For Quick Alerts
ALLOW NOTIFICATIONS  
For Daily Alerts

ಬೆಂಗಳೂರಿನಲ್ಲಿ ಕೊರೊನಾ ಬಿಕ್ಕಟ್ಟು: ಅಮೆರಿಕಾ ಕಂಪನಿಗಳ ಮೇಲೆ ಏನು ಪರಿಣಾಮ?

|

ಭಾರತದಲ್ಲಿ ದಿನೇ ದಿನೇ ಕೊರೊನಾವೈರಸ್ ಪಾಸಿಟಿವ್ ಪ್ರಕರಣಗಳು ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗುತ್ತಿವೆ. ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನರು ಕೊರೊನಾಗೆ ಬಲಿಯಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ದೇಶದ ಅನೇಕ ರಾಜ್ಯಗಳು ನಾನಾ ರೀತಿಯಲ್ಲಿ ನಿರ್ಬಂಧ ವಿಧಿಸಿವೆ.

 

ಕೋವಿಡ್‌ ಸೋಂಕಿಗೆ ಹೆಚ್ಚು ಒಳಗಾಗಿರುವ ಪ್ರಮುಖ ನಗರಗಳಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಕೂಡ ಸೇರಿದೆ. ಆದ್ರೆ ಈ ಬೆಂಗಳೂರಿನಲ್ಲಿ ಕೋವಿಡ್-19 ಸಂಖ್ಯೆ ಹೆಚ್ಚಳವು 8,300 ಮೈಲುಗಳಷ್ಟು ದೂರದ ಅಮೆರಿಕಾದ ಕಂಪನಿಗಳ ಮೇಲೆ ಪರಿಣಾಮ ಬೀರುತ್ತಿದೆ ಅಂದರೆ ನಂಬಲೇಬೇಕು.

ಅಮೆರಿಕಾದ ಬೃಹತ್ ಕಂಪನಿಗಳ ಮೇಲೆ ಪರಿಣಾಮ

ಅಮೆರಿಕಾದ ಬೃಹತ್ ಕಂಪನಿಗಳ ಮೇಲೆ ಪರಿಣಾಮ

ಕರ್ನಾಟಕ ರಾಜಧಾನಿ ಬೆಂಗಳೂರು ವಿಶ್ವದ ಪ್ರಮುಖ ಐಟಿ ಹಬ್ ಆಗಿದ್ದು, ವಿದೇಶದ ಅನೇಕ ಖ್ಯಾತ ಐಟಿ ಕಂಪನಿಗಳನ್ನು ಕಾಣಬಹುದು. ಗೋಲ್ಡ್ಮನ್ ಸ್ಯಾಚ್ಸ್ ಗ್ರೂಪ್ ಇಂಕ್ ಮತ್ತು ಯುಬಿಎಸ್ ಗ್ರೂಪ್ ಎಜಿಯಂತಹ ಸಂಸ್ಥೆಗಳಲ್ಲಿ ಭಾರತದ ಸಾವಿರಾರು ಉದ್ಯೋಗಿಗಳನ್ನು ಹೊಂದಿದೆ. ಆದ್ರೆ ಈಗ ಕೊರೊನಾ ಪರಿಣಾಮ ವರ್ಕ್ ಫ್ರಮ್ ಹೋಮ್ ಅನಿವಾರ್ಯವಾಗಿದ್ದು, ಗ್ರಾಹಕ ಸೇವೆ ಮತ್ತು ಅನುಸರಣೆ ಮೇಲೆ ನಿರ್ಣಾಯಕ ಪಾತ್ರ ವಹಿಸಿದೆ.

ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಕೋವಿಡ್-19 ಸೋಂಕು ಹೆಚ್ಚಳವು ವಾಲ್‌ಸ್ಟ್ರೀಟ್‌ ಕಂಪನಿಗಳ ಕಾರ್ಯಾಚರಣೆ ಮೇಲೆ ಪರಿಣಾಮ ಬೀರಿದ್ದು ಒತ್ತಡಕ್ಕೆ ಸಿಲುಕಿಸಿದೆ. ಐಟಿ ಕಂಪನಿಗಳ ಅನೇಕ ಉದ್ಯೋಗಿಗಳು ಅನಾರೋಗ್ಯಕ್ಕೂ ತುತ್ತಾಗಿದ್ದಾರೆ.

