ವಿಶ್ವದ ಅತಿದೊಡ್ಡ ಚಿನ್ನದ ಆಮದುದಾರ ದೇಶವಾದ ಭಾರತವು, ಅನೇಕ ವರ್ಷದ ಬಳಿಕ ಚಿನ್ನದ ಆಮದು ಇಳಿಕೆ ಕಂಡಿದೆ. ಭಾರತದ ಚಿನ್ನದ ಆಮದು ಪ್ರಮಾಣ ಏಪ್ರಿಲ್-ನವೆಂಬರ್ 2019ರಲ್ಲಿ 7 ಪರ್ಸೆಂಟ್ ಕುಸಿದಿದೆ.
2019-20ರ ಹಣಕಾಸು ವರ್ಷದಲ್ಲಿ ಮೌಲ್ಯದ ಲೆಕ್ಕದಲ್ಲಿ ಆಮದು ಪ್ರಮಾಣವು 1.43 ಲಕ್ಷ ಕೋಟಿಗಳಷ್ಟಿದೆ (106.84 ಬಿಲಿಯನ್ ಅಮೆರಿಕನ್ ಡಾಲರ್) ಎಂದು ವಾಣಿಜ್ಯ ಸಚಿವಾಲಯ ಹೇಳಿದೆ. ಆದರೆ ಹಿಂದಿನ ವರ್ಷ ಇದೇ ಅವಧಿಯಲ್ಲಿ ಆಮದು ಪ್ರಮಾಣವು 1.55 ಲಕ್ಷ ಕೋಟಿ ಕೋಟಿ ರುಪಾಯಿಗಳಷ್ಟಿತ್ತು. (133.74 ಬಿಲಿಯನ್ ಅಮೆರಿಕನ್ ಡಾಲರ್)

ಭಾರತವು ಚಿನ್ನದ ಆಮದು ಮಾಡಿಕೊಳ್ಳುವ ಅತಿದೊಡ್ಡ ದೇಶವಾಗಿದ್ದು, ವಾರ್ಷಿಕ ಸುಮಾರು 800 ರಿಂದ 900 ಟನ್‌ಗಳಷ್ಟು ಆಮದು ಮಾಡಿಕೊಳ್ಳಲಾಗುತ್ತದೆ. ಇದರಲ್ಲಿ ಬಹುಪಾಲು ಚಿನ್ನವು ಆಭರಣಗಳ ತಯಾರಿಕೆಗೆ ಬಳಕೆಯಾಗುತ್ತದೆ.
2019-20ರಲ್ಲಿ ಎಂಟು ತಿಂಗಳ ಅವಧಿಯಲ್ಲಿ (ಏಪ್ರಿಲ್-ನವೆಂಬರ್) ಚಿನ್ನದ ಆಮದು ಪ್ರಮಾಣವು ಕಡಿಮೆಯಾಗಿರುವುದರಿಂದ ದೇಶದ ವ್ಯಾಪಾರ ಕೊರತೆಯು ಎಂಟು ತಿಂಗಳ ಅವಧಿಯಲ್ಲಿ 7.47 ಲಕ್ಷ ಕೋಟಿಗಳಿಗೆ ಇಳಿಯಲಿದೆ. ವರ್ಷದ ಹಿಂದಿನ ಇದೇ ಅವಧಿಯಲ್ಲಿ ಇದು 9.36 ಲಕ್ಷ ಕೋಟಿ ರುಪಾಯಿಗಳಷ್ಟಿತ್ತು.
ವ್ಯಾಪಾರ ಕೊರತೆ ಮತ್ತು ಚಾಲ್ತಿ ಖಾತೆ ಕೊರತೆ ಮೇಲಿನ ಪ್ರತಿಕೂಲ ಪರಿಣಾಮ ತಗ್ಗಿಸಲು ಬಜೆಟ್‌ನಲ್ಲಿ ಆಮದು ಸುಂಕವನ್ನು 10 ಪರ್ಸೆಂಟ್ ನಿಂದ 12.5ಕ್ಕೆ ಹೆಚ್ಚಿಸಲಾಯಿತು. ಹೀಗಾಗಿ ಜುಲೈನಿಂದ ಚಿನ್ನದ ಆಮದು ಇಳಿಕೆ ಕಂಡಿದೆ.
More From GoodReturns

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್ಬಿಐ ನಿರ್ಧಾರದ ಮುನ್ನ ನಿಮ್ಮ ಹಣ ಸುರಕ್ಷಿತವೇ?

ಚಿನ್ನದ ಬೆಲೆ ಏರಿಕೆ: ನಿಮ್ಮ ಹೂಡಿಕೆ ಸುರಕ್ಷಿತವಾಗಿಡಲು ಈ ತಂತ್ರ ಬಳಸಿ

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!



Click it and Unblock the Notifications