For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ಬಾಲ್ಯದಲ್ಲೇ ಕೌಶಲ್ಯ ಅಭಿವೃದ್ಧಿಗೆ ನೆರವಾಗಲು ಎಚ್‌ಪಿ, ಎನ್‌ಎಸ್‌ಡಿಸಿ ಸಹಭಾಗಿತ್ವ

|

ದೇಶಾದ್ಯಂತದ ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿಯೇ ಕೌಶಲ್ಯ ಅಭಿವೃದ್ಧಿ ಹಾಗೂ ಮನೆಯಿಂದಲೇ ಶಿಕ್ಷಣ ಪಡೆಯುವುದನ್ನು ಬೆಂಬಲಿಸಲು ವೈಜ್ಞಾನಿಕವಾಗಿ ವಿನ್ಯಾಸಗೊಳಿಸಿದ ವರ್ಕ್‌ಶೀಟ್‌ಗಳು ಹಾಗೂ ವಿಷಯಗಳನ್ನು ಒದಗಿಸುವ ಸಲುವಾಗಿ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ಎನ್‌ಎಸ್‌ಡಿಸಿ) ಸಹಯೋಗದೊಂದಿಗೆ ಕೆಲಸ ನಿರ್ವಹಿಸುವುದಾಗಿ ಎಚ್‌ಪಿ ಇಂಡಿಯಾ ಘೋಷಿಸಿದೆ.

ಈ ಪಾಲುದಾರಿಕೆಯ ಭಾಗವಾಗಿ, ಎನ್‌ಎಸ್‌ಡಿಸಿ ತನ್ನ ಡಿಜಿಟಲ್‌ ಕೌಶಲ್ಯ ವೇದಿಕೆ ಇಸ್ಕಿಲ್‌ ಇಂಡಿಯಾದಲ್ಲಿ ಎಚ್‌ಪಿಯ ಮುದ್ರಣಕಲಿಕಾ ಕೇಂದ್ರದ ವಿಷಯಗಳನ್ನು ಪ್ರಕಟಿಸಲಿದೆ ಮತ್ತು ಅದನ್ನು ಲಕ್ಷಾಂತರ ಬಳಕೆದಾರರಿಗೆ ಉಚಿತವಾಗಿ ಒದಗಿಸಲಿದೆ. ಪ್ರಿಂಟ್‌ ಲರ್ನ್ ಸೆಂಟರ್‌ (ಎಚ್‌ಪಿ-ಪಿಎಲ್‌ಸಿ) ಎಚ್‌ಪಿ ಸಂಸ್ಥೆಯ ಉಪಕ್ರಮವಾಗಿದ್ದು, ಶೈಕ್ಷಣಿಕ ಮತ್ತು ಕೌಶಲ್ಯ ಪರಿಣತರಿಂದ ತಯಾರಿಸಲ್ಪಟ್ಟ ಮುದ್ರಿಸಬಲ್ಲ ಕಲಿಕಾಮಾದರಿಗಳನ್ನು ಒದಗಿಸುತ್ತದೆ.

