For Quick Alerts
ALLOW NOTIFICATIONS  
For Daily Alerts

ಇಸ್ರೇಲ್- ಯುಎಇ ಮಧ್ಯೆ ವಾರಕ್ಕೆ 28 ವಿಮಾನಗಳ ಹಾರಾಟಕ್ಕೆ ಒಪ್ಪಂದ

|

ಇಸ್ರೇಲ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ಮಧ್ಯೆ ಮುಂದಿನ ಮಂಗಳವಾರ (ಅಕ್ಟೋಬರ್ 20, 2020) ಒಪ್ಪಂದ ಏರ್ಪಡಲಿದ್ದು, ಎರಡೂ ದೇಶಗಳ ಮಧ್ಯೆ ವಾರದಲ್ಲಿ 28 ವಾಣಿಜ್ಯ ವಿಮಾನಗಳ ಸಂಚಾರ ಆಗಲಿದೆ. ಇನ್ನು ಮುಂದೆ ಇಸ್ರೇಲ್ ನ ಬೆನ್ ಗುರಿಯನ್ ವಿಮಾನ ನಿಲ್ದಾಣ, ದುಬೈ ಹಾಗೂ ಅಬುಧಾಬಿ ಮಧ್ಯೆ ವಿಮಾನ ಸಂಚರಿಸಲಿದೆ ಎಂದು ಇಸ್ರೇಲ್ ಸಾರಿಗೆ ಸಚಿವಾಲಯ ಭಾನುವಾರ ಹೇಳಿದೆ.

'ಹಲೋ ಇಸ್ರೇಲ್' ಎಂದವು ಯುಎಇ ಫೋನ್ ಗಳು'ಹಲೋ ಇಸ್ರೇಲ್' ಎಂದವು ಯುಎಇ ಫೋನ್ ಗಳು

ಇದರ ಜತೆಗೆ ಖಾಸಗಿ ವಿಮಾನಗಳು ಎರಡೂ ದೇಶಗಳ ಮಧ್ಯೆ ಎಷ್ಟು ಸಂಖ್ಯೆಯಲ್ಲಾದರೂ ಸಂಚರಿಸಬಹುದು ಎಂದು ಒಪ್ಪಂದ ಆಗಲಿದೆ. ಯುಎಇ ಹಾಗೂ ಇಸ್ರೇಲ್ ಮಧ್ಯೆ ಸಂಬಂಧ ಸುಧಾರಣೆ ಆದ ಮೇಲೆ ದಕ್ಷಿಣ ಇಸ್ರೇಲ್ ನ ವಿಮಾನ ನಿಲ್ದಾಣಕ್ಕೆ ಖಾಸಗಿ ವಿಮಾನಗಳ ಸಂಚಾರಕ್ಕೆ ಅನುಮತಿ ಸಿಕ್ಕಿದೆ.

ಇಸ್ರೇಲ್- ಯುಎಇ ಮಧ್ಯೆ ವಾರಕ್ಕೆ 28 ವಿಮಾನಗಳ ಹಾರಾಟಕ್ಕೆ ಒಪ್ಪಂದ

ಇನ್ನು ವಾರಕ್ಕೆ ಹತ್ತು ಸರಕು ಸಾಗಣೆ ವಿಮಾನಗಳು ಸಂಚರಿಸುತ್ತಿವೆ. ಈ ವೈಮಾನಿಕ ಒಪ್ಪಂದವು ಬೆನ್ ಗುರಿಯನ್ ವಿಮಾನ ನಿಲ್ದಾಣದಲ್ಲಿ ಏರ್ಪಡಲಿದೆ ಹಾಗೂ ಮುಂದಿನ ಕೆಲ ವಾರಗಳಲ್ಲಿ ವಿಮಾನಗಳ ಹಾರಾಟ ಆರಂಭ ಆಗಲಿದೆ ಎಂದು ಸಚಿವಾಲಯದಿಂದ ಮಾಹಿತಿ ನೀಡಲಾಗಿದೆ.

English summary

Israel- UAE To Sign Agreement For 28 Weekly Commercial Flights

Israel- UAE to sign agreement on Tuesday for 28 weekly commercial flights. Here is the details.
Story first published: Sunday, October 18, 2020, 22:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X