For Quick Alerts
ALLOW NOTIFICATIONS  
For Daily Alerts

ಶಾಶ್ವತ ವರ್ಕ್ ಫ್ರಮ್ ಹೋಮ್ ಕೊಟ್ಟು, ಸಂಬಳಕ್ಕೆ ಕತ್ತರಿ ಹಾಕಲಿವೆ ಕಂಪೆನಿಗಳು !

|

ಐ.ಟಿ. ಉದ್ಯೋಗಿಗಳು ಈ ಸುದ್ದಿಯನ್ನು ಹೆಚ್ಚು ಗಮನ ಇಟ್ಟು ಓದಿಕೊಳ್ಳಿ. ಉಳಿದ ವಲಯಗಳಲ್ಲಿ ಕಾರ್ಯ ನಿರ್ವಹಿಸುವವರೇನೋ ಇದರಿಂದ ದೂರ ಏನಿಲ್ಲ. ವಿಷಯ ಏನಪ್ಪಾ ಅಂದರೆ, ಅಮೆರಿಕದ ದುಬಾರಿ ನಗರದಲ್ಲಿ ಇರುವ ಕಂಪೆನಿಯೊಂದು ತನ್ನ ಉದ್ಯೋಗಿಗಳಿಗೆ ಶಾಶ್ವತವಾಗಿ ಅಥವಾ ವಾರದಲ್ಲಿ ಇಂತಿಷ್ಟು ದಿನ ಎಂದು ಅವರಿಗೆ ಬೇಕಾದಂತೆ ವರ್ಕ್ ಫ್ರಮ್ ಹೋಮ್ ನೀಡಲು ಮುಂದಾಗಿದೆ. ಆದರೆ ಅಂಥವರ ಸಂಬಳದಲ್ಲಿ ಒಂದಿಷ್ಟು ಕಡಿತ ಮಾಡ್ತೀವಿ ಎಂದು ಹೇಳಿದೆ.

ಆ ಕಂಪೆನಿಯ ಹೆಸರು ವಿಎಂವೇರ್ ಇಂಕ್. ಇದು ಯಾವುದೋ ಸ್ಕೀಮ್ ಚೆನ್ನಾಗಿದೆಯಲ್ಲಾ ಎಂಬ ಲೆಕ್ಕಾಚಾರದಲ್ಲಿ ಫೇಸ್ ಬುಕ್, ಟ್ವಿಟ್ಟರ್ ಸಹ ಇದೇ ಹಾದಿಯನ್ನು ತುಳಿದಿವೆ. ಕೊರೊನಾ ಬಿಕ್ಕಟ್ಟಿದೆ. ನಿಮ್ಮ ಮ್ಯಾನೇಜರ್ ಒಪ್ಪುವುದಾದರೆ ಶಾಶ್ವತವಾಗಿ ವರ್ಕ್ ಫ್ರಂ ಹೋಮ್ ತೆಗೆದುಕೊಳ್ಳಿ. ಆದರೆ ಸಂಬಳ ಕಡಿತ ಮಾಡ್ತೀವಿ, ಅಷ್ಟೇ ಎನ್ನುತ್ತಿವೆ.

