For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಚಿಲ್ಲರೆ ಹಣದುಬ್ಬರ ಏರಿಕೆ: 5 ತಿಂಗಳಲ್ಲಿ ಗರಿಷ್ಠ ಮಟ್ಟಕ್ಕೆ!

|

ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಯಿಂದ ಅಳೆಯಲಾಗುವ ಭಾರತದ ಚಿಲ್ಲರೆ ಹಣದುಬ್ಬರ ದರವು ಡಿಸೆಂಬರ್ 2021 ರಲ್ಲಿ ಏರಿಕೆ ಕಂಡಿದೆ. ಕಳೆದ ತಿಂಗಳು ಅಂದರೆ ನವೆಂಬರ್‌ನಲ್ಲಿ ಶೇಕಡ 4.91ರಷ್ಟಿದ್ದ ಚಿಲ್ಲರೆ ಹಣದುಬ್ಬರ ಡಿಸೆಂಬರ್‌ನಲ್ಲಿ ಶೇಕಡ 5.59ಕ್ಕೆ ಏರಿಕೆ ಕಂಡಿದೆ ಎಂದು ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದ ಅಂಕಿಅಂಶಗಳು ತೋರಿಸಿದೆ.

 

ರಾಯಿಟರ್ಸ್‌ನ ಅರ್ಥಶಾಸ್ತ್ರಜ್ಞರ ಸಮೀಕ್ಷೆಯು ಭಾರತೀಯ ಚಿಲ್ಲರೆ ಹಣದುಬ್ಬರ ಶೇಕಡ 5.80ಕ್ಕೆ ಏರಿಕೆ ಎಂದು ಈಗಾಗಲೇ ಮುನ್ಸೂಚನೆ ನೀಡಿತ್ತು. ನವೆಂಬರ್‌ನಲ್ಲಿ, ಚಿಲ್ಲರೆ ಹಣದುಬ್ಬರವು ಶೇಕಡ 4.91ರವರೆಗೆ ಏರಿಕೆ ಕಂಡಿತ್ತು. ಅಕ್ಟೋಬರ್ 2021 ರಲ್ಲಿ ಶೇಕಡ 4.48ರಷ್ಟು ಇತ್ತು. ಇನ್ನು ಜುಲೈ 2021 ರಲ್ಲಿ ಭಾರತದ ಚಿಲ್ಲರೆ ಹಣದುಬ್ಬರವು ಶೇಕಡ 5.59ರಷ್ಟಿದ್ದು, ಅಕ್ಟೋಬರ್‌ನಲ್ಲಿ ಕೊಂಚ ಕಡಿಮೆ ಆಗಿತ್ತು. ಆದರೆ ಬಳಿಕ ಚಿಲ್ಲರೆ ಹಣದುಬ್ಬರ ಭಾರತದಲ್ಲಿ ನಿರಂತರವಾಗಿ ಏರಿಕೆ ಕಾಣುತ್ತಿದೆ.

 

ಟೊಮೆಟೊ, ಹಾಲು ಬೆಲೆ ಏರಿಕೆ: ಮಧ್ಯಮ ವರ್ಗದ ಮೇಲೆ ಹಣದುಬ್ಬರ ಪ್ರಭಾವ ಹೀಗಿದೆಟೊಮೆಟೊ, ಹಾಲು ಬೆಲೆ ಏರಿಕೆ: ಮಧ್ಯಮ ವರ್ಗದ ಮೇಲೆ ಹಣದುಬ್ಬರ ಪ್ರಭಾವ ಹೀಗಿದೆ

