ಮೊಟ್ಟ ಮೊದಲ ಬಾರಿಗೆ $600 ಬಿಲಿಯನ್ ದಾಟಿದ ವಿದೇಶಿ ವಿನಿಮಯ ಸಂಗ್ರಹ

ಭಾರತದ ವಿದೇಶಿ ವಿನಿಮಯ ಸಂಗ್ರಹ ಇದೇ ಮೊದಲ ಬಾರಿಗೆ ಬರೋಬ್ಬರಿ 600 ಬಿಲಿಯನ್ ಡಾಲರ್ ದಾಟಿದೆ. 2021 ರ ಜೂನ್ 4 ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು 605 ಬಿಲಿಯನ್‌ಗೆ ಏರಿತು, ಇದು ಹಿಂದಿನ ವಾರ 598 ಬಿಲಿಯನ್ ಡಾಲರ್ಗಿಂತ ಹೆಚ್ಚಾಗಿದೆ.

ಕೋವಿಡ್-19 ಬಿಕ್ಕಟ್ಟು ಪ್ರಪಂಚದಾದ್ಯಂತ ವೇಗವಾಗಿ ಹರಡಿದ ನಂತರ 2020 ರ ಮಾರ್ಚ್ ಅಂತ್ಯದಿಂದ ವಿದೇಶಿ ವಿನಿಮಯ ಸಂಗ್ರಹ 130 ಶತಕೋಟಿ ಡಾಲರ್‌ನಷ್ಟು ಹೆಚ್ಚಾಗಿದೆ.

ಮೊಟ್ಟ ಮೊದಲ ಬಾರಿಗೆ $600 ಬಿಲಿಯನ್ ದಾಟಿದ ವಿದೇಶಿ ವಿನಿಮಯ ಸಂಗ್ರಹ

ಈ ಹಿಂದೆ ಮೇ 28 ರಂದೇ ಭಾರತದ ವಿದೇಶಿ ವಿನಿಮಯ ಸಂಗ್ರಹ 598.165 ಬಿಲಿಯನ್‌ ಡಾಲರ್‌ಗೆ ಏರಿಕೆಯಾಗಿತ್ತು. ಈ ಮೂಲಕ 600 ಡಾಲರ್‌ ಅಂಚಿಗೆ ಬಂದು ತಲುಪಿತ್ತು. ಇದೀಗ 600 ಬಿಲಿಯನ್‌ ಡಾಲರ್‌ ದಾಟಿ ಮುನ್ನುಗ್ಗುತ್ತಿದೆ.

''2019 ರ ಅಂತ್ಯದಿಂದ ಈ ಮೀಸಲು $ 140 ಶತಕೋಟಿಯಷ್ಟು ಹೆಚ್ಚಾಗಿದ್ದು, ಏಷ್ಯಾದಲ್ಲಿಯೇ ಅತಿ ಹೆಚ್ಚಾಗಿದೆ'' ಎಂದು ಡಿಬಿಎಸ್ ಬ್ಯಾಂಕಿನ ಅರ್ಥಶಾಸ್ತ್ರಜ್ಞ ರಾಧಿಕಾ ರಾವ್ ಹೇಳಿದ್ದಾರೆ.

ಜಿಡಿಪಿಯ ಶೇಕಡಾವಾರು ಪ್ರಮಾಣದಲ್ಲಿ, ಉದಯೋನ್ಮುಖ ಆರ್ಥಿಕತೆಗಳಲ್ಲಿ ಭಾರತದ ಮೀಸಲು ಹೆಚ್ಚಳವು ಅತ್ಯಧಿಕವಾಗಿದೆ. ಆದರೆ ಇದೇ ಅವಧಿಯಲ್ಲಿ ಚಿನ್ನದ ಸಂಗ್ರಹ 502 ಮಿಲಿಯನ್‌ ಡಾಲರ್‌ನಷ್ಟು ಇಳಿಕೆಯಾಗಿದ್ದು 37.604 ಬಿಲಯನ್‌ ಡಾಲರ್‌ಗೆ ಇಳಿದಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+