For Quick Alerts
ALLOW NOTIFICATIONS  
For Daily Alerts

ಜಿಯೋ ಟ್ರೂ 5G ಸೇವೆ ಬೆಂಗಳೂರು, ಹೈದರಾಬಾದ್‌ನಲ್ಲಿ ಆರಂಭ

|

ಜಿಯೋ ಟ್ರೂ- 5G ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಬೆಂಗಳೂರು ಮತ್ತು ಹೈದರಾಬಾದ್‌ಗೂ ಈಗ ಜಿಯೋ ಟ್ರೂ 5G ದೊರೆಯುತ್ತದೆ. ಈ ಹಿಂದೆ ಪ್ರಮುಖ ಆರು ನಗರಗಳಲ್ಲಿ ಜಿಯೋ ಟ್ರೂ- 5G ಸೇವೆಗಳ ಯಶಸ್ವಿ ಆರಂಭ ಮಾಡಲಾಗಿತ್ತು.

 

ಮುಂಬೈ, ದೆಹಲಿ, ಕೋಲ್ಕತ್ತಾ, ಚೆನ್ನೈ, ವಾರಾಣಸಿ ಮತ್ತು ನಾಥದ್ವಾರ- ಹೀಗೆ ಆರು ನಗರಗಳಲ್ಲಿ ಜಿಯೋ ಟ್ರೂ- 5G ಸೇವೆಗಳ ಯಶಸ್ವಿ ಬೀಟಾ-ಅನಾವರಣ ಆದ ನಂತರದಲ್ಲಿ ಇದೀಗ ಜಿಯೋ ಹೆಚ್ಚಿನ ನಗರಗಳಲ್ಲಿ ಜಿಯೋ ಟ್ರೂ- 5G ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಬೆಂಗಳೂರು ಮತ್ತು ಹೈದರಾಬಾದ್‌ಗೂ ಈಗ ಜಿಯೋ ಟ್ರೂ 5G ದೊರೆಯುತ್ತದೆ.

ನವೆಂಬರ್ 10ರಿಂದ ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿರುವ ಜಿಯೋ ಬಳಕೆದಾರರನ್ನು ಜಿಯೋ ವೆಲ್‌ಕಮ್ ಆಫರ್‌ಗೆ ಆಹ್ವಾನಿಸಲಾಗುತ್ತದೆ, ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1 ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾವನ್ನು ಈ ಮೂಲಕ ಪಡೆಯಬಹುದಾಗಿದೆ.

ಜಿಯೋ ಟ್ರೂ 5G ಸೇವೆ ಬೆಂಗಳೂರು, ಹೈದರಾಬಾದ್‌ನಲ್ಲಿ ಆರಂಭ

ಜಿಯೋ ಟ್ರೂ 5Gಯು ಈ ಎರಡೂ ತಂತ್ರಜ್ಞಾನ ಕೇಂದ್ರಿತ ನಗರಗಳಲ್ಲಿ ಮಾನವೀಯತೆಗೆ ಸೇವೆ ಸಲ್ಲಿಸುವ ಮತ್ತು ಭಾರತೀಯರ ಜೀವನದ ಗುಣಮಟ್ಟ ಸುಧಾರಿಸುವ ಕೆಲವು ಇತ್ತೀಚಿನ ತಂತ್ರಜ್ಞಾನಗಳ ನಿಜವಾದ ಸಾಮರ್ಥ್ಯವನ್ನು ಅರಿಯುವುದಕ್ಕೆ ಸಹಾಯ ಮಾಡುತ್ತದೆ.