ಯಾವ ನಗರ ಎಂಬುದರ ಆಧಾರದಲ್ಲಿ ವೇತನ

ಯಾವ ನಗರ ಎಂಬುದರ ಆಧಾರದಲ್ಲಿ ವೇತನ

ವಿಎಂವೇರ್ ಕಂಪೆನಿ ಇರುವ ಸಿಲಿಕಾನ್ ವ್ಯಾಲಿಯಿಂದ ಲಾಸ್ ಏಂಜಲೀಸ್ ಗೋ ಅಥವಾ ಸ್ಯಾನ್ ಡಿಯಾಗೋಗೆ ತೆರಳಿದರೆ ವೇತನದಲ್ಲಿ 18% ಕಡಿತ ಮಾಡಲಾಗುತ್ತದೆ. ಫೇಸ್ ಬುಕ್ ಹಾಗೂ ಟ್ವಿಟ್ಟರ್ ಕೂಡ ಈಗಾಗಲೇ ಈ ನಿಯಮ ತಂದಿದೆ ಹಾಗೂ ಇದೇ ರೀತಿ ವೇತನ ನಿಯಮ ತರಲು ಆಲೋಚಿಸುತ್ತಿದೆ. ಈ ಬಗ್ಗೆ ಟ್ವಿಟ್ಟರ್ ಕಂಪೆನಿ ಪ್ರತಿಕ್ರಿಯೆಯು 'ಅಳಿಯ ಅಲ್ಲ ಮಗಳ ಗಂಡ' ಅನ್ನೋ ರೀತಿಯಲ್ಲಿ ಇದ್ದರೆ, ಫೇಸ್ ಬುಕ್ ನಿಂದ ನೇರವಾಗಿ ಹೇಳಲಾಗಿದೆ. ಉದ್ಯೋಗಿಗಳು ಎಲ್ಲಿಗೆ ತೆರಳಬೇಕು ಎಂದು ಬಯಸುತ್ತಾರೋ ಆ ಸ್ಥಳದ ಆಧಾರದಲ್ಲಿ ವೇತನ ಕಡಿತ ನಿರ್ಧಾರ ಆಗುತ್ತದೆ ಎಂದು ಹೇಳಿದೆ.ವಿಎಂವೇರ್ ಕಂಪೆನಿಯ ಮಾನವ ಸಂಪನ್ಮೂಲ ವಿಭಾಗದ ಹಿರಿಯ ಉಪಾಧ್ಯಕ್ಷ ರಿಚ್ ಲ್ಯಾಂಗ್ ಈ ಬಗ್ಗೆ ಮಾತನಾಡಿದ್ದು, ಯಾವ ಪ್ರದೇಶದಲ್ಲಿ ಉದ್ಯೋಗಿ ವಾಸವಿದ್ದಾರೆ ಎಂಬುದರ ಆಧಾರದಲ್ಲಿ ವೇತನ ಜಾಸ್ತಿ ಅಥವಾ ಕಡಿಮೆ ಮಾಡಲಾಗುತ್ತದೆ. ಆಯಾ ಪ್ರದೇಶಕ್ಕೆ ಅನುಗುಣವಾಗಿ ಕೆಲವು ಉದ್ಯೋಗಿಗಳಿಗೆ ವೇತನದಲ್ಲಿ ಇಳಿಕೆ ಆಗಬಹುದು, ದೊಡ್ಡ ನಗರಗಳನ್ನು ಆಯ್ಕೆ ಮಾಡಿಕೊಂಡು, ತೆರಳುವ ಕೆಲವರಿಗೆ ವೇತನ ಹೆಚ್ಚಳ ಆಗುತ್ತದೆ ಎಂದಿದ್ದಾರೆ.

