ಬ್ಯಾಂಕಿಂಗ್ ವ್ಯವಹಾರ ನಡೆಸುವ ಬಹುತೇಕರು ವ್ಯವಹಾರಕ್ಕೆ ಕಾರ್ಡ್ ಬಳಸುತ್ತಾರೆ. ಡೆಬಿಟ್ , ಕ್ರೆಡಿಟ್ ಕಾರ್ಡ್‌ಗಳು ಎಲ್ಲರ ಬಳಿ ಸಾಮಾನ್ಯವಾಗಿಬಿಟ್ಟಿದೆ. ಆದರೆ ರಿಸರ್ವ್ ಬ್ಯಾಂಕ್ ಇಂಡಿಯಾ (ಆರ್‌ಬಿಐ) ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಹೊಸ ನಿಯಮ ಪರಿಚಯಿಸಿದೆ. ಈಗಿರುವ ಕಾರ್ಡ್ ಬಳಕೆಯ ಸ್ವರೂಪದಲ್ಲಿ ಭಾರೀ ಬದಲಾವಣೆ ಜಾರಿಗೊಳಿಸಿದೆ.
ಆರ್‌ಬಿಐನ ಈ ಹೊಸ ನಿಯಮ ಏಕೆ?
ಡೆಬಿಟ್ , ಕ್ರೆಡಿಟ್ ಕಾರ್ಡ್ ಭದ್ರತೆ ಹೆಚ್ಚಿಸಲು ಆರ್‌ಬಿಐ ಬಳಕೆದಾರರಿಗೆ ಅನುಕೂಲವಾಗುವಂತೆ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಅಂದರೆ ಕಾರ್ಡ್‌ಗಳು ಬಳಕೆಯಾಗುತ್ತಿರುವ ಸ್ವರೂಪವನ್ನು ಬದಲಾವಣೆ ತರವುದು ಇದರ ಪ್ರಮುಖ ಉದ್ದೇಶ.
ವಹಿವಾಟುಗಳಲ್ಲಿ ತರಲಿದೆ ಬದಲಾವಣೆ
ಕಾರ್ಡ್‌ದಾರರು ದೇಶಿ ಅಥವಾ ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಕಾರ್ಡ್‌ಗಳನ್ನು ಬಳಸದೆ ವಹಿವಾಟು ನಡೆಸಲು, ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಕಾರ್ಡ್ ಬಳಸಿ ವಹಿವಾಟು ನಡೆಸಲು ಮತ್ತು ಚಿಪ್ ಕಾರ್ಡ್ ಅಥವಾ ಕಾಂಟ್ಯಾಕ್ಟ್ ಲೆಸ್ ವಹಿವಾಟುಗಳಲ್ಲಿ ತಮಗೆ ಬೇಕಿರುವುದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಗ್ರಾಹಕರಿಗೆ ದೊರೆಯಲಿದೆ.
ಆನ್‌ಲೈನ್ ವಹಿವಾಟು ನಡೆಸದಿದ್ದರೆ ಕಾರ್ಡ್ ಬ್ಲಾಕ್
ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರು ಈವರೆಗೆ ಯಾವುದೇ ಆನ್‌ಲೈನ್ ವಹಿವಾಟು ನಡೆಸದೆಯೇ ಇದ್ದಲ್ಲಿ ಅಂತಹ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು ಮಾರ್ಚ್ 16ರಿಂದ ಬ್ಲಾಕ್ ಆಗಲಿವೆ. ಒಮ್ಮೆ ಬ್ಲಾಕ್ ಆದರೆ ಬಳಕೆದಾರರು ತಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ನಗದುರಹಿತ ವಹಿವಾಟು ಪುನರಾರಂಭಿಸಲು ಮತ್ತೆ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಬೇಕಾಗಿದೆ.
ನೂತನ ನಿಯಮ ಮಾರ್ಚ್ 16ರಿಂದ ಜಾರಿ
ಆರ್‌ಬಿಐನ ಈ ನೂತನ ನಿಯಮ ಮಾರ್ಚ್ 16ರಿಂದ ಜಾರಿಗೆ ಬರಲಿವೆ. ದೇಶದಲ್ಲಿ 80 ಕೋಟಿ ಡೆಬಿಟ್ ಕಾರ್ಡ್ ಮತ್ತು 5 ಕೋಟಿ ಕ್ರೆಡಿಟ್ ಕಾರ್ಡ್‌ಗಳು ಬಳಕೆಯಾಗುತ್ತಿವೆ. ಈ ಎಲ್ಲ ಕಾರ್ಡ್‌ಗಳಿಗೂ ಹೊಸ ನಿಯಮ ಅನ್ವಯವಾಗಲಿದೆ. ಇತ್ತೀಚಿನ ವರ್ಷಗಳಲ್ಲಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ನಡೆಯುವ ವಹಿವಾಟಿನ ಪ್ರಮಾಣ ಹೆಚ್ಚಾಗಿದೆ.
ಗ್ರಾಹಕರಿಗೆ ಆಯ್ಕೆ ಮಾಡಿಕೊಳ್ಳುವ ಅವಕಾಶ
ಕಾರ್ಡ್‌ಗಳನ್ನು ಸಕ್ರಿಯಗೊಳಿಸುವ, ಸ್ಥಗಿತಗೊಳಿಸುವ, ಅಂತಾರಾಷ್ಟ್ರೀಯ ವಹಿವಾಟು, ಪಿಓಎಸ್, ಎಟಿಎಂ, ಆನ್‌ಲೈನ್, ಚಿಪ್ ಕಾರ್ಡ್ ವಹಿವಾಟುಗಳನ್ನು ನಿರ್ಧರಿಸುವ ಅವಕಾಶ ಗ್ರಾಹಕರಿಗೆ ದೊರೆಯಲಿದೆ. ಡಿಜಿಟಲ್ ವಹಿವಾಟಿನ ಭದ್ರತೆ ಹೆಚ್ಚಿಸಲು ನೆರವಾಗುವ ದೃಷ್ಟಿಯಲ್ಲಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಅಗತ್ಯಕ್ಕೆ ಅನುಗುಣವಾಗಿ ಸಕ್ರಿಯ ಮತ್ತು ಸ್ಥಗಿತ ಮಾಡುವ ಅವಕಾಶವನ್ನು ಗ್ರಾಹಕನಿಗೆ ನೀಡಲಾಗಿದೆ.
ಕಾರ್ಡ್ ಬ್ಲಾಕ್ ಯಾರಿಗೆ?
ಭಾರತೀಯ ರಿಸರ್ವ್ ಬ್ಯಾಂಕ್‌ನ ಈ ಹೊಸ ನಿಯಮವು ಭಾರತೀಯ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರುವ ಎಲ್ಲರಿಗೂ ಅನ್ವಯವಾಗಲಿದೆ. ಬ್ಯಾಂಕ್‌ನಿಂದ ಕಾರ್ಡ್ ಸ್ವೀಕರಿಸಿ ಆನ್‌ಲೈನ್ ವ್ಯವಹಾರಗಳಿಗೆ ಬಳಸದೇ ಇದ್ದವರಿಗೆ ಇದು ಅನ್ವಯವಾಗುತ್ತದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications