For Quick Alerts
ALLOW NOTIFICATIONS  
For Daily Alerts

ಭಾರತದ ರಫ್ತು ಪ್ರಮಾಣ ಸತತ 5ನೇ ತಿಂಗಳು ಕುಸಿತ

|

ಭಾರತದ ಸರಕು ರಫ್ತು ಕಳೆದ ಡಿಸೆಂಬರ್‌ನಲ್ಲಿ 1.8 ಪರ್ಸೆಂಟ್ ಕುಸಿತ ಕಂಡಿದ್ದು, ಸತತ 5ನೇ ತಿಂಗಳು ಇಳಿಕೆ ಸಾಧಿಸಿದೆ. ಆದರೆ ವ್ಯಾಪಾರ ಕೊರತೆಯು ಹಿಂದಿನ ಅವಧಿಯಿಂದ 11.25 ಶತಕೋಟಿ ಡಾಲರ್‌ಗೆ ಇಳಿದಿದ್ದು, ಇದರಿಂದ ತೈಲ ಆಮದು ಕಡಿಮೆ ಮಾಡಲು ಸಹಾಯವಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.

 
ಭಾರತದ ರಫ್ತು ಪ್ರಮಾಣ ಸತತ 5ನೇ ತಿಂಗಳು ಕುಸಿತ

ಒಂದು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ಡಿಸೆಂಬರ್‌ನಲ್ಲಿ ರಫ್ತು 27.36 ಬಿಲಿಯನ್ ಡಾಲರ್‌ಗೆ ಇಳಿದಿದ್ದರೆ, ಆಮದು 8.83 ಪರ್ಸೆಂಟ್ ಇಳಿಕೆಯಾಗಿ 38.61 ಬಿಲಿಯನ್ ಡಾಲರ್‌ಗೆ ತಲುಪಿದೆ ಎಂದು ಅಂಕಿ-ಅಂಶಗಳಿಂದ ತಿಳಿದುಬಂದಿದೆ. 2019ರ ಡಿಸೆಂಬರ್‌ನಲ್ಲಿ ಭಾರತದ ವ್ಯಾಪಾರ ಕೊರತೆ 14.49 ಬಿಲಿಯನ್ ಅಮೆರಿಕನ್ ಡಾಲರ್ ಆಗಿತ್ತು ಎಂದು ತಿಳಿಸಿದೆ.

 

ದೇಶದಲ್ಲಿನ ಆರ್ಥಿಕತೆ ಮಂದಗತಿಯು ಎಲ್ಲಾ ಕ್ಷೇತ್ರದ ಮೇಲೆ ಪರಿಣಾಮ ಬೀರಿದ್ದು, ಚಿಲ್ಲರೆ ಮಾರುಕಟ್ಟೆ, ಸಗಟು ಹಣದುಬ್ಬರವು ಏರಿಕೆಯತ್ತ ಮುಖಮಾಡಿದೆ. ಈ ಮಂದಗತಿಯು ಉದ್ಯೋಗ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, 2020ರ ಹಣಕಾಸು ವರ್ಷದಲ್ಲಿ ದೇಶದಲ್ಲಿ ಸುಮಾರು 16 ಲಕ್ಷದಷ್ಟು ಕಡಿಮೆ ಉದ್ಯೋಗಗಳು ಸೃಷ್ಠಿಯಾಗಲಿವೆ ಎಂದು ಎಸ್‌ಬಿಐ ಅಂದಾಜಿಸಿದೆ.

English summary

India's Export Decline In December

India's merchandise exports shrank 1.8% in December, falling for the fifth straight month
Story first published: Wednesday, January 15, 2020, 19:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X