ಕಂಪೆನಿಯ ನಿರ್ಧಾರ ಪಾರದರ್ಶಕ

ಕಂಪೆನಿಯ ನಿರ್ಧಾರ ಪಾರದರ್ಶಕ

ಕೊರೊನಾ ಬಿಕ್ಕಟ್ಟು ಅಮೆರಿಕದಲ್ಲಿನ ಜನರ ಬದುಕನ್ನೇ ಬದಲಿಸಿದೆ. ಹತ್ತಾರು ಲಕ್ಷ ಮಂದಿ ವರ್ಕ್ ಫ್ರಂ ಹೋಮ್ ಮಾಡುತ್ತಿದ್ದಾರೆ. ತಮ್ಮ ಕುಟುಂಬದವರ ವಾಸ್ತವ್ಯದ ಹಾಗೂ ಪ್ರೀತಿಪಾತ್ರರ ಮನೆಗಳ ಸಮೀಪವೇ ಮನೆ ಮಾಡಿದ್ದಾರೆ. ಮತ್ತೆ ಕೆಲವರು ಕೈಗೆಟುಕುವ ದರದಲ್ಲಿ ಮನೆ ಸಿಗುವ ಕಡೆಗೆ ತೆರಳಿದ್ದಾರೆ. ಆ ಕಾರಣಕ್ಕೆ ಕಂಪೆನಿಗಳು ಸಹ ತಮ್ಮ ವೆಚ್ಚವನ್ನು ಕಡಿತ ಮಾಡಲು ಕೆಲವು ನಿಯಮಗಳನ್ನು ರೂಪಿಸುತ್ತಿವೆ. ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾ ಸರಕು ಹಾಗೂ ಸೇವೆಗೆ ವಿಪರೀತ ದುಬಾರಿ. ಅಷ್ಟೇ ಅಲ್ಲ, ಬಾಡಿಗೆ ಕೂಡ ತುಟ್ಟಿ. ಎರಡನೇ ಸ್ಥಾನದಲ್ಲಿ ನ್ಯೂಯಾರ್ಕ್ ನಗರ ಇದೆ. ಇನ್ನು ಕ್ಯಾಲಿಫೋರ್ನಿಯಾದ ಸಿಲಿಕಾನ್ ಸಿಟಿಯ ಹೃದಯ ಭಾಗದಲ್ಲಿ ಇರುವ ಸಾಂತಾ ಕ್ಲಾರಾ ಸೇರಿದಂತೆ ಯುಎಸ್ ನಲ್ಲಿನ ಇತರ ನಗರಗಳಲ್ಲಿ ಬಾಡಿಗೆ ಪರಮ ದುಬಾರಿ. ಕೊರೊನಾ ಕಾರಣಕ್ಕೆ ಕಚೇರಿಗಳ ಬಾಗಿಲಿಗೆ ಬೀಗ ಬಿದ್ದಿದೆ. ಇದೀಗ ಶಾಶ್ವತವಾಗಿ ಕ್ಯಾಲಿಫೋರ್ನಿಯಾದಿಂದ ಹೊರಗೆ ಇದ್ದು, ಸಂಬಳ ಕಳೆದುಕೊಳ್ಳುವುದು ಬುದ್ಧಿವಂತಿಕೆ ನಿರ್ಧಾರವಾ ಎಂದ್ಯ್ ಉದ್ಯೋಗಿಗಳು ನಿರ್ಧರಿಸಬೇಕು. ವಿಎಂವೇರ್ ಹೇಳುವಂತೆ, ಕಂಪೆನಿಯು ಉದ್ಯೋಗಿಗಳ ಜತೆಗೆ ಪಾರದರ್ಶಕವಾಗಿ ಇರುತ್ತದೆ. ಸ್ಥಳಾಂತರ ಆಗುವ ಉದ್ಯೋಗಿಗಳ ನಿರ್ಧಾರದಿಂದ ವೇತನ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಮನದಟ್ಟು ಮಾಡಿಸುತ್ತದೆ ಎಂದು ತಿಳಿಸಲಾಗಿದೆ.

