For Quick Alerts
ALLOW NOTIFICATIONS  
For Daily Alerts

ಕೊರೊನಾದಿಂದ ಈ ವರ್ಷ ಐಟಿ ಕ್ಷೇತ್ರದಲ್ಲಿ ನೇಮಕಾತಿ ಬಹುತೇಕ ರದ್ದು: ಮೋಹನ್‌ದಾಸ್ ಪೈ

|

ಕೊರೊನಾವೈರಸ್‌ ಲಾಕ್‌ಡೌನ್‌ನಿಂದಾಗಿ ಎಲ್ಲಾ ಉದ್ಯಮಗಳಂತೆ ಐಟಿ ಉದ್ಯಮವು ಭಾರೀ ನಷ್ಟ ಅನುಭವಿಸಿದ್ದು, ಭಾರತದ ಐಟಿ ಉದ್ಯಮ ವಲಯದಲ್ಲಿ ಈ ವರ್ಷ ಯಾವುದೇ ನೇಮಕಾತಿ ನಡೆಯುವುದಿಲ್ಲ ಎಂದು ಐಟಿ ಉದ್ಯಮದ ಹಿರಿಯ ಮೋಹನ್‌ದಾಸ್ ಪೈ ಹೇಳಿದ್ದಾರೆ.

 

ಕೊರೊನಾವೈರಸ್ ಹಾವಳಿಯ ಕಾರಣ ಉದ್ಯಮದ ಉನ್ನತ ಮಟ್ಟದ ಸಿಬ್ಬಂದಿ 20 ರಿಂದ 25 ಪರ್ಸೆಂಟ್‌ರಷ್ಟು ವೇತನ ಕಡಿತವನ್ನು ಕಾಣಲಿದ್ದಾರೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.

ಇನ್ಫೋಸಿಸ್ ಲಿಮಿಟೆಡ್ ನ ಐಟಿ ಸೇವೆಗಳ ಪ್ರಮುಖ ಮುಖ್ಯ ಹಣಕಾಸು ಅಧಿಕಾರಿ ಐಟಿ ಉದ್ಯಮವು ತನ್ನ 90 ಪರ್ಸೆಂಟ್‌ಕ್ಕಿಂತ ಹೆಚ್ಚಿನ ಉದ್ಯೋಗಿಗಳನ್ನು ಮನೆಯಿಂದ ಕೆಲಸ ಮಾಡುವಂತೆ ಹೇಳಿದ್ದು "ಅಚ್ಚರಿಯ ಕೆಲಸ ನಡೆದಿದೆ" ಎಂದಿದ್ದಾರೆ. ಮನೆಯಲ್ಲಿ ಮೂಲಸೌಕರ್ಯ ಸ್ಥಾಪನೆ ಮೂಲಕ ತಮ್ಮ ಗ್ರಾಹಕರಿಂದ ಪರ್ಮಿಷನ್ ಗಳನ್ನು ಪಡೆಯುವ ಮೂಲಕ "ಭದ್ರತೆ ಮತ್ತು ಮೇಲ್ವಿಚಾರ" ಉತ್ತಮವಾಗಿದೆ ಎನ್ನುವುದನ್ನು ಖಚಿತಪಡಿಸಿಕೊಂಡು ಈ ಉಪಕ್ರಮ ತೆಗೆದುಕೊಂಡಿದೆ. ಈ ರೀತಿ ಮನೆಯಿಂದ ಕೆಲಸ ಮಾಡುವವರ ಪ್ರಮಾಣ 25 ರಿಂದ 30 ಪರ್ಸೆಂಟ್‌ರಷ್ಟು ಆಗಿರಲಿದೆ ಎಂದು ಹೇಳಿದ್ದಾರೆ.

ಕೊರೊನಾದಿಂದ ಈ ವರ್ಷ ಐಟಿ ಕ್ಷೇತ್ರದಲ್ಲಿ ನೇಮಕಾತಿ ಬಹುತೇಕ ರದ್ದು!

ಐಟಿ ವಲಯದಲ್ಲಿ ಕಚೇರಿ ಸ್ಥಳಾವಕಾಶದ ಬೇಡಿಕೆ ತಗ್ಗಲಿದೆ ಎಂದು ನಿರೀಕ್ಷಿಸಲಾಗಿದೆ. ಏಕೆಂದರೆ ಕಂಪನಿಗಳು ಈಗ ತಮ್ಮ ಇಕ್ಕಟ್ಟಾದ ಕಚೇರಿ ಜಾಗದಲ್ಲಿ ಸಾಮಾಜಿಕ ಅಂತರವನ್ನೂ ಕಾಪಾಡಿಕೊಳ್ಳಬೇಕಿದೆ ಎಂದು ಪೈ ಪಿಟಿಐಗೆ ಹೇಳಿದ್ದಾರೆ.

