For Quick Alerts
ALLOW NOTIFICATIONS  
For Daily Alerts

ಜುಲೈ-ಸೆಪ್ಟೆಂಬರ್‌ನಲ್ಲಿ ಭಾರತದ ಜಿಡಿಪಿ ಶೇ 8.4ಕ್ಕೆ ಕುಸಿತ

|

ನವದೆಹಲಿ, ನವೆಂಬರ್ 30: 2021-22 ರ ಎರಡನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕ ಬೆಳವಣಿಗೆ(ಜಿಡಿಪಿ)ಯು ಶೇಕಡಾ 8.4 ಕ್ಕೆ ಕುಸಿದಿದೆ ಎಂದು ಅಧಿಕೃತ ಅಂಕಿ ಅಂಶಗಳು ಮಂಗಳವಾರ ಪ್ರಕಟಿಸಿವೆ.

 

ಈ ಆರ್ಥಿಕ ವರ್ಷದಲ್ಲಿ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯು ಶೇಕಡಾ 20.1 ರಷ್ಟಿದೆ. ಕಳೆದ ವರ್ಷ ಏಪ್ರಿಲ್-ಜೂನ್‌ನಲ್ಲಿ ಭಾರತದ ಆರ್ಥಿಕತೆಯು ಶೇಕಡಾ 24.4 ರಷ್ಟು ಕುಸಿದಿತ್ತು.

 

2020-21ರ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇಕಡಾ 7.4 ರಷ್ಟು ಕುಗ್ಗಿದೆ ಎಂದು ರಾಷ್ಟ್ರೀಯ ಅಂಕಿಅಂಶ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿದ ಮಾಹಿತಿಯಿಂದ ತಿಳಿದು ಬಂದಿದೆ.

 ಜುಲೈ-ಸೆಪ್ಟೆಂಬರ್‌ನಲ್ಲಿ ಭಾರತದ ಜಿಡಿಪಿ ಶೇ 8.4ಕ್ಕೆ ಕುಸಿತ

ಸ್ಥಿರ (2011-12) ಬೆಲೆಗಳಲ್ಲಿ ಏಪ್ರಿಲ್-ಸೆಪ್ಟೆಂಬರ್ 2021-22 (H1 2021-22) ನಲ್ಲಿ ಜಿಡಿಪಿ 68.11 ಲಕ್ಷ ಕೋಟಿ ರೂ.ಗೆ ಅಂದಾಜು ಮಾಡಲಾಗಿದ್ದು, ಹಿಂದಿನ ವರ್ಷದ ಇದೇ ಅವಧಿಯಲ್ಲಿ 59.92 ಲಕ್ಷ ಕೋಟಿ ರೂ.ಗಳಾಗಿತ್ತು. H1 2021-22 ರಲ್ಲಿ ಶೇಕಡಾ 13.7 ರಷ್ಟು ಬೆಳವಣಿಗೆಯನ್ನು ತೋರಿಸುತ್ತದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಶೇಕಡಾ 15.9 ರಷ್ಟು ಸಾಧಿಸಲಾಗಿದೆ ಎಂದು ಅಂಕಿ ಅಂಶ ಹೇಳಿದೆ.

ಕಳೆದ ವರ್ಷ ಕೋವಿಡ್ 19 ಸಾಂಕ್ರಾಮಿಕ ರೋಗದ ಪ್ರಾರಂಭದ ಹಂತದಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರವ್ಯಾಪಿ ಲಾಕ್‌ಡೌನ್ ಅನ್ನು ವಿಧಿಸಿತ್ತು. ವಿವಿಧ ರಾಜ್ಯಗಳಲ್ಲಿ ನೈಟ್ ಕರ್ಫ್ಯೂ, ವೀಕೆಂಡ್ ಕರ್ಪ್ಯೂ ಮುಂತಾದ ನಿರ್ಬಂಧ ಜಾರಿಯಲ್ಲಿತ್ತು.

