For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಹೆಚ್ಚಿದೆ ಪ್ರತಿಭೆಗಳ ಕೊರತೆ: ಶೇ. 80ರಷ್ಟು ಸಂಸ್ಥೆಗಳ ಪರದಾಟ

|

ಭಾರತದ ಪ್ರಮುಖ ಐಟಿ ಸಂಸ್ಥೆಗಳು ಸೇರಿದಂತೆ ಅನೇಕ ಕಡೆಯಲ್ಲಿ ನಾಯಕತ್ವದ ಪ್ರತಿಭೆಗಳ ಕೊರತೆ ಎದುರಾಗಿದೆ ಎಂದು ಸಮೀಕ್ಷೆಯೊಂದು ಬಹಿರಂಗಗೊಂಡಿದೆ. ಭಾರತದ ಪ್ರಮುಖ ಪ್ರತಿಭಾ ಮೌಲ್ಯಮಾಪನ ಸಂಸ್ಥೆಯಾದ ಮರ್ಸರ್ | ಮೆಟ್ಲ್ ತನ್ನ ಇತ್ತೀಚಿನ ವರದಿ 'ಲೀಡರ್‌ಶಿಪ್ ಡೆವಲಪ್‌ಮೆಂಟ್ ಟ್ರೆಂಡ್ಸ್ 2019' ಶೀರ್ಷಿಕೆಯಡಿಯಲ್ಲಿ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಕಂಪನಿಗಳಲ್ಲಿ ನಾಯಕತ್ವದ ಕೊರತೆಯಿದೆ.

 

ಭಾರತದ ಸುಮಾರು ಶೇಕಡಾ 80ರಷ್ಟು ಸಂಸ್ಥೆಗಳು ಪ್ರಸ್ತುತ ನಾಯಕತ್ವದ ಪ್ರತಿಭೆಗಳ ಕೊರತೆಯನ್ನು ಎದುರಿಸುತ್ತಿವೆ ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ. ಏಕೆಂದರೆ ಪ್ರಸ್ತುತ ಇರುವ ನಾಯಕರು ನಿವೃತ್ತಿಯ ಹಾದಿಯಲ್ಲಿದ್ದಾರೆ ಅಥವಾ ಇನ್ನೂ ಕೆಲವರು ಆಗಾಗ್ಗೆ ಉದ್ಯೋಗಗಳನ್ನು ಬದಲಾಯಿಸಲು ಬಯಸುತ್ತಾರೆ.

ಎಲ್ಲಾ ವಲಯಗಳಲ್ಲಿ ಒಟ್ಟಾಗಿ ಸಮೀಕ್ಷೆ

ಎಲ್ಲಾ ವಲಯಗಳಲ್ಲಿ ಒಟ್ಟಾಗಿ ಸಮೀಕ್ಷೆ

ಕೃತಕ ಬುದ್ದಿಮತೆ, ಯಂತ್ರ ಕಲಿಕೆ, ಟೆಲಿಕಾಂ, ಕಮೋಡಿಟಿ, ವ್ಯಾಪಾರ, ಶಿಕ್ಷಣ, ಚಿಲ್ಲರೆ ವ್ಯಾಪಾರ, ಮಾಧ್ಯಮ ಮತ್ತು ಮನರಂಜನೆ, ವಾಹನಗಳು, ಫಾರ್ಮಾ ಮತ್ತು ಆರೋಗ್ಯ ಕ್ಷೇತ್ರ, ಮಾನವ ಸಂಪನ್ಮೂಲ, ಕೈಗಾರಿಕೆಗಳು ಹೀಗೆ ನಾನಾ ಕ್ಷೇತ್ರಗಳಲ್ಲಿ ಸಮೀಕ್ಷೆಯನ್ನು ನಡೆಸಲಾಗಿದೆ.

ಈ ಸಮೀಕ್ಷೆಯ ಉದ್ದೇಶ ಏನು?

ಈ ಸಮೀಕ್ಷೆಯ ಉದ್ದೇಶ ಏನು?

ಮರ್ಸರ್ ನಡೆಸಿದ ಸಮೀಕ್ಷೆಯ ಮೂಲ ಉದ್ದೇಶದ ಕುರಿತು ಮಾತನಾಡಿದ ಮರ್ಸರ್ ಸಿಇಒ ಸಿದ್ದಾರ್ಥ್‌ ಗುಪ್ತಾ '' 200 ಕ್ಕೂ ಹೆಚ್ಚು ಸಂಸ್ಥೆಗಳ 500 ಕ್ಕೂ ಹೆಚ್ಚು ಜನರನ್ನು ಒಳಗೊಂಡ ಈ ಸಮೀಕ್ಷೆಯು ಹಲವಾರು ನಾಯಕತ್ವ ಅಭಿವೃದ್ಧಿ ತಜ್ಞರನ್ನು ಅಡಿಯಲ್ಲಿ 'ಲೀಡರ್‌ಶಿಪ್ ಡೆವಲಪ್‌ಮೆಂಟ್ ಟ್ರೆಂಡ್ಸ್ 2019' ವರದಿಯನ್ನು ತಯಾರಿಸಲಾಗಿದೆ. ಈ ವರದಿಯ ಮೂಲಕ, ಸಂಸ್ಥೆಗಳು ಎದುರಿಸುತ್ತಿರುವ ಸವಾಲುಗಳನ್ನು ಒತ್ತಿಹೇಳುವುದು ನಮ್ಮ ಉದ್ದೇಶವಾಗಿದೆ'' ಎಂದಿದ್ದಾರೆ.

