For Quick Alerts
ALLOW NOTIFICATIONS  
For Daily Alerts

ಭಾರತದ ನಗರ ನಿರುದ್ಯೋಗ ದರ ಇಳಿಕೆ, ಮೋದಿ ಸರ್ಕಾರಕ್ಕೆ ತುಸು ನೆಮ್ಮದಿ

|

ರಾಯಿಟರ್ಸ್ ಪರಿಶೀಲಿಸಿದ ಅಪ್ರಕಟಿತ(Unpublished) ಸರ್ಕಾರದ ವರದಿ ಪ್ರಕಾರ, ಈ ವರ್ಷ ಜನವರಿ ಮತ್ತು ಮಾರ್ಚ್‌ ನಡುವಿನ ಭಾರತದ ನಗರ ನಿರುದ್ಯೋಗ ದರವು ಶೇಕಡಾ 9.3ಕ್ಕೆ ಇಳಿದಿದೆ.

ಈ ಅಂಕಿ-ಅಂಶಗಳು ಸಚಿವಾಲಯದ ತ್ರೈಮಾಸಿಕ ಉದ್ಯೋಗ ವರದಿಯಲ್ಲಿ ದಾಖಲಾಗಿರುವ ಸಂಖ್ಯೆಗಳಾಗಿದ್ದು, ಇದು ಕನಿಷ್ಟ ನಾಲ್ಕು ತ್ರೈಮಾಸಿಕಗಳಲ್ಲಿ ಕನಿಷ್ಟವಾಗಿದೆ. ಆರ್ಥಿಕತೆಯ ಹಿಂಜರಿಕತೆಯ ನಡುವೆ ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ಸಾಧ್ಯವಾಗುತ್ತಿಲ್ಲ ಎಂಬ ಟೀಕೆಗಳನ್ನು ಎದುರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ ಇದು ಸ್ವಲ್ಪ ನೆಮ್ಮದಿ ತರಿಸಿದೆ.

ಭಾರತದ ನಗರ ನಿರುದ್ಯೋಗ ದರ ಇಳಿಕೆ, ಮೋದಿ ಸರ್ಕಾರಕ್ಕೆ ತುಸು ನೆಮ್ಮದಿ

ಜನವರಿ-ಮಾರ್ಚ್‌ ತ್ರೈಮಾಸಿಕ ನಿರುದ್ಯೋಗ ದರವು ಹಿಂದಿನ ತ್ರೈಮಾಸಿಕದಲ್ಲಿ ಶೇ. 9.9ಕ್ಕೆ ಹೋಲಿಸದರೆ, ನಗರದ ನಿರುದ್ಯೋಗ ದರವು ಕಡಿಮೆಯಾಗಿದೆ. ಸದ್ಯ ಈ ವರ್ಷ ಅದೇ ಅವಧಿಯಲ್ಲಿ ಶೇ. 9.3ಕ್ಕೆ ಇಳಿದಿದೆ. ಶೀಘ್ರದಲ್ಲೇ ಪ್ರಕಟಗೊಳ್ಳುವ ಸಾಧ್ಯತೆಯಲ್ಲಿರುವ ಈ ವರದಿಯಲ್ಲಿ ಗ್ರಾಮೀಣ ನಿರುದ್ಯೋಗವನ್ನು ನಿರ್ಣಯಿಸಲಾಗಿಲ್ಲ.

ಭಾರತದ 1.3 ಶತಕೋಟಿ ಜನಸಂಖ್ಯೆಯಲ್ಲಿ 15 ರಿಂದ 29 ವರ್ಷ ವಯಸ್ಸಿನ ಯುವಕರು ಸರಿಸುಮಾರು ಮೂರನೇ ಒಂದು ಭಾಗದಷ್ಟಿದ್ದು, ನಿರುದ್ಯೋಗ ಯುವಕರ ಪ್ರಮಾಣ ಮಾರ್ಚ್ 2019ಕ್ಕೆ ಶೇಕಡಾ 22.5ರಷ್ಟಿದೆ. ಹಿಂದಿನ ತ್ರೈಮಾಸಿಕದಲ್ಲಿ ಇದು ಶೇ. 23.7ರಷ್ಟಿತ್ತು.

English summary

India's Urban Unemployment Rate Slows In March Quarter

India's Urban Unemployment Rate between january and march this year fell to 9.3 percent, the lowest in at least four quarters.
Story first published: Saturday, November 23, 2019, 18:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X