ಮೇ 14ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು 563 ಮಿಲಿಯನ್ ಡಾಲರ್‌ಗೆ ಏರಿಕೆಯಾಗಿ 590.028 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಂಕಿ ಅಂಶಗಳು ತಿಳಿಸಿವೆ.
ವಿದೇಶಿ ವಿನಿಮಯ ಸಂಗ್ರಹವು 2021ರ ಜನವರಿ 29ಕ್ಕೆ ಕೊನೆಗೊಂಡ ವಾರದಲ್ಲಿ ದಾಖಲೆಯ ಗರಿಷ್ಠ 590.185 ಶತಕೋಟಿಯನ್ನು ಮುಟ್ಟಿದೆ. ಮೇ 7 ಕ್ಕೆ ಕೊನೆಗೊಂಡ ವಾರದಲ್ಲಿ, ವಿದೇಶಿ ವಿನಿಮಯ ಸಂಗ್ರಹವು 1.444 ಬಿಲಿಯನ್ ಡಾಲರ್ ಹೆಚ್ಚಳಗೊಂಡು, 589.465 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ.

ಒಟ್ಟಾರೆ ವಿದೇಶಿ ವಿನಿಮಯ ಸಂಗ್ರಹಗಳ ಪೈಕಿ ವಿದೇಶಿ ಕರೆನ್ಸಿ ಸ್ವತ್ತುಗಳಲ್ಲಿ (ಎಫ್‌ಸಿಎ) 377 ಮಿಲಿಯನ್ ಡಾಲರ್ ಹೆಚ್ಚಳಗೊಂಡು ಮೇ 14 ಕ್ಕೆ ಕೊನೆಗೊಂಡ ವಾರದಲ್ಲಿ ವಿದೇಶಿ ವಿನಿಮಯ ಸಂಗ್ರಹದ ಏರಿಕೆಗೆ ಕಾರಣವಾಯಿತು. ಎಫ್‌ಸಿಎಗಳು ಯುಎಸ್ ಡಾಲರ್ ಅಲ್ಲದ ಯುನಿಟ್, ಪೌಂಡ್ ಮತ್ತು ಯೆನ್‌ನಂತಹ ಕರೆನ್ಸಿನಗಳ ವಿದೇಶಿ ವಿನಿಮಯ ಸಂಗ್ರಹವಾಗಿದೆ.
ಇದೇ ವೇಳೆಯಲ್ಲಿ ಚಿನ್ನದ ನಿಕ್ಷೇಪವು 174 ಮಿಲಿಯನ್ ಏರಿಕೆಗೊಂಡು $ 36.654 ಬಿಲಿಯನ್‌ಗೆ ತಲುಪಿದೆ. ಐಎಂಎಫ್‌ನೊಂದಿಗಿನ ದೇಶದ ಮೀಸಲು ಸ್ಥಾನವು 10 ಮಿಲಿಯನ್ ಡಾಲರ್ ಹೆಚ್ಚಾಗಿ 4.999 ಬಿಲಿಯನ್ ಡಾಲರ್‌ಗಳಿಗೆ ಏರಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications