For Quick Alerts
ALLOW NOTIFICATIONS  
For Daily Alerts

ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ. 20.1ರಷ್ಟು ಬೆಳೆದ ಭಾರತದ ಜಿಡಿಪಿ

|

ಭಾರತದ ಆರ್ಥಿಕತೆಯ ಕುರಿತು ಶುಭ ಸುದ್ದಿ ಬಂದಿದೆ. ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್- ಜೂನ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ದರವು ವರ್ಷದಿಂದ ವರ್ಷಕ್ಕೆ ಶೇಕಡಾ 20.1ರಷ್ಟಿದೆ.

 

ದೇಶದ ಜಿಡಿಪಿ ಬೆಳವಣಿಗೆ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಲಿದೆ ಎಂದು ಈ ಹಿಂದೆಯೇ ಊಹಿಸಲಾಗಿತ್ತು. ರಾಯಿಟರ್ಸ್ ಸಮೀಕ್ಷೆಯ ಪ್ರಕಾರ, ಆಗಸ್ಟ್ 20 ರಿಂದ 25 ರವರೆಗಿನ 41 ಅರ್ಥಶಾಸ್ತ್ರಜ್ಞರ ಸಮೀಕ್ಷೆಯು ಭಾರತದ ಜಿಡಿಪಿ ಮೂರು ತಿಂಗಳ ಅವಧಿಯಲ್ಲಿ ಶೇಕಡಾ 20.0 ರಷ್ಟು ಬೆಳವಣಿಗೆಯಾಗಬಹುದೆಂದು ಭವಿಷ್ಯ ನುಡಿದಿದ್ದು, ಇದೀಗ ಆ ಅಂಕಿ ಅಂಶಗಳು ನಿಜವಾಗಿದೆ. ಒಂದು ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ ದಾಖಲೆಯ ಶೇಕಡಾ 24.4ರಷ್ಟು ಇಳಿಕೆಯಾಗಿದೆ.

ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ. 20.1ರಷ್ಟು ಬೆಳೆದ ಭಾರತದ ಜಿಡಿಪಿ

ಜೂನ್ ತ್ರೈಮಾಸಿಕದಲ್ಲಿ ಜಿಡಿಪಿಯಲ್ಲಿ ವರ್ಷದಿಂದ ವರ್ಷಕ್ಕೆ ಶೇ 21.6 ರಷ್ಟು ಬೆಳವಣಿಗೆಯನ್ನು ಆರ್ ಬಿಐ ಅಂದಾಜಿಸಿತ್ತು. ಜಿಡಿಪಿ ದರ ಭಾರೀ ಏರಿಕೆಗೆ ಪ್ರಮುಖ ಕಾರಣ ಕಳೆದ ವರ್ಷದಲ್ಲಿ ಮೊದಲ ತ್ರೈಮಾಸಿಕದಲ್ಲಿ ಭಾರೀ ಕುಸಿತವು ಕಾರಣವಾಗಿದೆ.

ಕಳೆದ ವರ್ಷದ ಹಣಕಾಸು ವರ್ಷದಲ್ಲಿ ಮೊದಲ ತ್ರೈಮಾಸಿಕದಲ್ಲಿ ಕರೋನವೈರಸ್ ಹರಡುವುದನ್ನು ತಡೆಯಲು ದೇಶಾದ್ಯಂತ ಲಾಕ್‌ಡೌನ್ ವಿಧಿಸಿದ್ದರಿಂದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ 24.4 ಪ್ರತಿಶತದಷ್ಟು ಕುಗ್ಗಿತ್ತು. ಇದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಆರ್ಥಿಕತೆಯಲ್ಲಿ ಕಂಡಂತಹ ಅತ್ಯಂತ ಕಡಿಮೆ ತ್ರೈಮಾಸಿಕ ಜಿಡಿಪಿ ದರವಾಗಿತ್ತು.

