For Quick Alerts
ALLOW NOTIFICATIONS  
For Daily Alerts

ಜೋ ಬೈಡೆನ್ ಜಯದ ಕಾರಣಕ್ಕೆ ದಾಖಲೆ ಎತ್ತರಕ್ಕೆ ಏರಬಹುದು ಸೆನ್ಸೆಕ್ಸ್

|

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡೆನ್ ಗೆಲುವು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆ ಸೂಚ್ಯಂಕಗಳು ಮುಂದಿನ ವಾರ ಕೂಡ ಏರಿಕೆ ಮುಂದುವರಿಸುವ ಸಾಧ್ಯತೆ ಇದೆ. ಫಾರಿನ್ ಪೋರ್ಟ್ ಫೋಲಿಯೋ ಇನ್ವೆಸ್ಟರ್ಸ್ (ಎಫ್ ಪಿಐ) ಹೂಡಿಕೆ ದೊಡ್ಡ ಮೊತ್ತದಲ್ಲಿ ಹರಿದು ಬಂದಿದ್ದರಿಂದ ಸೆನ್ಸೆಕ್ಸ್ ಕಳೆದ ವಾರ ಐದು ಪರ್ಸೆಂಟ್ ಹೆಚ್ಚಳ ದಾಖಲಿಸಿತ್ತು.

 

ಹಾಗೆ ನೋಡಿದರೆ ಸೆನ್ಸೆಕ್ಸ್ 42,400 ಪಾಯಿಂಟ್ ದಾಟುವ ಹಂತದಲ್ಲಿದೆ. ಸೂಚ್ಯಂಕವು ಈ ವರ್ಷದ ಮಾರ್ಚ್ ನಲ್ಲಿ 26000 ಪಾಯಿಂಟ್ ಸಮೀಪ ಇತ್ತು. ಅಲ್ಲಿಂದ ಈಗ ಸಾರ್ವಕಾಲಿಕ ದಾಖಲೆ ಸಮೀಪದಲ್ಲಿ ವಹಿವಾಟು ನಡೆಸುತ್ತಿದೆ. ಕೊರೊನಾ ಬಿಕ್ಕಟ್ಟಿನ ಆತಂಕದಲಿ ಮಾರ್ಚ್ ನಲ್ಲಿ ಸೆನ್ಸೆಕ್ಸ್ 26000 ಪಾಯಿಂಟ್ ಸಮೀಪ ತಲುಪಿತ್ತು.

 

5 ದಿನದಲ್ಲಿ 9 ಕಂಪೆನಿಗಳ ಮಾರುಕಟ್ಟೆ ಮೌಲ್ಯ 2.30 ಲಕ್ಷ ಕೋಟಿ ಹೆಚ್ಚಳ5 ದಿನದಲ್ಲಿ 9 ಕಂಪೆನಿಗಳ ಮಾರುಕಟ್ಟೆ ಮೌಲ್ಯ 2.30 ಲಕ್ಷ ಕೋಟಿ ಹೆಚ್ಚಳ

ಆ ನಂತರ ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ಬ್ಯಾಂಕ್ ಗಳ ಜತೆಗೆ ನೇತೃತ್ವದಲ್ಲಿ ಭರ್ಜರಿ ಏರಿಕೆ ದಾಖಲಾಗುತ್ತಾ ಬಂತು. ಆರ್ಥಿಕ ಚಟುವಟಿಕೆಗಳಲ್ಲಿ ತೀಕ್ಷ್ಣವಾಗಿ ಚೇತರಿಸಿಕೊಂಡಿದ್ದು ಸಹ ಈ ಏರಿಕೆಗೆ ಒಂದು ಕಾರಣ. ಈಗ ಆರ್ಥಿಕ ತಜ್ಞರು 'V' ಆಕಾರದ ಚೇತರಿಕೆ ಬಗ್ಗೆ ಹೇಳುತ್ತಿದ್ದಾರೆ.

ಜೋ ಬೈಡೆನ್ ಜಯದ ಕಾರಣಕ್ಕೆ ದಾಖಲೆ ಎತ್ತರಕ್ಕೆ ಏರಬಹುದು ಸೆನ್ಸೆಕ್ಸ್

ಒಂದು ವಾರಗಳಷ್ಟು ಮತ ಎಣಿಕೆ ನಡೆದ ನಂತರ ಡೆಮಾಕ್ರಟ್ ಅಭ್ಯರ್ಥಿ ಜೋ ಬೈಡೆನ್ ಚುನಾವಣೆ ಗೆದ್ದು, ಯುಎಸ್ ಗೆ ನಲವತ್ತಾರನೇ ಅಧ್ಯಕ್ಷರಾಗಿದ್ದಾರೆ ಎಂದು ಅಲ್ಲಿನ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. "ಇಂಥ ಮಹಾನ್ ದೇಶ ಮುನ್ನಡೆಸುವುದಕ್ಕೆ ನನ್ನನ್ನು ಆಯ್ಕೆ ಮಾಡಿಕೊಂಡಿರುವುದು ಗೌರವದ ಸಂಗತಿ. ನಮ್ಮ ಮುಂದಿರುವುದು ಕಷ್ಟದ ಕೆಲಸ. ಆದರೆ ನಿಮಗೆ ಮಾತು ನೀಡುತ್ತೇನೆ; ನಾನು ಎಲ್ಲ ಅಮೆರಿಕನ್ನರಿಗೂ ಅಧ್ಯಕ್ಷನಾಗಿರುತ್ತೇನೆ- ನೀವು ನನಗೆ ಮತ ಹಾಕಿದರೂ ಅಥವಾ ಹಾಕದಿದ್ದರೂ. ನೀವು ನನ್ನ ಮೇಲೆ ಇಟ್ಟ ನಂಬಿಕೆ ಉಳಿಸಿಕೊಳ್ಳುತ್ತೇನೆ," ಎಂದು ಬೈಡೆನ್ ಹೇಳಿದ್ದಾರೆ.

ಮುಂದಿನ ಕೆಲವು ವಾರಗಳ ಕಾಲ ಜಾಗತಿಕ ಮಾರ್ಕೆಟ್ ನಲ್ಲಿ ಏರಿಕೆ ಕಾಣುವ ಸಾಧ್ಯತೆ ಇದೆ. ಈ ವರ್ಷದ ಕೊನೆಗೆ ಮಾರ್ಕೆಟ್ ಉತ್ತಮ ಅಂತ್ಯವನ್ನು ಕಾಣಲಿದೆ. ಯಾರು ಮಾರ್ಕೆಟ್ ಇಳಿಕೆ ಕಾಣಬಹುದು ಎಂದು ನಿರೀಕ್ಷೆ ಮಾಡುತ್ತಿರುತ್ತಾರೋ ಅಂಥವರು ಪ್ರವೇಶಿಸಬಾರದು. ಏಕೆಂದರೆ ಕಳೆದ ಕೆಲ ತಿಂಗಳಿಂದಲೇ ಮಾರ್ಕೆಟ್ ಏರಿಕೆ ದಾಖಲಿಸುತ್ತಾ ಬಂದಿದೆ.

English summary

Joe Biden Victory In US May Lead Sensex To Record Highs

US presidential elections: Joe Biden victor may lead sensex to record highs. Here is an analysis.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X