For Quick Alerts
ALLOW NOTIFICATIONS  
For Daily Alerts

ನಿಯಮ ಉಲ್ಲಂಘಿಸಿದ್ದಲ್ಲಿ ಅಮೆಜಾನ್, ಫ್ಲಿಪ್ ಕಾರ್ಟ್ ವಿರುದ್ಧ ಕ್ರಮಕ್ಕೆ ಕೇಂದ್ರ ಸೂಚನೆ

|

ಭಾರತದ ವರ್ತಕರಿಗೆ ಇ ಕಾಮರ್ಸ್ ದಿಗ್ಗಜ ಕಂಪೆನಿಗಳ ವಿರುದ್ಧ ಪ್ರಮುಖ ಮುನ್ನಡೆ ಸಿಕ್ಕಿದೆ. ಜಾರಿ ನಿರ್ದೇಶನಾಲಯ (ಇ.ಡಿ.) ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ನಿರ್ದೇಶನ ನೀಡಿರುವ ಕೇಂದ್ರ ಸರ್ಕಾರ, ಅಮೆಜಾನ್ ಮತ್ತು ವಾಲ್ ಮಾರ್ಟ್ ಒಡೆತನದ ಫ್ಲಿಪ್ ಕಾರ್ಟ್ ವಿರುದ್ಧ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದೆ.

ಅಖಿಲ ಭಾರತ ವರ್ತಕರ ಒಕ್ಕೂಟದ (CAIT) ವಿವಿಧ ದೂರುಗಳನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಅದರಲ್ಲೂ ಈ ಕಂಪೆನಿಗಳಿಂದ ಎಫ್ ಡಿಐ ನಿಯಮಗಲು ಮತ್ತು ಫೆಮಾ ಕಾಯ್ದೆ ಉಲ್ಲಂಘನೆ ಆಗಿದೆ ಎಂಬ ಆರೋಪ ದೊಡ್ಡ ಮಟ್ಟದಲ್ಲಿ ಕೇಳಿಬಂದಿತ್ತು.

ಇ ಕಾಮರ್ಸ್ ಕಂಪೆನಿ ಅಮೆಜಾನ್ ಗೆ ದಂಡ ವಿಧಿಸಿದ ಸರ್ಕಾರಇ ಕಾಮರ್ಸ್ ಕಂಪೆನಿ ಅಮೆಜಾನ್ ಗೆ ದಂಡ ವಿಧಿಸಿದ ಸರ್ಕಾರ

ಸಿಎಐಟಿ ರಾಷ್ಟ್ರೀಯ ಅಧ್ಯಕ್ಷ ಬಿ.ಸಿ. ಭಾರ್ತಿಯಾ ಮತ್ತು ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ ವಾಲ್ ಈ ಬಗ್ಗೆ ಮಾಹಿತಿ ನೀಡಿ, ಈಚೆಗೆ ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ವಿರುದ್ಧ ಸಿಎಐಟಿಯಿಂದ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಅವರಿಗೆ ದೂರು ನೀಡಲಾಗಿತ್ತು. ಇದೀಗ ಡಿಸೆಂಬರ್ ನಲ್ಲಿ ಡಿಪಿಐಐಟಿಯಿಂದ ಪತ್ರ ಬರೆದು, ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ವಿರುದ್ಧ ಅಗತ್ಯ ಕ್ರಮಕ್ಕೆ ಇ.ಡಿ. ಮತ್ತು ಆರ್ ಬಿಐಗೆ ಕೇಳಲಾಗಿದೆ ಎಂದು ತಿಳಿಸಿದ್ದಾರೆ.

ನಿಯಮ ಉಲ್ಲಂಘಿಸಿದ್ದಲ್ಲಿ ಅಮೆಜಾನ್, ಫ್ಲಿಪ್ ಕಾರ್ಟ್ ಕ್ರಮಕ್ಕೆ ಸೂಚನೆ

ಎಫ್ ಡಿಐ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿರುವ ನಾಲ್ಕು ದೂರುಗಳನ್ನು ಸಿಎಐಟಿಯಿಂದ ಸಲ್ಲಿಸಲಾಗಿತ್ತು ಎಂದು ಮಾಹಿತಿ ನೀಡಲಾಗಿದೆ. ಇನ್ನು 2021ನೇ ಇಸವಿಯನ್ನು "ಭಾರತೀಯ ಸಮ್ಮಾನ್ ವರ್ಷ್" ಎಂದು ಆಚರಿಸಲು ತೀರ್ಮಾನಿಸಲಾಗಿದೆ. ಆ ಮೂಲಕ ಇ ಕಾಮರ್ಸ್ ಮೂಲಕ ನಡೆಯುತ್ತಿರುವ ವ್ಯವಹಾರ ತೊಡೆಯಲು ನಿರ್ಧರಿಸಲಾಗಿದೆ.

English summary

India Government Directs ED And RBI To Take Necessary Action Against Amazon And Flipkart

India government directs probe agency and regulator to take necessary action against Amazon and Walmart owned Flipkart for violation of rules.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X