For Quick Alerts
ALLOW NOTIFICATIONS  
For Daily Alerts

ಇನ್ಮುಂದೆ ICICI ಬ್ಯಾಂಕ್ ATM ನಿಂದ ಹಣ ತೆಗೆಯಲು ಡೆಬಿಟ್ ಕಾರ್ಡ್ ಬೇಕಿಲ್ಲ

|

ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ವಿಶೇಷ ಸೌಲಭ್ಯವೊಂದನ್ನು ನೀಡಿದೆ. ಡೆಬಿಟ್ ಕಾರ್ಡ್ ರಹಿತ ಎಟಿಎಂ ವ್ಯವಹಾರಕ್ಕೆ ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಅನುವು ಮಾಡಿಕೊಡಲು ಸಿದ್ಧಗೊಂಡಿದೆ.

 

'ಐ ಮೊಬೈಲ್' ಆ್ಯಪ್ ಮೂಲಕ ಗ್ರಾಹಕರಿಗೆ ತನ್ನ ಎಟಿಎಂಗಳಿಂದ ಕಾರ್ಡ್ ರಹಿತ ನಗದು ಹಿಂಪಡೆದುಕೊಳ್ಳುವ ಸೌಲಭ್ಯವನ್ನು ನೀಡಿದೆ. ಈ ಸೇವೆಯು ದೇಶದ ಎಲ್ಲಾ ಐಸಿಐಸಿಐ ಬ್ಯಾಂಕ್ ಎಟಿಎಂಗಳಲ್ಲಿ 24/7 ಸಮಯದಲ್ಲಿ ಲಭ್ಯವಿರಲಿದೆ.

"ಐ ಮೊಬೈಲ್‌ನಿಂದ' ಕಾರ್ಡ್‌ ರಹಿತ ನಗದು ಹಿಂಪಡೆಯುವಿಕೆ ನೀಡುವುದರಿಂದ ನಮ್ಮ ಗ್ರಾಹಕರು ತಮ್ಮ ಮೊಬೈಲ್ ಫೋನ್‌ನ ಅನುಕೂಲದಿಂದ ದೈನಂದಿನ ಬಳಕೆ ಮತ್ತು ಖರೀದಿಗೆ ಸುರಕ್ಷಿತವಾಗಿ ಮತ್ತು ಅನುಕೂಲಕರವಾಗಿ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ. ಡೆಬಿಟ್ ಕಾರ್ಡ್ ಬಳಸದೆ ಐಸಿಐಸಿಐ ಬ್ಯಾಂಕ್ ಎಟಿಎಂನಿಂದ ಹಣವನ್ನು ಹಿಂಪಡೆಯುವ ಈ ಪ್ರಸ್ತಾಪವು ನಮ್ಮ ಗ್ರಾಹಕರಿಗೆ ತ್ವರಿತ ಮತ್ತು ವಿಶಿಷ್ಟ ಅನುಭವವನ್ನು ನೀಡುತ್ತದೆ ಎಂದು ನಾವು ನಂಬುತ್ತೇವೆ '' ಎಂದು ಐಸಿಐಸಿಐ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಅನೂಪ್ ಬಾಗ್ಚಿ ಹೇಳಿದ್ದಾರೆ.

ಈ ಡೆಬಿಟ್ ಕಾರ್ಡ್ ರಹಿತ ಎಟಿಎಂ ಹಣ ತೆಗೆಯುವ ಸೌಲಭ್ಯವನ್ನು ಭಾರತದಲ್ಲಿ ಮೊದಲಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ 'ಯೋನೋ' ಸೇವೆಗಳ ಮೂಲಕ ಪರಿಚಯಿಸಿತ್ತು. ಇದೀಗ ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಈ ಸೇವೆ ನೀಡಿದೆ.

