫ್‌ಸಿ: 4,81,818.83 ಕೋಟಿ ರೂ
9) ಭಾರ್ತಿ ಏರ್ಟೆಲ್: 4,59,773.28 ಕೋಟಿ ರೂ
10) ಅದಾನಿ ಎಂಟರ್ಪ್ರೈಸಸ್: 4,56,992.25 ಕೋಟಿ ರೂ

ವಿಲೀನವಾಗಲಿರುವ ಎಚ್‌ಡಿಎಫ್‌ಸಿ ಮತ್ತು ಬ್ಯಾಂಕು

ವಿಲೀನವಾಗಲಿರುವ ಎಚ್‌ಡಿಎಫ್‌ಸಿ ಮತ್ತು ಬ್ಯಾಂಕು

ಎಚ್‌ಡಿಎಫ್‌ಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನಗೊಳ್ಳಲಿರುವ ಸುದ್ದಿ ಈ ವಾರದ ಹೈಲೈಟ್‌ಗಳಲ್ಲಿ ಒಂದಾಗಿದೆ. ಈ ಎರಡು ಸಂಸ್ಥೆಗಳ ವಿಲೀನಕ್ಕೆ ರೆಗ್ಯೂಲೆಟರಿ ಮತ್ತು ಡೆವಲಪ್ಮೆಂಟ್ ಅಥಾರಿಟಿ ಅನುಮೋದನೆ ಕೊಟ್ಟಿರುವುದು ತಿಳಿದುಬಂದಿದೆ.

ಎಚ್‌ಡಿಎಫ್‌ಸಿ ಭಾರತದ ಅತಿದೊಡ್ಡ ಹೌಸಿಂಗ್ ಫೈನಾನ್ಸ್ ಕಂಪನಿಯಾಗಿದೆ. ಇದು ಎಚ್‌ಡಿಎಫ್‌ಸಿ ಲೈಫ್ ಕಂಪನಿಯ ಮಾಲೀಕ ಸಂಸ್ಥೆಯೂ ಹೌದು. ಇನ್ನು, ಎಚ್‌ಡಿಎಫ್‌ಸಿ ಬ್ಯಾಂಕ್ ಭಾರತದ ಅತಿದೊಡ್ಡ ಖಾಸಗಿ ಬ್ಯಾಂಕ್ ಆಗಿದೆ.

ಈಗ ಎಚ್‌ಡಿಎಫ್‌ಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನವಾದರೆ ಎಚ್‌ಡಿಎಫ್‌ಸಿಯ ಎಲ್ಲಾ ಅಂಗಸಂಸ್ಥೆಗಳೂ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಅಂಗಸಂಸ್ಥೆಗಳಾಗಲಿವೆ.

English summary

HDFC Bank Gains Most, As 9 Stocks Add Over 2 Lakh Crore Market Cap Last Week

Indian stock market capital: Out of top-10 firms in 30-share BSE benchmark, 9 stocks have gained last week. HDFC bank is the biggest gainer. HUL is the sole loser of the 10 companies. Here is the details.
Story first published: Sunday, November 13, 2022, 16:42 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X