"ಈಗ ಸಾಮಾಜಿಕ ಅಂತರ ಅಗತ್ಯವಾಗಿರುವ ಕಾರಣ ಒಬ್ಬ ವ್ಯಕ್ತಿಗೆ ಹೆಚ್ಚಿನ ಸ್ಥಳಾವಕಾಶ ಬೇಕಾಗಲಿದೆ. ಮನೆಯಿಂದ ಶೇಕಡಾ 25 ರಷ್ಟು ಮಂದಿ ಕೆಲಸ ಮಾಡುವುದರಿಂದ ಹೆಚ್ಚುವರಿ ಸ್ಥಳ ದೊರೆಯಲಿದೆ. ಜನರಿಗೆ ಕಚೇರಿಗಳಲ್ಲಿ ಸ್ಥಳ ಹೆಚ್ಚು ಹೆಚ್ಚಾಗಿ ಸಿಗಲಿದೆ. ಹಾಗಾಗಿ ಮುಂದಿನ ಒಂದು ವರ್ಷದವರೆಗೆ ಮಾರುಕಟ್ಟೆ (ಕಚೇರಿ ಸ್ಥಳ ವಿಭಾಗ) ಬಹಳಷ್ಟು ಕಡಿಮೆ ಬೇಡಿಕೆಯನ್ನು ಹೊಂದಿರಲಿದೆ. ಆ ನಂತರ ಅದು ಸಾಮಾನ್ಯ ವೇಗದಲ್ಲಿ ಬೆಳೆಯುತ್ತದೆ "ಎಂದು ಅವರು ಹೇಳಿದರು.

ಉದ್ಯೋಗ ನಷ್ಟ ಮತ್ತು ವೇತನ ಕಡಿತದ ಬಗ್ಗೆ ಆತಂಕ ವ್ಯಕತಪಡಿಸಿದ ಪೈ, ಹೆಚ್ಚಿನ ಐಟಿ ಕಂಪನಿಗಳು ಈ ವರ್ಷ ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವುದಿಲ್ಲ. ಈಗಾಗಲೇ ನೇಮಕ ಮಾಡಿಕೊಂಡ ನೌಕರರ ಬದ್ದತೆಯನ್ನು ಪೂರೈಸಲಾಗುತ್ತದೆ. ಹೊರತಾಗಿ ಹೊಸ ನೇಮಕಾತಿಗಳು ರದ್ದಾಗಲಿದೆ ಎಂದರು.

 

ಇದಲ್ಲದೆ ವೇತನ ಕಡಿತ ಇರುತ್ತದೆ, ಆದರೆ ಹೆಚ್ಚಿನವರಿಗೆ ವೇತನ ಹೆಚ್ಚಳವಾಗುವುದಿಲ್ಲ. ವೆಚ್ಚವನ್ನು ಸರಿಹೊಂದಿಸಲು ಉನ್ನತ ಮಟ್ಟದವರ ಸಂಬಳವನ್ನು ಕಡಿತಗೊಳಿಸುತ್ತಾರೆ. ಯಾರು ತಿಂಗಳಿಗೆ 75,000 ರಿಂದ ಒಂದು ಲಕ್ಷ ರೂ. ಪಡೆಯುತ್ತಾರೆಯೋ ಅವರು ವೇತನ ಕಡಿತವನ್ನು ನೋಡಲಿದ್ದಾರೆ. ಅವರ ವೇತನ ಕಡಿತ ಪ್ರಮಾಣ 20 ರಿಂದ 25 ಪರ್ಸೆಂಟ್ ಆಗಿರಲಿದೆ ಎಂದು ಹೇಳಿದ್ದಾರೆ.

ಆದರೆ ಅದಕ್ಕಿಂತ ಕಡಿಮೆ ವೇತನವನ್ನು ಪಡೆಯುವವರಿಗೆ ವೇತನ ಕಡಿತ ಆಗುವುದಿಲ್ಲ ಎಂದು ಪೈ ಹೇಳಿದ್ದಾರೆ.

English summary

IT Services Companies To Suspend Hirng This Year Said Mohandas Pai

India's IT services industry would see hiring freeze this year and senior level staff taking a 20-25 per cent salary cut due to the adverse impact of the coronavirus pandemic, says T V Mohandas Pai
Story first published: Wednesday, April 29, 2020, 9:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X