ಅತ್ಯುತ್ತಮ ಗ್ರಾಹಕ ಅನುಭವ ಖಚಿತ ಮಾಡಿಕೊಳ್ಳಲು ಜಿಯೋದಿಂದ ಸುಧಾರಿತ ಟ್ರೂ 5G ಸೇವೆಗಳನ್ನು ಹಂತ-ಹಂತವಾಗಿ ಹೊರತರುತ್ತಿದೆ. ಜಿಯೋ ಟ್ರೂ 5G ಅನುಭವವನ್ನು ಈಗಾಗಲೇ ಆರು ನಗರಗಳಲ್ಲಿ ಲಕ್ಷಗಟ್ಟಲೆ ಬಳಕೆದಾರರು ಪಡೆಯುತ್ತಿದ್ದಾರೆ. ಇದಕ್ಕೆ ದೊರೆಯುತ್ತಿರುವ ಪ್ರತಿಕ್ರಿಯೆ ಅತ್ಯಂತ ಧನಾತ್ಮಕವಾಗಿದೆ ಮತ್ತು ಭರವಸೆ ನೀಡುತ್ತದೆ. ಜಿಯೋ ಜಾಗತಿಕವಾಗಿ ಅತ್ಯಾಧುನಿಕ 5G ನೆಟ್‌ವರ್ಕ್ ಅನ್ನು ರೂಪಿಸುವುದಕ್ಕೆ ಗ್ರಾಹಕರ ಒಳನೋಟಗಳು ಮತ್ತು ಪ್ರತಿಕ್ರಿಯೆಯು ಸಹಾಯ ಮಾಡುತ್ತಿದೆ.

ಜಿಯೋ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ 500 ಎಂಬಿಪಿಎಸ್‌ (Mbps)ನಿಂದ 1 ಜಿಬಿಪಿಎಸ್ (Gbps)ವರೆಗೆ ಎಲ್ಲಿಯಾದರೂ ವೇಗದ ಅನುಭವವನ್ನು ಪಡೆಯುತ್ತಿದ್ದಾರೆ ಹಾಗೂ ಅತಿ ಹೆಚ್ಚು ಪ್ರಮಾಣದಲ್ಲಿ ಡೇಟಾ ಬಳಸುತ್ತಿದ್ದಾರೆ. ಇದಕ್ಕೆ ಕಾರಣ ಆಗಿರುವುದು ಜಿಯೋ ಟ್ರೂ- 5Gಯ ಮೂರು ಪಟ್ಟು ಅನುಕೂಲಗಳು, ಆದ್ದರಿಂದಲೇ ಇದು ಭಾರತದಲ್ಲಿನ ಏಕೈಕ ನಿಜವಾದ 5G ನೆಟ್‌ವರ್ಕ್ ಆಗಿದೆ:

 

1. 4G ನೆಟ್‌ವರ್ಕ್‌ನ ಮೇಲೆ ಯಾವುದೇ ಅವಲಂಬನೆ ಇಲ್ಲದೆ ಸುಧಾರಿತ 5G ನೆಟ್‌ವರ್ಕ್‌ನೊಂದಿಗೆ ಅದ್ವಿತೀಯ 5G ಆರ್ಕಿಟೆಕ್ಚರ್.

2. 700 MHz, 3500 MHz, ಮತ್ತು 26 GHz ಬ್ಯಾಂಡ್‌ಗಳಾದ್ಯಂತ 5G ಸ್ಪೆಕ್ಟ್ರಮ್‌ನ ದೊಡ್ಡ ಮತ್ತು ಉತ್ತಮ ಮಿಶ್ರಣ.

3. ಕ್ಯಾರಿಯರ್ ಅಗ್ರಿಗೇಷನ್ ಎಂಬ ಸುಧಾರಿತ ತಂತ್ರಜ್ಞಾನ ಬಳಸಿಕೊಂಡು ಈ 5G ಫ್ರೀಕ್ವೆನ್ಸಿಗಳನ್ನು ಏಕರೂಪದ "ಡೇಟಾ ಹೈವೇ" ಆಗಿ ಯಾವುದೇ ಅಡೆತಡೆ ಇಲ್ಲದೆ ಸಂಯೋಜಿಸುತ್ತದೆ.

English summary

Jio True 5G Launched in Bengaluru and Hyderabad, Details in Kannada

Jio is extending Jio True-5G’s reach across more cities, namely Bengaluru & Hyderabad. Details in Kannada.
Story first published: Thursday, November 10, 2022, 21:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X