For Quick Alerts
ALLOW NOTIFICATIONS  
For Daily Alerts

ಐಟಿಸಿ ಎರಡನೇ ತ್ರೈಮಾಸಿಕ ಲಾಭ 20% ಕುಸಿತ

|

ಸಿಗರೇಟ್ ನಿಂದ ಹೋಟೆಲ್ ಗಳ ತನಕ ವಿವಿಧ ವ್ಯವಹಾರ ನಡೆಸುವ ಐಟಿಸಿ ಶುಕ್ರವಾರದಂದು (ನವೆಂಬರ್ 6, 2020) ಜುಲೈನಿಂದ ಸೆಪ್ಟೆಂಬರ್ ಅವಧಿಯ ಎರಡನೇ ತ್ರೈಮಾಸಿಕದ ಫಲಿತಾಂಶ ಪ್ರಕಟಿಸಿದೆ. ನಿವ್ವಳ ಲಾಭ 3,232.40 ಕೋಟಿ ರುಪಾಯಿ ದಾಖಲಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಲ್ಲಿ ಲಾಭದ ಪ್ರಮಾಣ 19.65% ಕಡಿಮೆ ಆಗಿದೆ.

ಕಳೆದ ವರ್ಷ ಇದೇ ತ್ರೈಮಾಸಿಕದ ಅವಧಿಯಲ್ಲಿ ಐಟಿಸಿಯಿಂದ 4023.10 ಕೋಟಿ ರುಪಾಯಿ ಲಾಭ ದಾಖಲಿಸಲಾಗಿತ್ತು. ಕಾರ್ಯ ನಿರ್ವಹಣೆ ಮೂಲಕ ಐಟಿಸಿಗೆ ಬರುವ ಆದಾಯ ಕೇವಲ 0.1% ಹೆಚ್ಚಳವಾಗಿದೆ. ಈ ಬಾರಿ 11,976.75 ಕೋಟಿ ಆದಾಯ ಬಂದಿದ್ದರೆ, ಕಳೆದ ವರ್ಷ 11,871.47 ಕೋಟಿ ಬಂದಿತ್ತು.

ಈ ವಾರದಲ್ಲಿ ಸೆನ್ಸೆಕ್ಸ್ 2279, ನಿಫ್ಟಿ 621 ಪಾಯಿಂಟ್ ಗಳ ಏರಿಕೆಈ ವಾರದಲ್ಲಿ ಸೆನ್ಸೆಕ್ಸ್ 2279, ನಿಫ್ಟಿ 621 ಪಾಯಿಂಟ್ ಗಳ ಏರಿಕೆ

ಸಿಗರೇಟ್ ವ್ಯವಹಾರದ ಮೂಲಕ ಒಟ್ಟಾರೆ ಬಂದ ಆದಾಯ 5121.30 ಕೋಟಿ ರುಪಾಯಿ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ 5326.83 ಕೋಟಿ ಬಂದಿತ್ತು. ಆದರೆ ಎಫ್ ಎಂಸಿಜಿ ವ್ಯವಹಾರದಿಂದ 3794.95 ಕೋಟಿ ಬಂದಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 3288.31 ಕೋಟಿ ರುಪಾಯಿ ಆದಾಯ ಬಂದಿತ್ತು. ಆ ಆದಾಯದಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚಳವಾಗಿದೆ.

ಐಟಿಸಿ ಎರಡನೇ ತ್ರೈಮಾಸಿಕ ಲಾಭ 20% ಕುಸಿತ

ಹೋಟೆಲ್ ಆದಾಯದಲ್ಲಿ ಮಾತ್ರ ಭಾರೀ ಹಿನ್ನಡೆ ಆಗಿದ್ದು, ಕಳೆದ ವರ್ಷ ಈ ಅವಧಿಯಲ್ಲಿ 426.63 ಕೋಟಿ ರುಪಾಯಿ ಆದಾಯ ಬಂದಿತ್ತು. ಅದೀಗ 81.96 ಕೋಟಿ ಆಗಿದೆ. ಕೃಷಿ ವ್ಯವಹಾರದ ಮೂಲಕ ವರ್ಷದ ಹಿಂದೆ 2647.52 ಕೋಟಿ ಬಂದಿತ್ತು. ಈ ಬಾರಿ ಆ ಆದಾಯ 2985.26 ಕೋಟಿ ಆಗಿದೆ.

ಐಟಿಸಿ ಫಲಿತಾಂಶಕ್ಕೆ ಮುಂಚಿತವಾಗಿ ಕಂಪೆನಿಯ ಷೇರುಗಳು 0.49% ಇಳಿಕೆಯಾಗಿ, ಶುಕ್ರವಾರದ ದಿನದ ಕೊನೆಗೆ 173.95 ರುಪಾಯಿಗೆ ವಹಿವಾಟು ಚುಕ್ತಾ ಮಾಡಿತು.

English summary

ITC FY21 Q2 Net Profit Down By 20 Percent

ITC FY21 Q2 net profit down by 19.65%. Here is the details of revenue from various business.
Story first published: Friday, November 6, 2020, 21:57 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X