ಇಂಧನ ಮತ್ತು ವಿದ್ಯುತ್‌ ಹಣದುಬ್ಬರವು ವರ್ಷದಿಂದ ವರ್ಷಕ್ಕೆ ಶೇಕಡ 10.95ಕ್ಕೆ ಇಳಿದಿದೆ. ಅಕ್ಟೋಬರ್‌ನಲ್ಲಿ ಭಾರತದಲ್ಲಿ ಇಂಧನ ಮತ್ತು ವಿದ್ಯುತ್‌ ಹಣದುಬ್ಬರವು ಶೇಕಡ 14.35 ಆಗಿತ್ತು. ಇನ್ನ ನವೆಂಬರ್ 2021 ರಲ್ಲಿ ಶೇಕಡ 13.35ರಷ್ಟಿತ್ತು. ಆದರೆ ಅಕ್ಟೋಬರ್‌ನಲ್ಲಿ ಇಂಧನ ಮತ್ತು ವಿದ್ಯುತ್‌ ಹಣದುಬ್ಬರವು ಏರಿಕೆ ಕಂಡಿದೆ. ಆಹಾರ ಮತ್ತು ಪಾನೀಯಗಳ ಹಣದುಬ್ಬರವು ನವೆಂಬರ್‌ನಲ್ಲಿ ಶೇಕಡ 1.87ರಿಂದ ಶೇಕಡ 4.47ರಷ್ಟಿದೆ.

ಚಿಲ್ಲರೆ ಹಣದುಬ್ಬರ ಏರಿಕೆ: 5 ತಿಂಗಳಲ್ಲಿ ಗರಿಷ್ಠ ಮಟ್ಟಕ್ಕೆ!

ಈ ಮಧ್ಯೆ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಸತತ ಆರನೇ ತಿಂಗಳಿನಿಂದ ಆರ್‌ಬಿಐನ ನಿರ್ಧರಿತ ಮಟ್ಟದಲ್ಲಿಯೇ ಉಳಿದಿದೆ. ವಿತ್ತೀಯ ನೀತಿ ಸಮಿತಿಯ ಅಧಿಕೃತ ಆದೇಶದ ಪ್ರಕಾರ, ಹಣದುಬ್ಬರವು ಶೇಕಡ 2-6ರ ನಡುವೆ ಇರಬೇಕು. ಇನ್ನು ಮಧ್ಯಮ ಹಣದುಬ್ಬರ ದರವು ಶೇಕಡ 4 ಆಗಿದೆ. ಚಿಲ್ಲರೆ ಹಣದುಬ್ಬರವು ಈಗ ಎರಡು ವರ್ಷಗಳಿಗಿಂತಲೂ ಹೆಚ್ಚು ಕಾಲ ಆರ್‌ಬಿಐನ ಮಧ್ಯಮ-ಅವಧಿಯ ಗುರಿಗಿಂತ ಹೆಚ್ಚಾಗಿದೆ.

ಇನ್ನು ಈ ಹಿಂದೆಯೇ ಈ ಬಗ್ಗೆ ಮಾಹಿತಿ ನೀಡಿರುವ ಐಸಿಆರ್‌ಎದ ಅದಿತಿ ನಾಯರ್, "ಟೊಮ್ಯಾಟೊ ಹೊರತುಪಡಿಸಿ ಇತರ ಅನೇಕ ಆಹಾರ ಪದಾರ್ಥಗಳ ಬೆಲೆಗಳಲ್ಲಿನ ಇತ್ತೀಚಿನ ಬದಲಾವಣೆಯು ಹಣದುಬ್ಬರ ಹೆಚ್ಚಳಕ್ಕೆ ಕೊಂಚ ಪರಿಹಾರವನ್ನು ಒದಗಿಸಿದೆ. ವಿಶೇಷವಾಗಿ ಮುಂದೆ ಇರುವ ಪ್ರತಿಕೂಲವಾದ ಮೂಲ ಪರಿಣಾಮಗಳನ್ನು ನೀಡಲಾಗಿದೆ. ಸಿಪಿಐ ಹಣದುಬ್ಬರವು ಮುಂದಿನ ತ್ರೈಮಾಸಿಕದಲ್ಲಿ ಶೇಕಡ 5.7-6.0ರ ನಡುವೆ ಇರಲಿದೆ. ನಮ್ಮ ಮೌಲ್ಯಮಾಪನದಲ್ಲಿ, ಸಿಪಿಐ ಹಣದುಬ್ಬರವು ಶೇಕಡ 2-6ರ ಒಳಗೆ ಉಳಿಯುವವರೆಗೆ, ಎಂಪಿಸಿ ಮತ್ತು ಆರ್‌ಬಿಐ ಬೆಳವಣಿಗೆಗೆ ಆದ್ಯತೆ ನೀಡಲು, ಚೇತರಿಕೆಗೆ ಸಮರ್ಥನೀಯತೆಯನ್ನು ನೀಡಲು ನೀತಿ, ಬೆಂಬಲವನ್ನು ನಿರ್ವಹಣೆ ಮಾಡಲಿದೆ," ಎಂದು ತಿಳಿಸಿದ್ದಾರೆ.

