"ಭಾರತದಲ್ಲಿ ಜನರ ಆದಾಯವನ್ನು ಹೆಚ್ಚಳ ಮಾಡಬೇಕಾದರೆ ಮತ್ತು ಇನ್ನಷ್ಟು ಉದ್ಯೋಗವನ್ನು ಸೃಷ್ಟಿ ಮಾಡಬೇಕಾದರೆ ಭಾರತವು ಮುಂದಿನ 25 ವರ್ಷಗಳಲ್ಲಿ ಸುಮಾರು ಶೇಕಡ 8-10ರಷ್ಟು ಬೆಳವಣಿಗೆ ಹೊಂದಬೇಕು," ಎಂದು ಸಿಂಗಾಪುರ ಹಿರಿಯ ಸಚಿವ ತಾರ್‌ಮನ್ ಶಣ್ಮುಗರತ್ನಮ್ ಹೇಳಿದ್ದಾರೆ.
ಶುಕ್ರವಾರ ದೆಹಲಿಯಲ್ಲಿ ನಡೆದ ಅರುಣ್ ಜೇಟ್ಲಿ ಸ್ಮಾರಕ ಉಪನ್ಯಾಸದಲ್ಲಿ ಸಿಂಗಾಪುರ ಹಿರಿಯ ಸಚಿವ ತಾರ್‌ಮನ್ ಶಣ್ಮುಗರತ್ನಮ್ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡಾ ಭಾಗಿಯಾಗಿದ್ದರು.
"ಒಂದೇ ಸಂದರ್ಭದಲ್ಲಿ ಜೊತೆಯಾಗಿ ಜನರ ಆದಾಯವನ್ನು ಹೆಚ್ಚಳ ಮಾಡಲು ಹಾಗೂ ಅಧಿಕ ಉದ್ಯೋಗವನ್ನು ಸೃಷ್ಟಿ ಮಾಡಲು ಭಾರತ ಇನ್ನೂ ಕೂಡಾ ಸುಮಾರು ಶೇಕಡ 8-10ರಷ್ಟು ಬೆಳವಣಿಗೆ ಹೊಂದಬೇಕಾಗುತ್ತದೆ. ಅದು ಕೂಡಾ ಮುಂದಿನ 25 ವರ್ಷದಲ್ಲಿ ಈ ಬೆಳವಣಿಗೆಯನ್ನು ಸಾಧಿಸಬೇಕಾಗುತ್ತದೆ," ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಉದ್ಯೋಗ ಸೃಷ್ಟಿ ಮೇಲೆ ಭಾರತದ ಗಮನ ಅಗತ್ಯ
"ಭಾರತವು ಉತ್ಪಾದನೆ ಹಾಗೂ ಉದ್ಯೋಗ ಸೃಷ್ಟಿ, ಎರಡರ ಮೇಲೂ ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ಭಾರತ ಉತ್ಪಾದನಾ ಬೆಳವಣಿಗೆ ಹೊಂದುವುದು ಮುಖ್ಯವಾಗಿದೆ. ಏಕೆಂದರೆ ದೇಶ ಬೆಳವಣಿಗೆ ಹೊಂದಲು ಇದು ಒಂದೇ ದಾರಿಯಾಗಿದೆ. ಆದರೆ ಉದ್ಯೋಗ ಸೃಷ್ಟಿ ಇನ್ನೂ ಬಹಳ ಅಧಿಕವಾಗಬೇಕಾಗಿದೆ. ಇದರಿಂದ ಬೆಳವಣಿಗೆ ಹೊಂದಲು ಸಾಧ್ಯವಾಗಲಿದೆ," ಎಂದು ಹೇಳಿದರು.
25 ವರ್ಷಗಳ ಕಾಲ ಭಾರತವು ಸವಾಲನ್ನು ಎದುರಿಸಬೇಕಾಗುತ್ತದೆ. ಆ ಸವಾಲನ್ನು ಸರಿಯಾದ ರೀತಿಯಲ್ಲಿ ಎದುರಿಸಿದರೆ, ಮುಂದೆ ದೇಶವು ಹೊಸ ಪತದಲ್ಲಿ ಸಾಗಲಿದೆ ಎಂದು ಕೂಡಾ ತಿಳಿಸಿದರು. ಭಾರತವು ಪ್ರಮುಖವಾಗಿ ಕೃಷಿಯ ಮೇಲೆ ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications