For Quick Alerts
ALLOW NOTIFICATIONS  
For Daily Alerts

ಮುಂದಿನ ವಾರ ಈ ಷೇರುಗಳಲ್ಲಿ ಹೂಡಿಕೆ ಮಾಡಲು ಐಸಿಐಸಿಐ ಸೆಕ್ಯೂರಿಟೀಸ್ ಸಲಹೆ

|

ನಾವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಎಂದಿಗೂ ಅಪಾಯಕಾರಿ ಹೌದು. ನಾವು ಇಂದು ಹೂಡಿಕೆ ಮಾಡಿದ ಮೊತ್ತ ಮುಂದಿನ ದಿನಗಳಲ್ಲಿ ನಮ್ಮ ಕೈಗೆ ಅಷ್ಟೇ ಲಭ್ಯವಾಗಲಿದೆಯೇ ಎಂದು ನಂಬಲಾಗದು. ಕೆಲವು ಷೇರುಗಳು ಅಧಿಕ ಲಾಭ ನೀಡಿದರೆ ಮತ್ತೆ ಕೆಲವು ಷೇರುಗಳಿಂದ ನಮಗೆ ನಷ್ಟ ಉಂಟಾಗುತ್ತದೆ.

ಹಾಗಿರುವಾಗ ನಾವು ಯಾವ ಷೇರಿನ ಮೇಲೆ ಹೂಡಿಕೆ ಮಾಡಿದರೆ ಅಧಿಕ ಲಾಭವನ್ನು ಅಥವಾ ಅಧಿಕ ರಿಟರ್ನ್ ಅನ್ನು ಗಳಿಸಲು ಸಾಧ್ಯವಾಗಲಿದೆ ಎಂದು ಬ್ರೋಕರೇಜ್ ಸಂಸ್ಥೆಗಳು ಮಾಹಿತಿ ನೀಡುತ್ತದೆ. ಅದರ ಮಾಹಿತಿಯಂತೆ ಹೂಡಿಕೆ ಮಾಡುವುವವರು ಅದೆಷ್ಟೋ ಮಂದಿ ಇದ್ದಾರೆ. ಆದರೆ ಲಾಭದ ಬದಲೂ ನಷ್ಟ ಕೂಡಾ ಉಂಟಾಗಬಹುದು!

ಯುಸ್‌ ಆರ್ಥಿಕ ಹಿಂಜರಿತ ಆತಂಕ: ಸೆನ್ಸೆಕ್ಸ್ ದಿಢೀರ್ ಕುಸಿತಯುಸ್‌ ಆರ್ಥಿಕ ಹಿಂಜರಿತ ಆತಂಕ: ಸೆನ್ಸೆಕ್ಸ್ ದಿಢೀರ್ ಕುಸಿತ

ಪ್ರಸ್ತುತ ಐಸಿಐಸಿಐ ಸೆಕ್ಯೂರಿಟೀಸ್ ನಾವು ಮುಂದಿನ ವಾರದಲ್ಲಿ ಕೆಲವು ಸ್ಟಾಕ್‌ಗಳ ಮೇಲೆ ಹೂಡಿಕೆ ಮಾಡುವುದರಿಂದ ಹೆಚ್ಚಿನ ರಿಟರ್ನ್ ಅನ್ನು ಪಡೆಯಬಹುದು ಎಂದು ಹೇಳಿದೆ. ಹಾಗಾದರೆ ಆ ಸ್ಟಾಕ್‌ಗಳು ಯಾವುದು, ಅದರ ಬಗ್ಗೆ ಅಧಿಕ ಮಾಹಿತಿ ತಿಳಿಯೋಣ ಮುಂದೆ ಓದಿ...

 ಜಿಂದಾಲ್ ಸ್ಟೇನ್‌ಲೆಸ್‌

ಜಿಂದಾಲ್ ಸ್ಟೇನ್‌ಲೆಸ್‌

ಐಸಿಐಸಿಐ ಸೆಕ್ಯೂರಿಟೀಸ್ ಜಿಂದಾಲ್ ಸ್ಟೇನ್‌ಲೆಸ್‌ ಷೇರು ಅನ್ನು ಖರೀದಿ ಮಾಡುವಂತೆ ಸಲಹೆ ನೀಡಿದೆ. ರಫ್ತು ಸುಂಕವನ್ನು ತೆಗೆದುಹಾಕಿರುವ ಕಾರಣದಿಂದಾಗಿ ಜಿಂದಾಲ್ ಸ್ಟೇನ್‌ಲೆಸ್‌ ಷೇರು ಏರಿಕೆಯಾಗುವ ಸಾಧ್ಯತೆಯಿದೆ. ಆದ್ದರಿಂದಾಗಿ ಜಿಂದಾಲ್ ಸ್ಟೇನ್‌ಲೆಸ್‌ ಷೇರು ಖರೀದಿ ಮಾಡುವುದು ಉತ್ತಮ ಎಂದು ಐಸಿಐಸಿಐ ಸೆಕ್ಯೂರಿಟೀಸ್ ಅಭಿಪ್ರಾಯಿಸಿದೆ. ಟಾರ್ಗೆಟ್ ಫ್ರೈಸ್ 270 ರೂಪಾಯಿ ಆಗಿದೆ.

