For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಕೆಗೆ ಹೊಸ ತಂತ್ರ!?

By ರಾಜಶೇಖರ್ ಮ್ಯಾಗೇರಿ
|

ನವದೆಹಲಿ, ಫೆಬ್ರವರಿ.21: ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯು ಅತ್ಯಂತ ದುಖಃಕರ ಸಂಗತಿಯಾಗಿದೆ. ಅದನ್ನು ಕಡಿಮೆಗೊಳಿಸದ ಹೊರತು ಬೇರೆ ಆಯ್ಕೆಗಳಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂಧನ ಬೆಲೆ ಏರಿಕೆಯೊಂದು ಸಮಸ್ಯೆಯಾಗಿದೆ. ವಾಸ್ತವ ಸ್ಥಿತಿಯ ಬಗ್ಗೆ ಯಾವುದೇ ಉತ್ತರ ನೀಡಿದರೂ ಕೂಡಾ ಅದರಿಂದ ಸಾರ್ವಜನಿಕರಿಗೆ ಮನವರಿಕೆ ಮಾಡಲು ಸಾಧ್ಯವಾಗುವುದಿಲ್ಲ. ಇಂಧನ ಬೆಲೆ ಇಳಿಕೆಗೊಳಿಸುವುದೊಂದೇ ನಮ್ಮ ಮುಖ್ಯ ಉದ್ದೇಶವಾಗಿರುತ್ತದೆ ಎಂದು ಹೇಳಿದ್ದಾರೆ.

ಪೆಟ್ರೋಲ್, ಡೀಸೆಲ್ ದರ ಸತತ 12ನೇ ದಿನ ಏರಿಕೆ: ಮುಂಬೈನಲ್ಲಿ ಲೀಟರ್‌ಗೆ 97 ರೂ.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಡುವೆ "ಧರ್ಮ ಸಂಕಟ"ದ ಸ್ಥಿತಿಯನ್ನು ಎದುರಿಸುವಂತಿದೆ. ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಂಧನ ಬೆಲೆಯನ್ನು ಸಮಂಜಸ ಮಟ್ಟಕ್ಕೆ ತರಲು ಸೂಕ್ತ ಮಾರ್ಗವನ್ನು ಕಂಡು ಹಿಡಿಯಬೇಕಿದೆ ಎಂದು ಸಚಿವ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಪೆಟ್ರೋಲ್, ಡೀಸೆಲ್ ದರ ಏರಿಕೆ ಇಳಿಕೆ ಮೇಲೆ ನಿಯಂತ್ರಣ

ಪೆಟ್ರೋಲ್, ಡೀಸೆಲ್ ದರ ಏರಿಕೆ ಇಳಿಕೆ ಮೇಲೆ ನಿಯಂತ್ರಣ

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಗೆ ಇಂಧನ ಮಾರುಕಟ್ಟೆಗಳಲ್ಲಿರುವ ಕಂಪನಿಗಳೇ ಮುಖ್ಯ ಕಾರಣವಾಗಿವೆ. ಇಂಧನ ದರದ ಮೇಲೆ ಕೇಂದ್ರ ಸರ್ಕಾರವು ಯಾವುದೇ ನಿಯಂತ್ರಣವನ್ನು ಹೊಂದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಇಂಧನ ಮಾರುಕಟ್ಟೆಯಲ್ಲಿ ಕಂಪನಿಗಳು ಕಚ್ಚಾತೈಲ, ದರ ಪರಿಷ್ಕರಣೆ, ವಿತರಣೆಗೆ ಸಂಬಂಧಿಸಿದಂತೆ ಕಂಪನಿಗಳೇ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮತ್ತು ಇಳಿಕೆಯು ನಿರ್ಧಾರವಾಗಲಿದೆ.

"ಪೆಟ್ರೋಲ್, ಡೀಸೆಲ್ ದರ ಇಳಿಕೆಗೆ ಜಿಎಸ್ ಟಿ"

ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಇಂಧನ ಮಾರುಕಟ್ಟೆಯ ಕಂಪನಿಗಳು ನಿರ್ಧರಿಸುತ್ತಿವೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮತ್ತು ಇಂಧನ ದರ ಇಳಿಕೆಗೆ ಸಂಬಂಧಿಸಿದಂತೆ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ವ್ಯಾಪ್ತಿಗೆ ಸೇರಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ. ಜಿಎಸ್ ಟಿ ಕೌನ್ಸಿಲ್ ನಲ್ಲಿ ಈ ಬಗ್ಗೆ ಚರ್ಚಿ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಭಾರತದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರ(ಪ್ರತಿ ಲೀಟರ್):
 

ಭಾರತದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರ(ಪ್ರತಿ ಲೀಟರ್):

ವಾರ: ಭಾನುವಾರ - ಶನಿವಾರ

ದೆಹಲಿ - 90.58 - 90.15

ಕೋಲ್ಕತ್ತಾ - 91.78 - 91.41

ಮುಂಬೈ - 97.00 - 96.62

ಚೆನ್ನೈ - 92.59 - 92.25

ಬೆಂಗಳೂರು - 93.61 - 93.21

ಭಾರತದ ಪ್ರಮುಖ ನಗರಗಳಲ್ಲಿ ಡೀಸೆಲ್ ದರ(ಪ್ರತಿ ಲೀಟರ್):

ಭಾರತದ ಪ್ರಮುಖ ನಗರಗಳಲ್ಲಿ ಡೀಸೆಲ್ ದರ(ಪ್ರತಿ ಲೀಟರ್):

ವಾರ: ಭಾನುವಾರ - ಶನಿವಾರ

ದೆಹಲಿ - 80.97 - 80.60

ಕೋಲ್ಕತ್ತಾ - 84.86 - 84.19

ಮುಂಬೈ - 88.06 - 87.67

ಚೆನ್ನೈ - 85.98 - 85.63

ಬೆಂಗಳೂರು - 85.84 - 85.44

English summary

How Petrol Price Hike Is A Vexatious Issue, Nirmala Sitharaman Explained

How Petrol Price Hike Is A Vexatious Issue, Nirmala Sitharaman Explained.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X