For Quick Alerts
ALLOW NOTIFICATIONS  
For Daily Alerts

ಪೆಟ್ರೋಲ್, ಡೀಸೆಲ್ GST ವ್ಯಾಪ್ತಿಗೆ ಇಲ್ಲ: ಹಾಗಿದ್ರೆ ಏನೆಲ್ಲಾ ಪ್ರಮುಖ ನಿರ್ಧಾರವಾಗಿದೆ?

|

ಸುಮಾರು ಎರಡು ವರ್ಷದ ಬಳಿಕ ಇಂದು ಲಕ್ನೋದಲ್ಲಿ ನಡೆದ ಭೌತಿಕ ಜಿಎಸ್‌ಟಿ ಸಭೆಯಲ್ಲಿ ಪೆಟ್ರೋಲ್, ಡೀಸೆಲ್ ಜಿಎಸ್‌ಟಿ ವ್ಯಾಪ್ತಿಗೆ ತರಲು ಸದಸ್ಯರುಗಳ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಜಿಎಸ್‌ಟಿ ಅಡಿಯಲ್ಲಿ ತೈಲವನ್ನು ತರಲು ಸಾಧ್ಯವಾಗಿಲ್ಲ.

ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸಾಕಷ್ಟು ಸಮಯದ ಕಾಲ ಜಿಎಸ್‌ಟಿ ಮಂಡಳಿ ಸಭೆ ಭೌತಿಕವಾಗಿ ನಡೆದಿರಲಿಲ್ಲ. ಆದರೆ ಇಂದು ನಡೆದ ಜಿಎಸ್‌ಟಿ ಕೌನ್ಸಿಲ್‌ನ ಈ ಸಭೆ 44 ನೇ ಸಭೆಯಾಗಿದೆ. ಸುಮಾರು 20 ತಿಂಗಳಲ್ಲಿ ನಡೆದ ಮೊದಲ ಜಿಎಸ್‌ಟಿ ಕೌನ್ಸಿಲ್ ಸಭೆ ಇದಾಗಿದ್ದು, ಕೋವಿಡ್ ಸಾಂಕ್ರಾಮಿಕ ರೋಗದ ಮೊದಲು ಕೊನೆಯ ಸಭೆ 2019 ರಲ್ಲಿ ನಡೆಯಿತು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿವಿಧ ಹಣಕಾಸು ಮಂತ್ರಿಗಳ ಜೊತೆಗೆ ಸರ್ಕಾರ ಮತ್ತು ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಡೆಯಿತು. ಈ ಸಭೆಯಲ್ಲಿ ಏನೆಲ್ಲಾ ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬುದನ್ನು ಮುಂದೆ ತಿಳಿಯಿರಿ

ಜಿಎಸ್‌ಟಿ ಅಡಿಯಲ್ಲಿ ಪೆಟ್ರೋಲ್, ಡೀಸೆಲ್ ತರಲು ಚರ್ಚೆ

ಜಿಎಸ್‌ಟಿ ಅಡಿಯಲ್ಲಿ ಪೆಟ್ರೋಲ್, ಡೀಸೆಲ್ ತರಲು ಚರ್ಚೆ

ಕೇರಳ ಹೈಕೋರ್ಟ್ ಆದೇಶದ ನಂತರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕೌನ್ಸಿಲ್ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ತೆರಿಗೆ ರಚನೆಯ ಅಡಿಯಲ್ಲಿ ಸೇರಿಸುವ ಕುರಿತು ಚರ್ಚಿಸಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಹೇಳಿದ್ದಾರೆ. "ನ್ಯಾಯಾಲಯದ ನಿರ್ದೇಶನದ ಮೇರೆಗೆ ಅದನ್ನು ಮಂಡಿಸಲಾಯಿತು ಆದರೆ ಸದಸ್ಯರು ಜಿಎಸ್‌ಟಿಯಲ್ಲಿ ಸೇರಿಸುವುದನ್ನು ಬಯಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು" ಎಂದು ಸೀತಾರಾಮನ್ ಹೇಳಿದರು.

ಮಾತು ಮುಂದುವರಿಸಿದ ನಿರ್ಮಲಾ ಸೀತಾರಾಮನ್ "ಇದನ್ನು ಹೈಕೋರ್ಟ್‌ಗೆ ವರದಿ ಮಾಡಲಾಗುವುದು, ಏಕೆಂದರೆ ಜಿಎಸ್‌ಟಿ ಕೌನ್ಸಿಲ್ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ಅಡಿಯಲ್ಲಿ ತರುವ ಇದು ಸಮಯವಲ್ಲ" ಎಂದು ನಿರ್ಧರಿಸಿದೆ ಅವರು ಹೇಳಿದರು.