ಆದರೆ ಈಗ ರಾಯಿಟರ್ಸ್‌ ಸಮೀಕ್ಷೆ ನಿಜವಾಗಿದ್ದು, 41 ಅರ್ಥಶಾಸ್ತ್ರಜ್ಞರ ಸಮೀಕ್ಷೆಯ ಪ್ರಕಾರ, 2021 ರ ಏಪ್ರಿಲ್-ಜೂನ್ ನಲ್ಲಿ ಭಾರತದ ಜಿಡಿಪಿ 20 ಪ್ರತಿಶತ ಏರಿಕೆಯಾಗುವ ನಿರೀಕ್ಷೆಯಿದೆ. ಎನ್ನಲಾಗಿತ್ತು.

ಕೋವಿಡ್ ಹಿಂಜರಿತದಿಂದ ಭಾರತ ಹೊರಬಂದಿಲ್ಲ

ಕೋವಿಡ್ ಹಿಂಜರಿತದಿಂದ ಭಾರತ ಹೊರಬಂದಿಲ್ಲ

ಭಾರತದ ತ್ರೈಮಾಸಿಕದ ಸ್ಥಿರ ಬೆಲೆಗಳಲ್ಲಿ (2011-12) ಮೊದಲ ತ್ರೈಮಾಸಿಕದಲ್ಲಿ ರೂ. 32.38 ಲಕ್ಷ ಕೋಟಿಯಷ್ಟಿತ್ತು, ಆದರೂ ಇದು 2019-20ರ ಮೊದಲ ತ್ರೈಮಾಸಿಕದಲ್ಲಿ ರೂ. 35.66 ಲಕ್ಷ ಕೋಟಿಗಿಂತಲೂ ಕಡಿಮೆಯಾಗಿದೆ. ಇದು ಕೋವಿಡ್‌ನಿಂದ ಉಂಟಾದ ಹಿಂಜರಿತದಿಂದ ಭಾರತ ಇನ್ನೂ ಹೊರಬಂದಿಲ್ಲ ಎಂದು ತಿಳಿಸಿದೆ.

ನಿರ್ಮಾಣ ಕ್ಷೇತ್ರದ GVA (ಒಟ್ಟು ಮೌಲ್ಯವರ್ಧಿತ) ಹಿಂದಿನ ವರ್ಷಕ್ಕಿಂತ 68.3% ಬೆಳವಣಿಗೆಯಾಗಿದೆ. ಮತ್ತೊಂದೆಡೆ, ಸೇವಾ ವಲಯದ GVA ಹಿಂದಿನ ವರ್ಷದ ಅವಧಿಯಲ್ಲಿ 3.7% ಬೆಳವಣಿಗೆಯಾಗಿದೆ. ಹಿಂದಿನ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು 1.6% ಬೆಳವಣಿಗೆಯಾಗಿದೆ. ಅದೇ ಸಮಯದಲ್ಲಿ, 2020-21ರ ಸಂಪೂರ್ಣ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ 7.3% ಇಳಿಕೆಯಾಗಿದೆ.

 