2021 ರ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಚೀನಾ 4.9 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ.

ಮೊದಲ ತ್ರೈಮಾಸಿಕ ವರದಿ: ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್- ಜೂನ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ದರವು ವರ್ಷದಿಂದ ವರ್ಷಕ್ಕೆ ಶೇಕಡಾ 20.1ರಷ್ಟಿದೆ. ಭಾರತದ ಜಿಡಿಪಿ ಮೂರು ತಿಂಗಳ ಅವಧಿಯಲ್ಲಿ ಶೇಕಡಾ 20.0 ರಷ್ಟು ಬೆಳವಣಿಗೆಯಾಗಬಹುದೆಂದು ರಾಯಿಟರ್ಸ್ ಸಮೀಕ್ಷೆ ತಿಳಿಸಿತ್ತು.

ಜೂನ್ ತ್ರೈಮಾಸಿಕದಲ್ಲಿ ಜಿಡಿಪಿಯಲ್ಲಿ ವರ್ಷದಿಂದ ವರ್ಷಕ್ಕೆ ಶೇ 21.6 ರಷ್ಟು ಬೆಳವಣಿಗೆಯನ್ನು ಆರ್ ಬಿಐ ಅಂದಾಜಿಸಿತ್ತು. ಜಿಡಿಪಿ ದರ ಭಾರೀ ಏರಿಕೆಗೆ ಪ್ರಮುಖ ಕಾರಣ ಕಳೆದ ವರ್ಷದಲ್ಲಿ ಮೊದಲ ತ್ರೈಮಾಸಿಕದಲ್ಲಿ ಭಾರೀ ಕುಸಿತವು ಕಾರಣವಾಗಿದೆ.

ಕಳೆದ ವರ್ಷದ ಹಣಕಾಸು ವರ್ಷದಲ್ಲಿ ಮೊದಲ ತ್ರೈಮಾಸಿಕದಲ್ಲಿ ಕರೋನವೈರಸ್ ಹರಡುವುದನ್ನು ತಡೆಯಲು ದೇಶಾದ್ಯಂತ ಲಾಕ್‌ಡೌನ್ ವಿಧಿಸಿದ್ದರಿಂದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ 24.4 ಪ್ರತಿಶತದಷ್ಟು ಕುಗ್ಗಿತ್ತು. ಇದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಆರ್ಥಿಕತೆಯಲ್ಲಿ ಕಂಡಂತಹ ಅತ್ಯಂತ ಕಡಿಮೆ ತ್ರೈಮಾಸಿಕ ಜಿಡಿಪಿ ದರವಾಗಿತ್ತು.

ಭಾರತದ ತ್ರೈಮಾಸಿಕದ ಸ್ಥಿರ ಬೆಲೆಗಳಲ್ಲಿ (2011-12) ಮೊದಲ ತ್ರೈಮಾಸಿಕದಲ್ಲಿ ರೂ. 32.38 ಲಕ್ಷ ಕೋಟಿಯಷ್ಟಿತ್ತು, ಆದರೂ ಇದು 2019-20ರ ಮೊದಲ ತ್ರೈಮಾಸಿಕದಲ್ಲಿ ರೂ. 35.66 ಲಕ್ಷ ಕೋಟಿಗಿಂತಲೂ ಕಡಿಮೆಯಾಗಿದೆ. ಇದು ಕೋವಿಡ್‌ನಿಂದ ಉಂಟಾದ ಹಿಂಜರಿತದಿಂದ ಭಾರತ ಇನ್ನೂ ಹೊರಬಂದಿಲ್ಲ ಎಂದು ತಿಳಿಸಿದೆ.

