For Quick Alerts
ALLOW NOTIFICATIONS  
For Daily Alerts

ಭಾರತೀಯ ಷೇರು ಮಾರುಕಟ್ಟೆಯಲ್ಲಿ ತಲ್ಲಣ; ಸೂಚ್ಯಂಕದಲ್ಲಿ ಭಾರೀ ಇಳಿಕೆ

|

ಬ್ಯಾಂಕಿಂಗ್ ಮತ್ತು ವಾಹನ ವಲಯದ ಷೇರುಗಳಲ್ಲಿ ಶುಕ್ರವಾರ ಭಾರೀ ಕುಸಿತವಾಗಿದ್ದು, ಅದರ ಪರಿಣಾಮವಾಗಿ ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕವೇ ಇಳಿಕೆ ಕಂಡಿದೆ. ಸೆನ್ಸೆಕ್ಸ್ ಸೂಚ್ಯಂಕವು 334 ಅಂಶಗಳು ಇಳಿಕೆ ಕಂಡು, 40,445 ಅಂಶಗಳಿಗೆ ದಿನಾಂತ್ಯ ಕಂಡಿದೆ. ಇನ್ನು ನಿಫ್ಟಿ 11,914 ಅಂಶಗಳಿಗೆ ದಿನಾಂತ್ಯದ ವಹಿವಾಟು ಮುಗಿಸಿದೆ.

 

ಸೆನ್ಸೆಕ್ಸ್ ನಲ್ಲಿ ಯೆಸ್ ಬ್ಯಾಂಕ್ ಷೇರುಗಳು 11% ಕುಸಿದರೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಷೇರು 5.5% ಇಳಿಯಿತು. ಐಟಿಸಿ, ಆಕ್ಸಿಸ್ ಬ್ಯಾಂಕ್, ಒಎನ್ ಜಿಸಿ, ಮಾರುತಿ ಸುಜುಕಿ, ಸನ್ ಫಾರ್ಮಾ, ಎಚ್ ಡಿಎಫ್ ಸಿ, ಮಹೀಂದ್ರಾ ಅಂಡ್ ಮಹೀಂದ್ರಾ, ಟಾಟಾ ಮೋಟಾರ್ಸ್ ಮತ್ತು ಇಂಡಸ್ ಇಂಡ್ ಬ್ಯಾಂಕ್ ಷೇರುಗಳು 1.5%ನಿಂದ 3.5% ತನಕ ಕುಸಿದಿವೆ.

 

ತಜ್ಞರ ಅಭಿಪ್ರಾಯದ ಪ್ರಕಾರ, ಹಣದುಬ್ಬರ ಏರಿಕೆ ಆಗುತ್ತಿರುವುದನ್ನು ಗಮನಿಸಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇನ್ನು ಜಿಡಿಪಿ ಬೆಳವಣಿಗೆ ದರದಲ್ಲಿನ ಇಳಿಕೆ ಕೂಡ ಆತಂಕಕ್ಕೆ ಕಾರಣವಾಗಿದೆ.

ಭಾರತೀಯ ಷೇರು ಮಾರುಕಟ್ಟೆಯಲ್ಲಿ ತಲ್ಲಣ; ಸೂಚ್ಯಂಕದಲ್ಲಿ ಭಾರೀ ಇಳಿಕೆ

ಆದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಚೀನಾ ಜತೆಗಿನ ವಾಣಿಜ್ಯ ಮಾತುಕತೆ ಕುರಿತಾದ ಹೇಳಿಕೆಯಿಂದ ಜಾಗತಿಕ ಷೇರು ಸೂಚ್ಯಂಕಗಳಿಗೆ ಉತ್ತೇಜನ ದೊರೆತಿದೆ.

ಅತಿ ಹೆಚ್ಚು ಕುಸಿತ ಕಂಡ ಟಾಪ್ ಐದು ಷೇರುಗಳು
ನಿಫ್ಟಿ
ಯೆಸ್ ಬ್ಯಾಂಕ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಜೀ ಎಂಟರ್ ಟೇನ್ ಮೆಂಟ್

ಗೇಲ್

ಇಂಡಸ್ ಇಂಡ್ ಬ್ಯಾಂಕ್

ಸೆನ್ಸೆಕ್ಸ್
ಯೆಸ್ ಬ್ಯಾಂಕ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಇಂಡಸ್ ಇಂಡ್ ಬ್ಯಾಂಕ್

ಟಾಟಾ ಮೋಟಾರ್ಸ್

ಮಹೀಂದ್ರಾ ಅಂಡ್ ಮಹೀಂದ್ರಾ

English summary

Indian Stock Market Fall; Sensex Fell Over 300 Points

Indian stock market fall on Friday. Sensex fell over 300 points. Here is the complete details.
Story first published: Friday, December 6, 2019, 16:34 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X