ಎಂಟು ಪ್ರಮುಖ ವಲಯಗಳು
 

ಎಂಟು ಪ್ರಮುಖ ವಲಯಗಳು

ಏಪ್ರಿಲ್ 2021 ರ ಎಂಟು ಕೋರ್ ಇಂಡಸ್ಟ್ರಿಗಳ ಸೂಚಿಯನ್ನು ಅದರ ತಾತ್ಕಾಲಿಕ ಮಟ್ಟ ಶೇಕಡಾ 56.1 ರಿಂದ ಶೇಕಡಾ 62.6 ಕ್ಕೆ ಪರಿಷ್ಕರಿಸಲಾಗಿದೆ. ಎಂಟು ಪ್ರಮುಖ ವಲಯಗಳಲ್ಲಿ ಉತ್ಪಾದನೆಯು ಜುಲೈನಲ್ಲಿ ಶೇ. 9.4ರಷ್ಟು ಬೆಳವಣಿಗೆಯಾಗಿದೆ. ಇದರ ಹಿಂದಿನ ಕಾರಣವೆಂದರೆ 2020 ರ ಅದೇ ತಿಂಗಳಲ್ಲಿ ಕಡಿಮೆ-ಬೇಸ್ ಆಗಿತ್ತು. ಎರಡನೇ ತರಂಗದ ನಂತರ ನಿರ್ಬಂಧಗಳಲ್ಲಿನ ಪರಿಹಾರದ ದೃಷ್ಟಿಯಿಂದ ಎಂಟು ಕ್ಷೇತ್ರಗಳಲ್ಲಿ ಏಳು ಸಕಾರಾತ್ಮಕ ಬೆಳವಣಿಗೆಯನ್ನು ಕಂಡಿದೆ.

ಕಚ್ಚಾ ತೈಲ ಉದ್ಯಮವನ್ನು ಹೊರತುಪಡಿಸಿ, ಉಳಿದೆಲ್ಲವು ವರ್ಷದಿಂದ ವರ್ಷಕ್ಕೆ ಏರಿಕೆಯನ್ನು ತೋರಿಸಿದೆ. ಸಿಮೆಂಟ್ ಉದ್ಯಮವು ಶೇ .21.8 ರಷ್ಟು ಬೆಳವಣಿಗೆಯನ್ನು ತೋರಿಸಿದೆ, ಉಕ್ಕಿನ ಉದ್ಯಮವು ಶೇಕಡಾ 9.3 ರಷ್ಟು ಯೋಗ್ಯವಾದ ಬೆಳವಣಿಗೆಯನ್ನು ತೋರಿಸಿದೆ. ಈ ಎಂಟು ವಲಯಗಳಲ್ಲಿ ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಸಂಸ್ಕರಣಾ ಉತ್ಪನ್ನಗಳು, ಉಕ್ಕು, ಸಿಮೆಂಟ್, ರಸಗೊಬ್ಬರಗಳು ಮತ್ತು ವಿದ್ಯುತ್ ಸೇರಿವೆ.

 

ವಿತ್ತೀಯ ಕೊರತೆ

ವಿತ್ತೀಯ ಕೊರತೆ

2021-22ರ ಆರ್ಥಿಕ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಅಂದರೆ ಏಪ್ರಿಲ್-ಜುಲೈನಲ್ಲಿ ಆದಾಯ ಕೊರತೆಯು 3.21 ಲಕ್ಷ ಕೋಟಿ ರೂ. ($ 43.98 ಬಿಲಿಯನ್) ಆಗಿತ್ತು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಇಡೀ ವರ್ಷದ ಬಜೆಟ್ ಕೊರತೆಯ ಗುರಿಯು ಶೇಕಡಾ 21.3 ರಷ್ಟಿದೆ. ನಿವ್ವಳ ತೆರಿಗೆ ರಶೀದಿಗಳು (ತೆರಿಗೆ ಸಂಗ್ರಹ) 5.21 ಲಕ್ಷ ಕೋಟಿಯಷ್ಟಿದ್ದು, ಒಟ್ಟು ವೆಚ್ಚವು 10.04 ಲಕ್ಷ ಕೋಟಿಯಷ್ಟಿದೆ ಎಂದು ಡೇಟಾ ತೋರಿಸುತ್ತದೆ.

