For Quick Alerts
ALLOW NOTIFICATIONS  
For Daily Alerts

2025ರಲ್ಲಿ ಸೃಷ್ಟಿಯಾಗಲಿದೆ 12 ಲಕ್ಷ ಉದ್ಯೋಗಗಳು

|

ಸದ್ಯ ಮಂದಗತಿಯಲ್ಲಿರುವ ಆರ್ಥಿಕತೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಕೇಂದ್ರ ಸರ್ಕಾರ ಆರ್ಥಿಕತೆಯನ್ನು ಉತ್ತೇಜಿಸಲು ನಾನಾ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ನಿರುದ್ಯೋಗದ ಪ್ರಮಾಣ ತಗ್ಗಿಸಲು ಹೊಸ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಉದ್ಯೋಗ ಸೃಷ್ಟಿಸಲು ಸ್ಟಾರ್ಟ್‌ ಅಪ್‌ ಕಂಪನಿಗಳನ್ನು ಪ್ರೋತ್ಸಾಹಿಸುತ್ತಿದೆ.

 

ಇದೇ ಸ್ಟಾರ್ಟ್‌ಅಪ್‌ ಕಂಪನಿಗಳು 2025ರ ಹೊತ್ತಿಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗವನ್ನು ಸೃಷ್ಟಿಸಲಿವೆ. NASSCOM ವರದಿಯ ಪ್ರಕಾರ 2025ರ ವೇಳೆಗೆ ಭಾರತದ ಸ್ಟಾರ್ಟ್ಅಪ್ ಕಂಪನಿಗಳಿಂದಲೇ 12 ಲಕ್ಷ ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ವರದಿಯಾಗಿದೆ.

 

NASSCOM (ರಾಷ್ಟ್ರೀಯ ತಂತ್ರಾಶ ಮತ್ತು ಸೇವಾ ಸಂಸ್ಥೆಗಳ ಸಂಘ) ವರದಿಯ ಪ್ರಕಾರ ಭಾರತದ ಸ್ಟಾರ್ಟ್‌ಅಪ್‌ ಕಂಪನಿಗಳು ಲಕ್ಷಾಂತರ ಉದ್ಯೋಗ ಸೃಷ್ಟಿಸುವ ಸಾಮರ್ಥ್ಯ ಹೊಂದಿವೆ. 2025ರ ವೇಳೆಗೆ 12.5 ಲಕ್ಷ ನೇರ ಉದ್ಯೋಗಗಳು ಈ ಸ್ಟಾರ್ಟ್‌ಅಪ್‌ ಕಂಪನಿಗಳಿಂದ ಸೃಷ್ಟಿಯಾಗಲಿವೆ. 2019ರಲ್ಲಿ ಸ್ಟಾರ್ಟ್‌ಅಪ್ ಸಂಸ್ಥೆಗಳು ಭಾರತದಲ್ಲಿ 3.9 ರಿಂದ 4.3 ಲಕ್ಷ ಜನರಿಗೆ ನೇರ ಉದ್ಯೋಗಗಳನ್ನು ನೀಡಿವೆ.

2025ರಲ್ಲಿ ಸೃಷ್ಟಿಯಾಗಲಿದೆ 12 ಲಕ್ಷ ಉದ್ಯೋಗಗಳು

ಭಾರತದ ಸ್ಟಾರ್ಟ್‌ಅಪ್ ಸಂಸ್ಥೆಗಳು ನೇರ ಉದ್ಯೋಗವಷ್ಟೇ ಅಲ್ಲದೆ ಪರೋಕ್ಷ ಉದ್ಯೋಗಕ್ಕೂ ಮೂಲವಾಗಿವೆ. 2019ರಲ್ಲಿ 14 ರಿಂದ 16 ಲಕ್ಷ ಪರೋಕ್ಷ ಉದ್ಯೋಗಗಳನ್ನು ಒದಗಿಸಿವೆ. ಆದರೆ 2025ರ ಹೊತ್ತಿಗೆ ಇದರ ಗಾತ್ರ 39 ರಿಂದ 44 ಲಕ್ಷಕ್ಕೆ ಜಿಗಿಯಲಿದೆ ಎಂದು NASSCOM ತಿಳಿಸಿದೆ. ಈ ದೊಡ್ಡ ಮಟ್ಟದ ಏರಿಕೆಗೆ ಕಾರಣ ಸ್ಟಾರ್ಟ್ಅಪ್ ಕಂಪನಿಗಳ ಉತ್ತಮ ಬೆಳವಣಿಗೆಯಾಗಿದ್ದು, 2025ರ ಹೊತ್ತಿಗೆ ಈಗಿನ ಬೆಳವಣಿಗೆ ದರ 4 ಪಟ್ಟು ಹೆಚ್ಚಾಗಲಿದೆ.

ಸಂಶೋಧನೆಯೊಂದರ ಪ್ರಕಾರ ಎಲ್ಲಾ ಸ್ಟಾರ್ಟ್‌ಅಪ್‌ಗಳಲ್ಲಿ 18 ಪ್ರತಿಷತದಷ್ಟು ಜನರು ಡೀಪ್-ಟೆಕ್ ಮತ್ತು ಫಿನ್ ಟೆಕ್, ಎಂಟರ್‌ ಪ್ರೈಸ್ ಮತ್ತು ಚಿಲ್ಲರೆ ತಂತ್ರಜ್ಙಾನವನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಶಿಕ್ಷಣ, ಮಾನವ ಸಂಪನ್ಮೂಲ, ಆರೋಗ್ಯ ಕ್ಷೇತ್ರಗಳಿಗೆ ಸಂಬಂಧಪಟ್ಟ ತಂತ್ರಜ್ಙಾನ ಅಭಿವೃದ್ಧಿಯ ಸ್ಟಾರ್ಟ್‌ಅಪ್‌ಗಳು ವೇಗವಾಗಿ ಬೆಳೆಯುತ್ತಿವೆ.

ಜೊತೆಗೆ ಕೃಷಿ, ವೈಮಾನಿಕ ಕ್ಷೇತ್ರ, ರಕ್ಷಣೆ ಮತ್ತು ಬಾಹ್ಯಾಕಾಶಕ್ಕೆ ಸಂಬಂಧಪಟ್ಟ ತಂತ್ರಜ್ಙಾನ ವಲಯಗಳು ಉತ್ತಮ ಅಭಿವೃದ್ಧಿ ಹೊಂದುತ್ತಿವೆ. 2019ರಲ್ಲಿ ಜನವರಿ ತಿಂಗಳಿನಿಂದ ಆಗಸ್ಟ್‌ವರೆಗೂ ಸ್ಟಾರ್ಟ್‌ಅಪ್ ಕಂಪನಿಗಳ ಹೂಡಿಕೆ ಶೇಕಡಾ 16ರಷ್ಟು ಹೆಚ್ಚಾಗಿದೆ ಎಂದು NASSCOM ತನ್ನ ವರದಿಯಲ್ಲಿ ತಿಳಿಸಿದೆ.

English summary

Indian Start-Ups Can Create Over 12 Lakh Jobs By 2025

Indian start-ups can create over 12 lakh direct jobs by 2025 according to a new report from Nasscom
Story first published: Thursday, November 7, 2019, 18:34 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X