ಟ್ವಿಟ್ಟರ್ ನಿಂದ ವರ್ಕ್ ಫ್ರಂ ಹೋಮ್ ಭತ್ಯೆ

ಟ್ವಿಟ್ಟರ್ ನಿಂದ ವರ್ಕ್ ಫ್ರಂ ಹೋಮ್ ಭತ್ಯೆ

ಈ ವೇತನ ನಿಯಮ ಒಂದು ಕಡೆಯಾಯಿತು. ಟ್ವಿಟ್ಟರ್ ನಿಂದ ಎಲ್ಲ ಉದ್ಯೋಗಿಗಳಿಗೆ ಒಂದು ಬಾರಿಗೆ ವರ್ಕ್ ಫ್ರಮ್ ಹೋಮ್ ಭತ್ಯೆ ಎಂದು ಒಂದು ಸಾವಿರ ಅಮೆರಿಕನ್ ಡಾಲರ್ ನೀಡಲಾಗಿದೆ. ಅವರು ಎಲ್ಲಿ ವಾಸವಿದ್ದಾರೆ, ಏನು ಮತ್ತಿನ್ಯಾವ ಅಂಶವನ್ನೂ ಗಮನಿಸದೆ ನೀಡಲಾಗಿದೆ. ಇದರ ಜತೆಗೆ ವಿಎಂವೇರ್ ನಿಂದ ಎಲ್ಲ ಉದ್ಯೋಗಿಗಳಿಗೆ ಮತ್ತೆ ಉತ್ಸಾಹ ತುಂಬಲು ಎರಡು ವಾರಗಳ ವೀಕ್ ಆಫ್ ನೀಡಲಾಗಿದೆ. ಫೇಸ್ ಬುಕ್ ನಿಂದ ಕಳೆದ ಮೇ ತಿಂಗಳಲ್ಲೇ ಹೇಳಲಾಗಿತ್ತು: ಕೊರೊನಾ ನಂತರ ಕೂಡ ಉದ್ಯೋಗಿಗಳು ಶಾಶ್ವತವಾಗಿ ವರ್ಕ್ ಫ್ರಂ ಹೋಮ್ ಮಾಡಲು ಕಂಪೆನಿಯಿಂದ ಅನುಮತಿಸಲಾಗುತ್ತದೆ ಎಂದಿತ್ತು. ಸ್ಯಾನ್ ಫ್ರಾನ್ಸಿಸ್ಕೋ ಅಥವಾ ನ್ಯೂಯಾರ್ಕ್ ನಂಥ ಪರಮ ದುಬಾರಿ ನಗರಗಳಲ್ಲಿ ವಾಸವಿರುವವರು, ಇದೇ ಸಮಯ ಅಂತ ಅಲ್ಲಿಂದ ಕುಟುಂಬ ಸಮೇತ ಸ್ಥಳಾಂತರ ಆಗುವುದಿದ್ದಲ್ಲಿ ಅಂಥವರಿಗೆ ವೇತನ ಕಡಿತ ಆಗುತ್ತದೆ. ಜನವರಿ 1, 2021ರಿಂದ ಅವರು ಎಲ್ಲಿ ವಾಸಿಸುತ್ತಾರೆ ಎಂಬುದು ಗಣನೆಗೆ ಬರುತ್ತದೆ. ಮುಂದಿನ ಐದರಿಂದ ಹತ್ತು ವರ್ಷದಲ್ಲಿ ಫೇಸ್ ಬುಕ್ ನಲ್ಲಿನ ಒಟ್ಟಾರೆ ಉದ್ಯೋಗಿಗಳಲ್ಲಿ ಶೇಕಡಾ ಐವತ್ತರಷ್ಟು ಮಂದಿ ಮನೆಗಳಿಂದಲೇ ಕೆಲಸ ಮಾಡುತ್ತಾರೆ ಎಂದು ಝುಕರ್ ಬರ್ಗ್ ಹೇಳಿದ್ದಾರೆ.

ಭಾರತಕ್ಕೆ ಈ ವೇತನ ನಿಯಮ ಬರಲು ಇನ್ನೆಷ್ಟು ಸಮಯ?

ಭಾರತಕ್ಕೆ ಈ ವೇತನ ನಿಯಮ ಬರಲು ಇನ್ನೆಷ್ಟು ಸಮಯ?

ಇನ್ನೇನು ಯು.ಎಸ್. ನಲ್ಲಿ ಬಂದಾಗಿದೆ ಅಂದರೆ, ಭಾರತದಲ್ಲಿ ಬರಲು ಇನ್ನೆಷ್ಟು ಸಮಯ ಬೇಕಾಗಬಹುದು? ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ, ನೋಯ್ಡಾ, ಗುರ್ ಗಾಂವ್, ಹೈದರಾಬಾದ್, ಪುಣೆ, ಕೋಲ್ಕತ್ತಾದಂಥ ಮಹಾನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದವರು ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ತಮ್ಮ ಊರುಗಳಿಗೆ ಮರಳಿ, ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದಲ್ಲಿ ಶಾಶ್ವತವಾಗಿ ವೇತನ ಕಡಿತ ಆಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಕೊರೊನಾ ಬಿಕ್ಕಟ್ಟು ಬಗೆಹರಿದ ನಂತರ ಬದುಕು ಮುಂಚಿನಂತೆ ಆಗುವ ಸಾಧ್ಯತೆ ಬಹಳ ಅಂದರೆ ಬಹಳ ಕಡಿಮೆ. ಕಂಪೆನಿಗಳು ಸಹ ವೆಚ್ಚ ಕಡಿತ ಮಾಡಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಇವೆ. ಆ ಕಾರಣಕ್ಕೆ ದೊಡ್ಡ ನಗರಗಳಲ್ಲಿ ವಾಸ ಇರುವವರನ್ನು ಹೊರತುಪಡಿಸಿ, ಉಳಿದವರ ವೇತನಕ್ಕೆ ಕತ್ತರಿ ಬೀಳಬಹುದು. ಯಾವುದಕ್ಕೂ ಈ ಸಂಗತಿ ನಿಮ್ಮ ಗಮನಕ್ಕೆ ಇರಲಿ.

English summary

IT Companies May Cut Pay By Giving Permanent Work From Home To Employees

Some of the IT companies giving permanent work from home and pay cut to them on the basis of where they reside.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X