ಡೆಬಿಟ್ ಕಾರ್ಡ್ ಬೇಕಿಲ್ಲ, ಮೊಬೈಲ್ ಇದ್ದರೆ ಸಾಕು

ಡೆಬಿಟ್ ಕಾರ್ಡ್ ಬೇಕಿಲ್ಲ, ಮೊಬೈಲ್ ಇದ್ದರೆ ಸಾಕು

ಡೆಬಿಟ್ ಕಾರ್ಡ್ ರಹಿತ ಈ ನಗದು ಪಡೆದುಕೊಳ್ಳುವಿಕೆ ಸೇವೆಯು ಗ್ರಾಹಕರ ಗುರುತಿನ ಪತ್ತೆಗಾಗಿ ಡೆಬಿಟ್ ಕಾರ್ಡ್ ಅವಲಂಬಿಸುವ ವಿಧಾನಕ್ಕಿಂತ ಹೊರತಾಗಿರುತ್ತದೆ. ಇಲ್ಲಿ ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಎಟಿಎಂ ಬಳಕೆದಾರರಲ್ಲಿ ಆ್ಯಂಡ್ರಾಯ್ಡ್ ಅಥವಾ ಐ.ಒ.ಎಸ್. ಹ್ಯಾಂಡ್ ಸೆಟ್ ಗಳಿರುವುದು ಅಗತ್ಯವಾಗಿರುತ್ತದೆ. ಆ ಹ್ಯಾಂಡ್‌ಸೆಟ್‌ಗಲ್ಲಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿದ್ದರೆ ಕಾರ್ಡ್ ರಹಿತ ನಗದು ಹಿಂಪಡೆದುಕೊಳ್ಳಬಹುದು.

15,000 ICICI ಬ್ಯಾಂಕಿನ ಎಟಿಎಂಗಳಲ್ಲಿ ಈ ಸೌಲಭ್ಯ ಪಡೆಯಬಹುದು

15,000 ICICI ಬ್ಯಾಂಕಿನ ಎಟಿಎಂಗಳಲ್ಲಿ ಈ ಸೌಲಭ್ಯ ಪಡೆಯಬಹುದು

ಐಸಿಐಸಿಐ ಬ್ಯಾಂಕ್ ನೀಡಲಿರುವ ಈ ಹೊಸ ಸೌಲಭ್ಯದ ಮೂಲಕ ಗ್ರಾಹಕರು ತಮ್ಮಲ್ಲಿರುವ ಡೆಬಿಟ್ ಕಾರ್ಡ್ ಗಳನ್ನು ಬಳಸದೆಯೇ ನಗದು ಹಿಂಪಡೆದುಕೊಳ್ಳಬಹುದು. ದೇಶಾದ್ಯಂತ ಇರುವ ಐಸಿಐಸಿಐ ಬ್ಯಾಂಕಿನ 15 ಸಾವಿರ ಎಟಿಎಂಗಳಿಂದ ಹಣ ಪಡೆದುಕೊಳ್ಳಬಹುದಾಗಿದೆ.

 

ಎಟಿಎಂ ಮೂಲಕ ಈ 16 ವ್ಯವಹಾರಗಳನ್ನು ಮಾಡಬಹುದುಎಟಿಎಂ ಮೂಲಕ ಈ 16 ವ್ಯವಹಾರಗಳನ್ನು ಮಾಡಬಹುದು

ದಿನಕ್ಕೆ ಗರಿಷ್ಠ 20,000 ವಿತ್‌ಡ್ರಾ ಮಿತಿ
 

ದಿನಕ್ಕೆ ಗರಿಷ್ಠ 20,000 ವಿತ್‌ಡ್ರಾ ಮಿತಿ

ಐಸಿಐಸಿಐ ಬ್ಯಾಂಕ್ ನೀಡಲಿರುವ ಈ ಹೊಸ ಸೌಲಭ್ಯವು ನಗದು ಹಿಂಪಡೆಯಲು ಮಿತಿಯನ್ನು ಹೊಂದಿದೆ. ಬ್ಯಾಂಕಿನ ಗ್ರಾಹಕರು ತಮ್ಮಲ್ಲಿರುವ ಡೆಬಿಟ್ ಕಾರ್ಡ್ ಗಳನ್ನು ಬಳಸದೆಯೇ ದಿನಕ್ಕೆ ಗರಿಷ್ಠ 20 ಸಾವಿರ ರುಪಾಯಿಗಳನ್ನು ಹಿಂಪಡೆಯಬಹುದು. ಕಾರ್ಡ್ ಇಲ್ಲದೆ ಅದಕ್ಕಿಂತ ಹೆಚ್ಚಿನ ಹಣ ಹಿಂಪಡೆಯಲು ಅವಕಾಶವಿಲ್ಲ.