ನಿರ್ಮಾಣ ಕ್ಷೇತ್ರದ GVA (ಒಟ್ಟು ಮೌಲ್ಯವರ್ಧಿತ) ಹಿಂದಿನ ವರ್ಷಕ್ಕಿಂತ 68.3% ಬೆಳವಣಿಗೆಯಾಗಿದೆ. ಮತ್ತೊಂದೆಡೆ, ಸೇವಾ ವಲಯದ GVA ಹಿಂದಿನ ವರ್ಷದ ಅವಧಿಯಲ್ಲಿ 3.7% ಬೆಳವಣಿಗೆಯಾಗಿದೆ. ಹಿಂದಿನ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು 1.6% ಬೆಳವಣಿಗೆಯಾಗಿದೆ. ಅದೇ ಸಮಯದಲ್ಲಿ, 2020-21ರ ಸಂಪೂರ್ಣ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ 7.3% ಇಳಿಕೆಯಾಗಿದೆ.

ಆದಾಯ ಕೊರತೆ: 2021-22ರ ಆರ್ಥಿಕ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಅಂದರೆ ಏಪ್ರಿಲ್-ಜುಲೈನಲ್ಲಿ ಆದಾಯ ಕೊರತೆಯು 3.21 ಲಕ್ಷ ಕೋಟಿ ರೂ. ($ 43.98 ಬಿಲಿಯನ್) ಆಗಿತ್ತು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಇಡೀ ವರ್ಷದ ಬಜೆಟ್ ಕೊರತೆಯ ಗುರಿಯು ಶೇಕಡಾ 21.3 ರಷ್ಟಿದೆ. ನಿವ್ವಳ ತೆರಿಗೆ ರಶೀದಿಗಳು (ತೆರಿಗೆ ಸಂಗ್ರಹ) 5.21 ಲಕ್ಷ ಕೋಟಿಯಷ್ಟಿದ್ದು, ಒಟ್ಟು ವೆಚ್ಚವು 10.04 ಲಕ್ಷ ಕೋಟಿಯಷ್ಟಿದೆ ಎಂದು ಡೇಟಾ ತೋರಿಸುತ್ತದೆ.

ಏಪ್ರಿಲ್-ಜುಲೈ ಅವಧಿಯಲ್ಲಿ ಒಟ್ಟು ಸ್ವೀಕೃತಿಗಳು 6,83,297 ಕೋಟಿ ರೂ., ಇದು ಬಜೆಟ್ ಅಂದಾಜು 2021-22ರ ಶೇಕಡಾ 34.6ರಷ್ಟಿದೆ. ಇದರಲ್ಲಿ 5,29,189 ಕೋಟಿ ತೆರಿಗೆ ಆದಾಯ, 1,39,960 ಕೋಟಿ ತೆರಿಗೆ ರಹಿತ ಆದಾಯ ಮತ್ತು 14,148 ಕೋಟಿ ಸಾಲ ರಹಿತ ಬಂಡವಾಳ ಸ್ವೀಕೃತಿಗಳು ಸೇರಿವೆ. ಸಾಲ ರಹಿತ ಬಂಡವಾಳದ ರಸೀದಿಗಳಲ್ಲಿ 5,777 ಕೋಟಿ ರೂಪಾಯಿಗಳ ಸಾಲ ಮರುಪಾವತಿ ಮತ್ತು 8,371 ಕೋಟಿ ಬಂಡವಾಳ ಹೂಡಿಕೆಯ ಆದಾಯ ಸೇರಿವೆ. ನಿವ್ವಳ ತೆರಿಗೆ ರಶೀದಿ 5.21 ಲಕ್ಷ ಕೋಟಿ ರೂಪಾಯಿಗಳಾಗಿದ್ದರೆ, ಒಟ್ಟು ಖರ್ಚು 10.04 ಲಕ್ಷ ಕೋಟಿ ರೂ. ಎಂದು ಡೇಟಾ ತೋರಿಸಿದೆ. (ಪಿಟಿಐ)

English summary

India's GDP growth at 8.4 pc in July-Sept

India's economic growth slowed to 8.4 per cent in the second quarter of 2021-22, mainly due to waning low base effect, official data showed on Tuesday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X