 

ಸ್ಟ್ಯಾಂಡರ್ಡ್ ಚಾರ್ಟರ್ಡ್ ಪಿಎಲ್‌ಸಿ 800 ಉದ್ಯೋಗಿಗಳಿಗೆ ಸೋಂಕು

ಸ್ಟ್ಯಾಂಡರ್ಡ್ ಚಾರ್ಟರ್ಡ್ ಪಿಎಲ್‌ಸಿ 800 ಉದ್ಯೋಗಿಗಳಿಗೆ ಸೋಂಕು

ಭಾರತದಲ್ಲಿ ಕಳೆದ ವಾರ ಸ್ಟ್ಯಾಂಡರ್ಡ್ ಚಾರ್ಟರ್ಡ್ ಪಿಎಲ್‌ಸಿಯ 20,000 ಸಿಬ್ಬಂದಿಗಳಲ್ಲಿ ಸುಮಾರು 800 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಎಂದು ಹೇಳಿದೆ. ಯುಬಿಎಸ್‌ನಲ್ಲಿ ಕೆಲವು ತಂಡಗಳಲ್ಲಿ ಶೇಕಡಾ 25ರಷ್ಟು ಉದ್ಯೋಗಿಗಳು ಗೈರಾಗಿದ್ದಾರೆ ಎಂದು ಸಂಸ್ಥೆ ಹೇಳಿದೆ. ಈ ಮೂಲಕ ಸಂಸ್ಥೆಯ ಕಾರ್ಯನಿರ್ವಾಹಕನು ತನ್ನ ಕೆಲಸವನ್ನು ಕಳೆದುಕೊಳ್ಳುವ ಭಯದಿಂದ ಇದ್ದಾರೆ.

'' ಇದು ಕೇವಲ ಭಾರತದ ಸಮಸ್ಯೆ ಮಾತ್ರ ಅಲ್ಲ, ಇದು ಜಾಗತಿಕ ಬಿಕ್ಕಟ್ಟು'' ಎಂದು ಗಾರ್ಟ್ನರ್ ಇಂಕ್‌ನ ಹಿರಿಯ ನಿರ್ದೇಶಕ ವಿಶ್ಲೇಷಕ ಡಿ.ಡಿ. ಮಿಶ್ರಾ ಹೇಳಿದ್ದಾರೆ.

ಭಾರತದಲ್ಲಿ ವಿದೇಶಿ ಕಂಪನಿಗಳ ಸಂಖ್ಯೆ ದೊಡ್ಡದಾಗಿದೆ ಮತ್ತು ಭಾರತ ಮೂಲದ ಸಿಬ್ಬಂದಿಗಳನ್ನು ಹೆಚ್ಚು ಹೊಂದಿರುವ ಸಂಸ್ಥೆಗಳು ಕೋವಿಡ್ ಪರಿಣಾಮ ಎದುರಿಸುತ್ತಗಿವೆ ಎಂದಿದ್ದಾರೆ.

 

ನಾಸ್ಕಾಮ್ ಕಾರ್ಯಾಚರಣೆ ಮೇಲೆ ಪರಿಣಾಮ
 

ನಾಸ್ಕಾಮ್ ಕಾರ್ಯಾಚರಣೆ ಮೇಲೆ ಪರಿಣಾಮ

ಭಾರತದಲ್ಲಿ 194 ಬಿಲಿಯನ್ ಡಾಲರ್ ಹೊರಗುತ್ತಿಗೆ ಉದ್ಯಮ ಹೊಂದಿರುವ ನಾಸ್ಕಾಮ್ ಸುಮಾರು 5 ಮಿಲಿಯನ್ ಉದ್ಯೋಗಿಗಳನ್ನು ಹೊಂದಿದ್ದು, ವಿದೇಶಿ ಕ್ಲೈಂಟ್‌ಗಳಿಂದ ಪ್ರತಿನಿತ್ಯ ಕೋವಿಡ್-19 ಪರಿಸ್ಥಿತಿಯ ಬಗ್ಗೆ ಆತಂಕದಲ್ಲಿ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಭಾರತದ ಒಟ್ಟು ಕೊರೊನಾವೈರಸ್ ಸೋಂಕಿತರು 21 ಮಿಲಿಯನ್ ಮೀರಿದ್ದು, ಅದರಲ್ಲಿ ಅದರಲ್ಲಿ ಏಪ್ರಿಲ್ ಮಧ್ಯದಿಂದ ಸುಮಾರು 7 ಮಿಲಿಯನ್ ಹೆಚ್ಚಾಗಿದೆ.