ಏಪ್ರಿಲ್-ಜುಲೈ ಅವಧಿಯಲ್ಲಿ ಒಟ್ಟು ಸ್ವೀಕೃತಿಗಳು 6,83,297 ಕೋಟಿ ರೂ., ಇದು ಬಜೆಟ್ ಅಂದಾಜು 2021-22ರ ಶೇಕಡಾ 34.6ರಷ್ಟಿದೆ. ಇದರಲ್ಲಿ 5,29,189 ಕೋಟಿ ತೆರಿಗೆ ಆದಾಯ, 1,39,960 ಕೋಟಿ ತೆರಿಗೆ ರಹಿತ ಆದಾಯ ಮತ್ತು 14,148 ಕೋಟಿ ಸಾಲ ರಹಿತ ಬಂಡವಾಳ ಸ್ವೀಕೃತಿಗಳು ಸೇರಿವೆ. ಸಾಲ ರಹಿತ ಬಂಡವಾಳದ ರಸೀದಿಗಳಲ್ಲಿ 5,777 ಕೋಟಿ ರೂಪಾಯಿಗಳ ಸಾಲ ಮರುಪಾವತಿ ಮತ್ತು 8,371 ಕೋಟಿ ಬಂಡವಾಳ ಹೂಡಿಕೆಯ ಆದಾಯ ಸೇರಿವೆ.

ನಿವ್ವಳ ತೆರಿಗೆ ರಶೀದಿ 5.21 ಲಕ್ಷ ಕೋಟಿ ರೂಪಾಯಿಗಳಾಗಿದ್ದರೆ, ಒಟ್ಟು ಖರ್ಚು 10.04 ಲಕ್ಷ ಕೋಟಿ ರೂ. ಎಂದು ಡೇಟಾ ತೋರಿಸಿದೆ.

 

ಆರ್ಥಿಕ ಚಟುವಟಿಕೆಗೆ ವೇಗ, ಉದ್ಯೋಗ ದರ ಏರಿಕೆ

ಆರ್ಥಿಕ ಚಟುವಟಿಕೆಗೆ ವೇಗ, ಉದ್ಯೋಗ ದರ ಏರಿಕೆ

ಮೂಡಿಸ್ ಇನ್ವೆಸ್ಟರ್ಸ್ ಸರ್ವೀಸ್ ಮಂಗಳವಾರ ಹೇಳಿದ ಪ್ರಕಾರ ಭಾರತದ ಆರ್ಥಿಕ ಚಟುವಟಿಕೆಗಳು ಕೋವಿಡ್ ನಿರ್ಬಂಧಗಳನ್ನು ಕ್ರಮೇಣವಾಗಿ ಸಡಿಲಿಸುವುದರೊಂದಿಗೆ ಹೆಚ್ಚುತ್ತಿದೆ ಮತ್ತು ಪ್ರಪಂಚದಾದ್ಯಂತದ ಆರ್ಥಿಕತೆಗಳು ಕ್ರಮೇಣ ಪುನಃ ತೆರೆಯುವುದರಿಂದ ಬೆಳವಣಿಗೆಗೆ ಮತ್ತಷ್ಟು ಏರಿಕೆಯಾಗಬಹುದು ಎಂದು ಹೇಳಿದೆ.

CMIE ಯ ಹೌಸ್‌ಹೋಲ್ಡ್‌ ಸಮೀಕ್ಷೆಯ ಪ್ರಕಾರ, ಉದ್ಯೋಗದ ಪರಿಸ್ಥಿತಿಯು ಜೂನ್ 2021 ರ ಎರಡನೇ ವಾರದಿಂದ ಸುಧಾರಿಸುತ್ತಿದೆ. ನಿರುದ್ಯೋಗ ದರವು ಮೇ ತಿಂಗಳಲ್ಲಿ 12 ತಿಂಗಳ ಗರಿಷ್ಠ ಮಟ್ಟವಾದ ಶೇಕಡಾ 11.9ರಿಂದ ಜೂನ್ ನಲ್ಲಿ ಶೇಕಡಾ 9.17ಕ್ಕೆ ಸುಧಾರಿಸಿದೆ.

 

English summary

India records a GDP growth of 20.1% in Q1 of FY 2021-22

India’s Gross Domestic Product for the April-June quarter of the ongoing financial year 2021-22 expanded 20.1%
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X