ಮಕ್ಕಳ ಕೌಶಲ್ಯ ಅಭಿವೃದ್ಧಿ: ಎಚ್‌ಪಿ –ಎನ್‌ಎಸ್‌ಡಿಸಿ ಸಹಭಾಗಿತ್ವ

ಎಚ್‌ಪಿಯ ಪ್ರಿಂಟ್ ಲರ್ನ್ ಸೆಂಟರ್‌ನ ವಿಷಯಗಳು ಇಂಗ್ಲಿಷ್ ಮತ್ತು ಏಳು ಭಾರತೀಯ ಭಾಷೆಗಳಲ್ಲಿ (ಕನ್ನಡ, ತಮಿಳು, ತೆಲುಗು, ಬಂಗಾಳಿ, ಹಿಂದಿ, ಗುಜರಾತಿ ಮತ್ತು ಮರಾಠಿ) ಲಭ್ಯವಾಗಲಿದೆ. ಎಚ್‌ಪಿ-ಪಿಎಲ್‌ಸಿ ವಿಷಯವನ್ನು ಸಾರ್ವತ್ರಿಕ ಕಲಿಕೆಯನ್ನು ಉತ್ತೇಜಿಸಲು ವಿನ್ಯಾಸಗೊಳಿಸಲಾಗಿದೆ ಮತ್ತು ಇದು ಸಾಮಾನ್ಯ ಶಾಲಾ ಪಠ್ಯಕ್ರಮಕ್ಕೆ ಪೂರಕವಾಗಿರುತ್ತದೆ. ಇದು ಯುವ ವಿದ್ಯಾರ್ಥಿಗಳಲ್ಲಿ ಸಮಸ್ಯೆ ಪರಿಹಾರ, ವಿಶ್ಲೇಷಣಾತ್ಮಕ ಸಾಮರ್ಥ್ಯ, ಕಂಪ್ಯೂಟಿಂಗ್ ಮತ್ತು ನಾಯಕತ್ವದ ಸಾಮರ್ಥ್ಯಗಳಂತಹ ಆಧುನಿಕ ಕೌಶಲ್ಯಗಳ ಅಭಿವೃದ್ಧಿಗೆ ಅನುವು ಮಾಡಿಕೊಡುತ್ತದೆ. ಈ ಸಹಯೋಗದ ಮೂಲಕ, ಎಚ್‌ಪಿ ಮತ್ತು ಎನ್‌ಎಸ್‌ಡಿಸಿ ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಸಮಗ್ರ ಕೌಶಲ್ಯ ಅಭಿವೃದ್ಧಿಯನ್ನು ಖಚಿತಪಡಿಸುವ ಗುರಿ ಹೊಂದಿದೆ.

ಇದು ಭಾರತೀಯ ಯುವಕರಿಗೆ ಉತ್ತಮ ಗುಣಮಟ್ಟದ ವಿಷಯವನ್ನು ಒದಗಿಸಲು ವಿವಿಧ ಭಾರತೀಯ ಮತ್ತು ಜಾಗತಿಕ ಜ್ಞಾನ ಸಹಭಾಗಿತ್ವದ ಮೂಲಕ ಇ-ಕಲಿಕೆಯ ಸಂಪನ್ಮೂಲಗಳನ್ನು ಒಟ್ಟುಗೂಡಿಸುತ್ತದೆ. ಪ್ರಸ್ತುತ, 28,000 ನಿಮಿಷಗಳ ಡಿಜಿಟಲ್ ಕೋರ್ಸ್‌ಗಳು ಮತ್ತು ವಿಷಯವು ವಿವಿಧ ಕ್ಷೇತ್ರಗಳಲ್ಲಿ ಅನೇಕ ಭಾಷೆಗಳಲ್ಲಿ ಲಭ್ಯವಿದೆ. ವೇಗವಾಗಿ ಬದಲಾಗುತ್ತಿರುವ ಡಿಜಿಟಲ್ ಜಗತ್ತಿನಲ್ಲಿ ಕಲಿಯಲು ಕಲಿಯುವವರಿಗೆ ತಂತ್ರಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸುವ ಉದ್ದೇಶವನ್ನು ಈ ವೇದಿಕೆ ಹೊಂದಿದೆ.

ದೈಹಿಕ ಆರೋಗ್ಯ ಮತ್ತು ಚಲನೆ ಅಭಿವೃದ್ಧಿ, ಭಾಷೆ ಮತ್ತು ಅರಿವಿನ ಕೌಶಲ್ಯಗಳು, ಎಸ್‌ಟಿಇಎಂ ಕೌಶಲ್ಯಗಳು, ವಿಮರ್ಶಾತ್ಮಕ ಚಿಂತನೆ, ಸಾಮಾಜಿಕ ಮತ್ತು ಭಾವನಾತ್ಮಕ ಅಭಿವೃದ್ಧಿ, ಸಂವೇದನಾಶೀಲ ಮತ್ತು ಗ್ರಹಿಕೆ ಅಭಿವೃದ್ಧಿ, ಅಭಿವೃದ್ಧಿ ಕೆಲಸಗಳನ್ನು ಮನೆಯಿಂದಲೇ ಕಲಿಯಲು ಈಯೋಜನೆ ನೆರವಾಗಲಿದೆ.

English summary

HP - NSDC Partnership to Support Early Childhood Skill Development

HP India has announced that it will work in partnership with the National Skill Development Corporation (NSDC) to support skills development and home-based education for students across the country.
Story first published: Monday, February 15, 2021, 23:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X