 

ಕರ್ನಾಟಕದಲ್ಲಿ ಒಂದೇ ದಿನ 50 ಸಾವಿರಕ್ಕೂ ಹೆಚ್ಚು ಪ್ರಕರಣ

ಕರ್ನಾಟಕದಲ್ಲಿ ಒಂದೇ ದಿನ 50 ಸಾವಿರಕ್ಕೂ ಹೆಚ್ಚು ಪ್ರಕರಣ

ಕರ್ನಾಟಕ ರಾಜ್ಯವು ಇತ್ತೀಚಿನ 24 ಗಂಟೆಗಳ ಅವಧಿಯಲ್ಲಿ ಮೊದಲ ಬಾರಿಗೆ 50,000 ಕ್ಕೂ ಹೆಚ್ಚು ಹೊಸ ಸೋಂಕುಗಳನ್ನು ವರದಿ ಮಾಡಿದೆ. ಇದರಲ್ಲಿ ಅರ್ಧದಷ್ಟು ಪ್ರಕರಣಗಳು ಬೆಂಗಳೂರಿನಲ್ಲಿ ಅನ್ನೋದು ಆತಂಕಕ್ಕೆ ಎಡೆಮಾಡಿದೆ.

ಮುಂಬರುವ ವಾರಗಳಲ್ಲಿ ಕೊರೊನಾ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಜುಲೈ ಅಂತ್ಯದ ವೇಳೆಗೆ 10,18,879 ಸಾವುಗಳನ್ನು ತಲುಪಬಹುದು ಎನ್ನಲಾಗಿದೆ. ಇದು ಪ್ರಸ್ತುತ ಅಧಿಕೃತ ಸಾವು 2,30,168ಕ್ಕಿಂತ ನಾಲ್ಕು ಪಟ್ಟು ಹೆಚ್ಚಾಗಿದೆ.

 

ಐಟಿ ಕಂಪನಿಗಳ ಪ್ರಮುಖ ಕೇಂದ್ರಗಳ ಮೇಲೆ ಪರಿಣಾಮ!

ಐಟಿ ಕಂಪನಿಗಳ ಪ್ರಮುಖ ಕೇಂದ್ರಗಳ ಮೇಲೆ ಪರಿಣಾಮ!

ಹೌದು, ಪ್ರಮುಖ ದೇಶಿಯ ಮತ್ತು ವಿದೇಶಿ ಕಂಪನಿಗಳ ಪ್ರಮುಖ ಕಾರ್ಯಾಚರಣೆಗಳ ಸ್ಥಳಗಳಾದ ಬೆಂಗಳೂರು, ದೆಹಲಿ ಮತ್ತು ಮುಂಬೈನಂತಹ ನಗರಗಳಲ್ಲಿ ಕೊರೊನಾ ಸೋಂಕಿತರು ಹೆಚ್ಚಾಗಿರುವ ಕಾರಣ ಸ್ಥಳೀಯ ಸರ್ಕಾರಗಳು ಕಠಿಣ ನಿರ್ಬಂಧಗಳನ್ನು ವಿಧಿಸಿವೆ. ಪರಿಣಾಮ ಕಂಪನಿಗಳ ಕಾರ್ಯಾಚರಣೆ ಮೇಲೆ ನೇರ ಪರಿಣಾಮ ಬೀರತೊಡಗಿದೆ.

English summary

How IT Hub Bengaluru's Huge Covid Surge Is Impacting Big US Firms

Here the details of How Bengaluru's Covid cases Hike Is Impacting Big US Firms
Story first published: Friday, May 7, 2021, 18:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X