 

ATM ಅಥವಾ ಮೊಬೈಲ್ ಬ್ಯಾಂಕಿಂಗ್‌ನಲ್ಲಿ ಮೋಸಕ್ಕೆ ಒಳಗಾಗುವ ಮುನ್ನ ಇಲ್ಲೊಮ್ಮೆ ನೋಡಿATM ಅಥವಾ ಮೊಬೈಲ್ ಬ್ಯಾಂಕಿಂಗ್‌ನಲ್ಲಿ ಮೋಸಕ್ಕೆ ಒಳಗಾಗುವ ಮುನ್ನ ಇಲ್ಲೊಮ್ಮೆ ನೋಡಿ

ICICI ಬ್ಯಾಂಕಿನ ಎಟಿಎಂಗಳಲ್ಲಿ ಕಾರ್ಡ್ ಇಲ್ಲದೆ ಹಣ ಪಡೆಯುವುದು ಹೇಗೆ?

ICICI ಬ್ಯಾಂಕಿನ ಎಟಿಎಂಗಳಲ್ಲಿ ಕಾರ್ಡ್ ಇಲ್ಲದೆ ಹಣ ಪಡೆಯುವುದು ಹೇಗೆ?

1. ಮೊದಲು ಐ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

2. ಐ ಮೊಬೈಲ್ ಅಪ್ಲಿಕೇಶನ್‌ಗೆ ಒಮ್ಮೆ ಲಾಗಿನ್ ಆದ ನಂತರ, ಬಳಕೆದಾರರು "ಸರ್ವಿಸಸ್" ವಿಭಾಗದ ಅಡಿಯಲ್ಲಿ "ಐಸಿಐಸಿಐ ಬ್ಯಾಂಕ್ ಎಟಿಎಂನಲ್ಲಿ ನಗದು ಹಿಂಪಡೆಯುವಿಕೆ" ಆಯ್ಕೆಯನ್ನು ಆರಿಸಬೇಕಾಗುತ್ತದೆ.

3. ಈ ಹಂತದ ನಂತರ, ನೀವು ತೆಗೆಯಬಯಸುವ ಮೊತ್ತವನ್ನು ನಮೂದಿಸಿ ಹಾಗೂ ನಿಮ್ಮ ಅಕೌಂಟ್ ನಂಬರನ್ನು ಆಯ್ಕೆ ಮಾಡಿ. 4 ಸಂಖ್ಯೆಗಳ ತಾತ್ಕಾಲಿಕ ಪಿನ್ ನಂಬರನ್ನು ನೀಡಿ.

4. ತಕ್ಷಣವೇ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಂದು ರೆಫೆರೆನ್ಸ್ ಒಟಿಪಿ ಬರುತ್ತದೆ.

5. ಒಟಿಪಿ ಸ್ವೀಕರಿಸಿದ ನಂತರ, ICICI ಬ್ಯಾಂಕಿನ ಯಾವುದೇ ಎಟಿಎಂಗಳಲ್ಲಿ "ಕಾರ್ಡ್‌ಲೆಸ್ ನಗದು ಹಿಂಪಡೆಯುವಿಕೆ" ಆಯ್ಕೆಯನ್ನು ಪ್ರವೇಶಿಸುವ ಮೂಲಕ ಬಳಕೆದಾರರು ವಿವರಗಳನ್ನು ನಮೂದಿಸುವ ಮೂಲಕ ಹಿಂಪಡೆಯಬಹುದು. ಹಣವನ್ನು ಹಿಂಪಡೆಯಲು ಬಳಕೆದಾರರು ಒಟಿಪಿ ಮತ್ತು ತಾತ್ಕಾಲಿಕ ಪಿನ್‌ನಂತಹ ವಿವರಗಳೊಂದಿಗೆ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.

 

ಎಟಿಎಂ ಕಾರ್ಡ್ ಬಳಸುವ ಮುನ್ನ ಇಲ್ಲಿ ನೋಡಿ..ಎಟಿಎಂ ಕಾರ್ಡ್ ಬಳಸುವ ಮುನ್ನ ಇಲ್ಲಿ ನೋಡಿ..

English summary

ICICI Bank New Way Of Cardless Withdrawal Facility

The ICICI bank customers can now withdraw cash from any ICICI Bank ATM without a debit card 24X7
Story first published: Wednesday, January 22, 2020, 10:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X