 ದೇಶದಲ್ಲಿ ಏಕಿಷ್ಟು ದುಬಾರಿ ಜೀವನ, ಹಣದುಬ್ಬರಕ್ಕೆ ಇದೆಯೇ ಅಂತ್ಯ? ದೇಶದಲ್ಲಿ ಏಕಿಷ್ಟು ದುಬಾರಿ ಜೀವನ, ಹಣದುಬ್ಬರಕ್ಕೆ ಇದೆಯೇ ಅಂತ್ಯ?

ವಿಶ್ವದಲ್ಲಿ ಕೊರೊನಾ ವೈರಸ್‌ ಸೋಂಕು ಒಂದು ದೇಶದ ಬಳಿಕ ಮತ್ತೊಂದು ದೇಶದಲ್ಲಿ ಕಾಣಿಸಿಕೊಳ್ಳಲು ಆರಂಭವಾದ ಬಳಿಕ ಎಲ್ಲಾ ದೇಶಗಳ ಆಡಳಿತಕ್ಕೆ ಎರಡು ಸವಾಲುಗಳು ಮುಂದೆ ಇದ್ದವು. ಎಲ್ಲಾ ದೇಶದ ಆಡಳಿತವು ತಮ್ಮ ದೇಶದ ಜನರ ಜೀವವನ್ನು ಉಳಿಸುವುದು ಮಾತ್ರವಲ್ಲದೇ ಈ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಆರ್ಥಿಕ ಹಿಂಜರಿತ ಆಗದಂತೆ ಕಾಣುವುದು ಕೂಡಾ ಅತೀ ಮುಖ್ಯವಾಯಿತು. ಕೊರೊನಾ ವೈರಸ್‌ ಸೋಂಕು ಸಾಂಕ್ರಾಮಿಕವಾಗಿ ಹರಡುವ ಸಂದರ್ಭದಲ್ಲಿ ಆರ್ಥಿಕ ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸುವುದು ಹಾಗೂ ಸಾಂಕ್ರಾಮಿಕ ಹರಡುವಿಕೆಯನ್ನು ತಡೆಯುವುದು ಎರಡೂ ಕೂಡಾ ಆಡಳಿತಕ್ಕೆ ಒಂದು ಸವಾಲು ಆಗಿತ್ತು. ಭಾರತದ ಆರ್ಥಿಕತೆಯು ನಿಶ್ಚಲವಾಗಿರದೆ ಇರಬಹುದು. ಆದರೆ ಭಾರತಕ್ಕೆ ಹಣದುಬ್ಬರವು ಒಂದು ಚಿಂತೆಯಾಗಿಯೇ ಇದೆ. ಗ್ರಾಹಕ ಬೆಲೆ ಸೂಚ್ಯಂಕ ಅಥವಾ ಸಿಪಿಐ ನಿಂದ ಅಳೆಯಲಾಗುವ ಮುಖ್ಯ ಚಿಲ್ಲರೆ ಹಣದುಬ್ಬರವು ಮತ್ತಷ್ಟಿ ಏರಿಕೆ ಕಂಡಿದೆ.

English summary

India retail inflation rises to 5.59% in December From 4.91% In November

India retail inflation rises to 5.59% in December From 4.91% In November.
Story first published: Wednesday, January 12, 2022, 21:42 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X