 ಅಸ್ಟ್ರಾಲ್ ಮತ್ತು ಜ್ಯುಬಿಲ್ಯಾಂಟ್ ಫುಡ್‌ವರ್ಕ್ಸ್

ಅಸ್ಟ್ರಾಲ್ ಮತ್ತು ಜ್ಯುಬಿಲ್ಯಾಂಟ್ ಫುಡ್‌ವರ್ಕ್ಸ್

ಅಸ್ಟ್ರಾಲ್ ಮತ್ತು ಜ್ಯುಬಿಲ್ಯಾಂಟ್ ಫುಡ್‌ವರ್ಕ್ಸ್ ಸ್ಟಾಕ್ ಅನ್ನು ಖರೀದಿ ಮಾಡುವಂತೆ ಬ್ರೋಕರೇಜ್ ಐಸಿಐಸಿಐ ಸೆಕ್ಯೂರಿಟೀಸ್ ಸಲಹೆ ನೀಡಿದೆ. ಜ್ಯುಬಿಲ್ಯಾಂಟ್ ಫುಡ್‌ವರ್ಕ್ಸ್‌ನ ಟಾರ್ಗೆಟ್ ದರ 720 ರೂಪಾಯಿ ಆಗಿದೆ. ಇನ್ನು ಅಸ್ಟ್ರಾಲ್ ಟಾರ್ಗೆಟ್ ದರ 2295 ರೂಪಾಯಿ ಆಗಿದೆ.

 ಮಾರುಕಟ್ಟೆ ಮತ್ತಷ್ಟು ಕುಸಿತ ಸಾಧ್ಯತೆ

ಮಾರುಕಟ್ಟೆ ಮತ್ತಷ್ಟು ಕುಸಿತ ಸಾಧ್ಯತೆ

ನಿಫ್ಟಿ ಹಾಗೂ ಸೆನ್ಸೆಕ್ಸ್ ಪ್ರಸ್ತುತ ಸುಮಾರು ಶೇಕಡ 5ರಷ್ಟು ಕುಸಿತವನ್ನು ದಾಖಲಿಸಿದೆ. "ನಿನ್ನೆ ನಿಫ್ಟಿ ಏರಿಕೆಯೊಂದಿಗೆ ವಹಿವಾಟಿಗೆ ಇಳಿದಿದೆ. ಆದರೆ ಬಳಿಕ ಕುಸಿತವನ್ನು ಕಂಡಿದೆ, ನಿರಂತರವಾಗಿ ಇಳಿದಿದೆ. ನಿನ್ನೆ ವಹಿವಾಟಿನ ಅಂತ್ಯದಲ್ಲಿ ಸುಮಾರು ಶೇಕಡ 0.39ರಷ್ಟು ಕುಸಿದು ವಹಿವಾಟು ಅಂತ್ಯ ಮಾಡಿದೆ. ನಿರಂತರವಾಗಿ ಷೇರುಪೇಟೆಯಲ್ಲಿ ಕರಡಿ ಕುಣಿತ ಕಾಣುತ್ತಿದೆ. ನಿಫ್ಟಿ ಸುಮಾರು 17800ರ ಸಮೀಪಕ್ಕೆ ಇಳಿದಿದೆ. ಇನ್ನೂ ಕೂಡಾ ಷೇರುಪೇಟೆ ಕುಸಿಯುವ ಸಾಧ್ಯತೆಯಿದೆ," ಎಂದು ಕೆಆರ್‌ ಚೋಕ್ಸಿ ಹೇಳಿದೆ.

 ಬ್ಯಾಂಕ್ ನಿಫ್ಟಿ ಕುಸಿತ

ಬ್ಯಾಂಕ್ ನಿಫ್ಟಿ ಕುಸಿತ

ಇನ್ನು ಕೆಆರ್‌ ಚೋಕ್ಸಿ ಪ್ರಕಾರ, "ಬ್ಯಾಂಕ್ ನಿಫ್ಟಿ ನಿರಂತರವಾಗಿ ಕುಸಿಯುತ್ತಿದೆ. ಬ್ಯಾಂಕ್ ನಿಫ್ಟಿ ಸುಮಾರು ಶೇಕಡ 0.49ರಷ್ಟು ಇಳಿಕೆಯಾಗಿದೆ. ಬೆಲೆಯಲ್ಲಿ ಕುಸಿತವಾದರೆ ಹೂಡಿಕೆದಾರರು ನಷ್ಟದೊಂದಿಗೆ ಖರೀದಿ ಮಾಡಬೇಕಾಗುತ್ತದೆ," ಎಂದು ಹೇಳಿದೆ. ಒಟ್ಟಾರೆಯಾಗಿ ಷೇರುಪೇಟೆಯ ಸದ್ಯದ ಸ್ಥಿತಿ ಉತ್ತಮವಾಗಿಲ್ಲ ಎಂದು ಬ್ರೋಕರೇಜ್ ಕೆಆರ್‌ ಚೋಕ್ಸಿ ತಿಳಿಸಿದೆ.

English summary

ICICI Securities Recommended Stocks, You Could Buy Next Week, Details in Kannada

ICICI Securities Recommended Stocks, Here are a list of stocks recommended by ICICI Securities, which could be attractive buys next week. Details in Kannada.
Story first published: Saturday, December 24, 2022, 12:31 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X