For Quick Alerts
ALLOW NOTIFICATIONS  
For Daily Alerts

ಸತತ 5ನೇ ತ್ರೈಮಾಸಿಕದಲ್ಲಿ ನಷ್ಟವನ್ನ ವರದಿ ಮಾಡಿದ ಇಂಡಿಗೋ

|

ಭಾರತದ ಅತಿದೊಡ್ಡ ದೇಶೀಯ ವಿಮಾನಯಾನ ಸಂಸ್ಥೆಯಾದ ಇಂಟರ್ ಗ್ಲೋಬ್ ಏವಿಯೇಷನ್ ಲಿಮಿಟೆಡ್, ಸತತ ಐದನೇ ತ್ರೈಮಾಸಿಕ ನಷ್ಟವನ್ನು ವರದಿ ಮಾಡಿದೆ. ಕೋವಿಡ್-19 ಎರಡನೇ ಅಲೆಯಿಂದಾಗಿ ವಿಮಾನ ಹಾರಾಟ ಬಹುತೇಕ ಇಳಿಕೆಗೊಂಡಿರುವುದು ನಷ್ಟಕ್ಕೆ ಕಾರಣವಾಗಿದೆ.

 

Alert: ಜೂನ್‌ನಲ್ಲಿ SBI, HDFC, ICICI ಬ್ಯಾಂಕ್‌ನ ಈ ವಿಶೇಷ ಯೋಜನೆಗಳು ಮುಕ್ತಾಯAlert: ಜೂನ್‌ನಲ್ಲಿ SBI, HDFC, ICICI ಬ್ಯಾಂಕ್‌ನ ಈ ವಿಶೇಷ ಯೋಜನೆಗಳು ಮುಕ್ತಾಯ

2020-21ರ ಹಣಕಾಸು ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ವಿಮಾನಯಾನ ಸಂಸ್ಥೆಯ ಒಟ್ಟು ನಿವ್ವಳ ನಷ್ಟವು 1,147.16 ಕೋಟಿಗೆ ಏರಿದೆ. ಡಿಸೆಂಬರ್ ತ್ರೈಮಾಸಿಕದಲ್ಲಿ 620.14 ಕೋಟಿ ರೂ. ಮತ್ತು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 1,194.83 ಕೋಟಿ ನಷ್ಟವಾಗಿದೆ. ಆದರೆ ಹಿಂದಿನ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಇಂಡಿಗೊ 871 ಕೋಟಿ ರೂ. ಲಾಭ ಗಳಿಸಿದೆ.

 
ಸತತ 5ನೇ ಬಾರಿ ನಷ್ಟವನ್ನ ವರದಿ ಮಾಡಿದ ಇಂಡಿಗೋ

ಮಾರ್ಚ್ ತ್ರೈಮಾಸಿಕದಲ್ಲಿ, ಇಂಡಿಗೊ ಆದಾಯವು ಶೇಕಡಾ 26.3ರಷ್ಟು ಇಳಿದು 6361.803 ಕೋಟಿ ರೂಪಾಯಿಗೆ ತಲುಪಿದೆ. ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ವೆಚ್ಚಗಳು ಶೇ. 24.2ರಷ್ಟು ಇಳಿದು, 7,519.31 ಕೋಟಿಗೆ ತಲುಪಿದೆ. ಆದಾಗ್ಯೂ ವೆಚ್ಚಗಳು ಈ ಅವಧಿಯಲ್ಲಿ ಆದಾಯವನ್ನು ಮೀರಿವೆ.

2020-21ರ ಹಣಕಾಸು ವರ್ಷದಲ್ಲಿ ಇಂಡಿಗೊ ಒಟ್ಟು 5,806.43 ಕೋಟಿ ನಿವ್ವಳ ನಷ್ಟವನ್ನು ವರದಿ ಮಾಡಿದೆ. ಇದು ಹಿಂದಿನ ವರ್ಷದಲ್ಲಿ 233.68 ಕೋಟಿ ನಷ್ಟವಾಗಿದೆ. 2021 ರ ಹಣಕಾಸು ವರ್ಷದಲ್ಲಿ ಆದಾಯವು ಶೇ.58ರಷ್ಟು ಕುಸಿದು 15,677.6 ಕೋಟಿಗೆ ತಲುಪಿದೆ.

English summary

Indigo Reports 5th Straight Quaterly Loss

InterGlobe Aviation Ltd, India’s largest domestic airline, reported a fifth straight quarterly loss
Story first published: Sunday, June 6, 2021, 8:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X