"ಈ ಸಮೀಕ್ಷೆಯು ಸ್ಥಾಪಿತ ಮತ್ತು ಮುಂಬರುವ ಕಂಪೆನಿಗಳಿಗೆ ನಾಯಕತ್ವದ ಸವಾಲುಗಳನ್ನು ಗುರುತಿಸಲು ಮತ್ತು ಪರಿಹರಿಸಲು ಅನುವು ಮಾಡಿಕೊಡುತ್ತದೆ. ಇದಲ್ಲದೆ, ಕಾರ್ಪೊರೇಟ್ ಜಗತ್ತಿನಲ್ಲಿ ಉತ್ತಮ ಸಾಧನೆ ಮಾಡಲು ಅವರು ಸೂಕ್ತವಾದ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ" ಎಂದು ಅವರು ಹೇಳಿದರು.

ಸಮೀಕ್ಷೆಯಲ್ಲಿ ಯಾರೆಲ್ಲಾ ಭಾಗಿಯಾಗಿದ್ದರು?
 

ಸಮೀಕ್ಷೆಯಲ್ಲಿ ಯಾರೆಲ್ಲಾ ಭಾಗಿಯಾಗಿದ್ದರು?

ಮರ್ಸರ್ | ಮೆಟ್ಲ್‌ನ 'ಲೀಡರ್‌ಶಿಪ್ ಡೆವಲಪ್‌ಮೆಂಟ್ ಟ್ರೆಂಡ್ಸ್ 2019' ವರದಿಯಲ್ಲಿ ಸಂಗ್ರಹಿಸಲಾದ ಮಾಹಿತಿಯಲ್ಲಿ ಸಿಎಕ್ಸ್‌ಒಗಳು, ಹೆಸರಾಂತ ನಾಯಕತ್ವ ತರಬೇತುದಾರರು ಮತ್ತು ಎಲ್ & ಡಿ ತಜ್ಞರು ಸೇರಿದಂತೆ 500 ಕ್ಕೂ ಹೆಚ್ಚು ನಾಯಕತ್ವ ತಜ್ಞರ ಸಮೀಕ್ಷೆಯನ್ನು ಆಧರಿಸಿವೆ.

ಮತ್ತಷ್ಟು ಎತ್ತರಕ್ಕೆ ತಲುಪಿದ ಚಿನ್ನದ ಬೆಲೆ: ಏಪ್ರಿಲ್ 22ರ ಬೆಲೆ ಹೀಗಿದೆ

ಉನ್ನತ ನಾಯಕತ್ವ ಅಭಿವೃದ್ಧಿ ಸವಾಲುಗಳು

ಉನ್ನತ ನಾಯಕತ್ವ ಅಭಿವೃದ್ಧಿ ಸವಾಲುಗಳು

ಬಹುತೇಕ ಸಂಸ್ಥೆಗಳು ಪ್ರಸ್ತುತ ನಾಯಕತ್ವದ ಪ್ರತಿಭೆಗಳ ಕೊರತೆಯನ್ನು ಎದುರಿಸುತ್ತಿವೆ. ಇದರಲ್ಲಿ ಹೆಚ್ಚಿನ ಸಂಸ್ಥೆಗಳು ಪರಿಣಾಮಕಾರಿ ನಾಯಕರ ತಂಡವನ್ನು ಅಭಿವೃದ್ಧಿಪಡಿಸಲು ಹೆಣಗಾಡುತ್ತಿವೆ.

ಇನ್ನು ಈಗಾಗಲೇ ಇರುವ ನಾಯಕರು (ಸುಮಾರು 50%) ನಿವೃತ್ತಿಯ ಅಂಚಿನಲ್ಲಿದ್ದಾರೆ ಅಥವಾ ಉದ್ಯೋಗಗಳನ್ನು ಬದಲಾಯಿಸಲು ಆದ್ಯತೆ ನೀಡುತ್ತಿದ್ದಾರೆ. ಈ ರೀತಿಯ ನಿರ್ಣಾಯಕ ಸವಾಲುಗಳ ನಡುವೆ ಸುಮಾರು 25% ರಷ್ಟು ಜನರು ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮಗಳ ದೀರ್ಘಾವಧಿಯನ್ನು ವರದಿ ಮಾಡಿದ್ದಾರೆ.

ಶೇಕಡಾ 40ರಷ್ಟು ಪ್ರತಿಕ್ರಿಯಿಸಿದವರು ಉತ್ತಮ ನಾಯಕತ್ವ ಸಾಮರ್ಥ್ಯದ ಚೌಕಟ್ಟನ್ನು ಹೊಂದಿಲ್ಲ ಎಂದು ಬಹಿರಂಗಪಡಿಸಿದ್ದಾರೆ.

English summary

India's 80 Percent Firms Facing Leadership Talent Shortage: Survey

This survey revealed that around 80 percent of the organisations in India are currently facing a leadership talent shortage
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X