For Quick Alerts
ALLOW NOTIFICATIONS  
For Daily Alerts

ಕ್ರಿಪ್ಟೋಕರೆನ್ಸಿ ನಿಷೇಧಿಸಲು ಸಜ್ಜಾದ ಭಾರತ: ನಿಯಮ ಉಲ್ಲಂಘಿಸಿದರೆ ಏನು ಶಿಕ್ಷೆ?

|

ಭಾರತದಲ್ಲಿ ಬಿಟ್‌ಕಾಯಿನ್‌ನಂತಹ ಕ್ರಿಪ್ಟೋಕರೆನ್ಸಿ ನಿಷೇಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ನಿಯಮ ಉಲ್ಲಂಘಿಸಿ ಕಾನೂನುಬಾಹಿರ ವಹಿವಾಟಿನಲ್ಲಿ ತೊಡಗಿಸಿಕೊಂಡರೆ ದಂಡ ವಿಧಿಸುವ ಮತ್ತು ಅಂತಹ ಡಿಜಿಟಲ್ ಆಸ್ತಿಗಳನ್ನು ವಶಪಡಿಸಿಕೊಳ್ಳಲು ನೂತನ ಕರಡು ಮಸೂದೆಯನ್ನು ಪ್ರಸ್ತಾಪಿಸಿದೆ.

ದೇಶದಲ್ಲಿ ಕ್ರಿಪ್ಟೋಕರೆನ್ಸಿ ನಿಷೇಧಕ್ಕೆ ಕರಡು ಮಸೂದೆಯನ್ನು ಸಿದ್ಧಪಡಿಸಲಾಗಿದ್ದು, ಜಗತ್ತಿನಲ್ಲೇ ಕಟ್ಟುನಿಟ್ಟಾದ ನೀತಿ ಜಾರಿಯಾಗಲಿದೆ. ಡಿಜಿಟಲ್ ಕರೆನ್ಸಿ ಕಾನೂನು ಚೌಕಟ್ಟು ನಿರ್ಮಿಸುವ ಮೂಲಕ ಖಾಸಗಿ ವರ್ಚುವಲ್ ಕರೆನ್ಸಿಗಳನ್ನು ನಿಷೇಧಿಸಲು ಸರ್ಕಾರ ಮುಂದಾಗಿದೆ.

ಅಧಿಕೃತ ಡಿಜಿಟಲ್ ಕರೆನ್ಸಿಗೆ ಚೌಕಟ್ಟನ್ನು ನಿರ್ಮಿಸುವಾಗ ಬಿಟ್‌ಕಾಯಿನ್‌ನಂತಹ ಖಾಸಗಿ ವರ್ಚುವಲ್ ಕರೆನ್ಸಿಗಳನ್ನು ನಿಷೇಧಿಸಲು ಕರೆ ನೀಡಿದ್ದು, ಕಾರ್ಯಸೂಚಿಗೆ ಈ ಕ್ರಮವು ಅನುಗುಣವಾಗಿದೆ.

ಕ್ರಿಪ್ಟೋಕರೆನ್ಸಿ ನಿಷೇಧಿಸಲು ಸಜ್ಜಾದ ಭಾರತ

ಮಸೂದೆಯು ಕ್ರಿಪ್ಟೋಕರೆನ್ಸಿಗಳನ್ನು ಹೊಂದಿರುವವರಿಗೆ ದಿವಾಳಿಯಾಗಲು ಆರು ತಿಂಗಳವರೆಗೆ ಅವಕಾಶ ನೀಡುತ್ತದೆ. ಅದರ ನಂತರ ದಂಡ ವಿಧಿಸಲಾಗುತ್ತದೆ ಎಂದು ಹೇಳಿದೆ. ಮಸೂದೆಯ ವಿಷಯಗಳು ಸಾರ್ವಜನಿಕವಾಗಿಲ್ಲದ ಕಾರಣ ಹೆಸರಿಸಬಾರದೆಂದು ಈ ಕುರಿತು ತಿಳಿದ ಅಧಿಕಾರಿಗಳು ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ಕ್ರಿಪ್ಟೋಕರೆನ್ಸಿ ವಹಿವಾಟಿಗೆ ಏನು ಶಿಕ್ಷೆ?
2019ರ ಸರ್ಕಾರಿ ಸಮಿತಿಯು, ಕ್ರಿಪ್ಟೋಕರೆನ್ಸಿ ಮೂಲಕ ಎಲ್ಲಾ ಸ್ವರೂಪದ ವಹಿವಾಟು ನಿಷೇಧ ನಿಯಮವನ್ನು ಉಲ್ಲಂಘಿಸಿದರೆ 10 ವರ್ಷ ಜೈಲು ಶಿಕ್ಷೆಯನ್ನು ಶಿಫಾರಸು ಮಾಡಿದೆ

ಹೊಸ ಮಸೂದೆಯಲ್ಲಿ ದಂಡ ಮತ್ತು ಜೈಲು ಶಿಕ್ಷೆಯನ್ನು ಹೊಂದಿದ್ದು, ಅಧಿಕೃತ ಪ್ರಕಟಣೆ ಬಾಕಿ ಇದೆ. ಇನ್ನು ಈ ಕಾನೂನು ಜಾರಿಯಾದಲ್ಲಿ ಕ್ರಿಪ್ಟೋಕರೆನ್ಸಿಯನ್ನು ಕಾನೂನುಬಾಹಿರಗೊಳಿಸಿದ ಮೊದಲ ಆರ್ಥಿಕತೆ ಭಾರತವಾಗಲಿದೆ.

English summary

India Is Set To Propose Cryptocurrency Ban: RBI To Government

India's government is now planning to propose a new bill which will not only ban digital money but will also fine anyone trading in the country or even holding such digital assets.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X