 

ಜೈವಿಕ ಡೀಸೆಲ್ ಮೇಲಿನ ಜಿಎಸ್‌ಟಿ ದರ ಇಳಿಕೆ

ಜೈವಿಕ ಡೀಸೆಲ್ ಮೇಲಿನ ಜಿಎಸ್‌ಟಿ ದರ ಇಳಿಕೆ

ಡೀಸೆಲ್‌ನೊಂದಿಗೆ ಬೆರೆಸುವ ಜೈವಿಕ ಡೀಸೆಲ್ ಮೇಲಿನ ಜಿಎಸ್‌ಟಿ ದರವನ್ನು (ತೈಲ ಮಾರುಕಟ್ಟೆ ಕಂಪನಿಗಳು ಬಳಸುವ) 12% ರಿಂದ 5% ಕ್ಕೆ ಇಳಿಸಲಾಗಿದೆ ಎಂದು ಸಚಿವರು ಘೋಷಿಸಿದರು.

ಕೌನ್ಸಿಲ್ ಕೋವಿಡ್ -19 ಚಿಕಿತ್ಸೆಯಲ್ಲಿ ಬಳಸುವ ಔಷಧಗಳ ಮೇಲಿನ ರಿಯಾಯಿತಿ ಜಿಎಸ್‌ಟಿ ದರಗಳನ್ನು ಡಿಸೆಂಬರ್ 31 ರವರೆಗೆ ವಿಸ್ತರಿಸಿದೆ ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ.

 

ಪೆನ್ನುಗಳ ಮೇಲಿನ ಜಿಎಸ್‌ಟಿ ದರ 18%

ಪೆನ್ನುಗಳ ಮೇಲಿನ ಜಿಎಸ್‌ಟಿ ದರ 18%

ಎಲ್ಲಾ ಪೆನ್ನುಗಳು ಒಂದೇ ಜಿಎಸ್‌ಟಿ ದರವನ್ನು ಆಕರ್ಷಿಸಲಿವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಪೆನ್ನುಗಳ ಮೇಲೆ ಶೇಕಡಾ 18% ಜಿಎಸ್‌ಟಿ ವಿಧಿಸಲಾಗುತ್ತದೆ ಎಂದು ಹೇಳಿದರು. ಜೊತೆಗೆ ನವೀಕರಿಸಬಹುದಾದ ಇಂಧನ ವಲಯದ ಸಾಧನಗಳಿಗೆ 12% ಜಿಎಸ್‌ಟಿ ವಿಧಿಸಲಾಗುವುದು

ಜಿಎಸ್‌ಟಿ ಪರಿಹಾರ ಸೆಸ್ ವಿಸ್ತರಣೆ

ಜಿಎಸ್‌ಟಿ ಪರಿಹಾರ ಸೆಸ್ ವಿಸ್ತರಣೆ

ಜಿಎಸ್‌ಟಿ ಪರಿಹಾರ ಸೆಸ್ ಅನ್ನು ವಿಸ್ತರಿಸಲಾಗುವುದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಜಿಎಸ್‌ಟಿ ಪರಿಹಾರ ಸೆಸ್ ಅನ್ನು ಮಾರ್ಚ್ 2026 ರವರೆಗೆ ವಿಸ್ತರಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. FY21 ರಲ್ಲಿ ರಾಜ್ಯಗಳ ಸೆಸ್ ಕೊರತೆಯನ್ನು ಸರಿದೂಗಿಸಲು ತೆಗೆದುಕೊಂಡ ಸಾಲವನ್ನು ಮರುಪಾವತಿಸಲು ಇದನ್ನು ಮಾಡಲಾಗುತ್ತಿದೆ.

Array

Array

ಯುಪಿಎಸ್ ಮತ್ತು ಬಾಹ್ಯ ಬ್ಯಾಟರಿಯನ್ನು ಸಮಾನವಾಗಿ ಪರಿಗಣಿಸಲಾಗುತ್ತದೆ ಎಂದು ಸೀತಾರಾಮನ್ ಹೇಳಿದ್ದಾರೆ. ರೈಲ್ವೆ ಘಟಕಗಳು, ಲೋಕೋಮೋಟಿವ್‌ಗಳ ಮೇಲಿನ ಜಿಎಸ್‌ಟಿಯನ್ನು ಪ್ರಸ್ತುತ 12% ರಿಂದ 18% ಕ್ಕೆ ಹೆಚ್ಚಿಸಲು ಕೌನ್ಸಿಲ್ ಪ್ರಸ್ತಾಪಿಸಿದೆ. ಪ್ರಸ್ತುತ ಯುಪಿಎಸ್ ಮೇಲೆ ಜಿಎಸ್‌ಟಿ 18%, ಬಾಹ್ಯ ಬ್ಯಾಟರಿಗೆ 28% ವಿಧಿಸಲಾಗಿದೆ.

English summary

It's Not The Time To Bring Petrol, Diesel Under GST: FM

"This will be reported to the high court as the Council felt it was not the time to bring petroleum products under the GST," Nirmala Sitharaman said.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X