For Quick Alerts
ALLOW NOTIFICATIONS  
For Daily Alerts

ಕುವೈತ್ ಉದ್ಯೋಗದ ಕನಸು ಕಂಡವರಿಗೆ ಶಾಕಿಂಗ್ ನ್ಯೂಸ್

|

ಕುವೈತ್ ನಲ್ಲಿರುವ ವಲಸಿಗರ ಜನಸಂಖ್ಯೆ ಪ್ರಮಾಣವನ್ನು 70ರಿಂದ 30 ಪರ್ಸೆಂಟ್ ಗೆ ಇಳಿಸಲು ತೀರ್ಮಾನಿಸಲಾಗಿದೆ. ಜನಸಂಖ್ಯೆ ಅಸಮಾನತೆಯನ್ನು ನಿವಾರಿಸುವ ಸಲುವಾಗಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಪ್ರಧಾನಮಂತ್ರಿ ಬುಧವಾರ ತಿಳಿಸಿದ್ದಾರೆ. ಗಲ್ಫ್ ಅರಬ್ ನ ಇತರೆಡೆಗಳಲ್ಲಿ ಇರುವಂತೆಯೇ ಕುವೈತ್ ನಲ್ಲಿ ವಿದೇಶಿಗರ ಸಂಖ್ಯೆ ಹೆಚ್ಚು. ಅದರಲ್ಲೂ ಮಧ್ಯಪ್ರಾಚ್ಯ ಹಾಗೂ ಏಷ್ಯಾದ ಕಾರ್ಮಿಕರ ಸಂಖ್ಯೆ ಹೆಚ್ಚು.

ಕುವೈತ್ ಒಟ್ಟು ಜನಸಂಖ್ಯೆ 48 ಲಕ್ಷ ಇದ್ದರೆ, ಅದರಲ್ಲಿ ವಿದೇಶಿಗರು 33 ಲಕ್ಷ ಇದ್ದಾರೆ ಎಂದು ಪ್ರಧಾನಿ ಸಬಾ ಅಲ್- ಖಲೇದ್ ಅಲ್- ಹಮದ್ ಅಲ್- ಸಬಾ ತಿಳಿಸಿದ್ದಾರೆ. ಕುವೈತ್ ಮೂಲ ನಿವಾಸಿಗಳು 70 ಪರ್ಸೆಂಟ್ ಹಾಗೂ ಹೊರಗಿನವರು 30 ಪರ್ಸೆಂಟ್ ಇದ್ದಲ್ಲಿ ಅದು ಸರಿಯಾದ ಲೆಕ್ಕಾಚಾರ ಆಗುತ್ತದೆ ಎಂದು ಸ್ಥಳೀಯ ನಿಯತಕಾಲಿಕೆಗಳ ಸಂಪಾದಕರ ಜತೆಗಿನ ಸಭೆಯಲ್ಲಿ ಹೇಳಿದ್ದಾರೆ.

ಈ ಜನಸಂಖ್ಯೆ ಅಸಮತೋಲನವನ್ನು ಸರಿಪಡಿಸುವ ನಿಟ್ಟಿನಲ್ಲಿ ಭವಿಷ್ಯದಲ್ಲಿ ದೊಡ್ಡ ಸವಾಲು ಎದುರಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ. ತೈಲ ಬೆಲೆಯಲ್ಲಿ ಭಾರೀ ಕುಸಿತ ಆಗಿರುವುದರಿಂದ ಕುವೈತ್ ಬಜೆಟ್ ಮೇಲೂ ಪರಿಣಾಮ ಆಗಿದೆ. ಆ ಕಾರಣಕ್ಕೆ ಕುವೈತ್ ಮೂಲ ನಿವಾಸಿಗಳಿಗೆ ಹೆಚ್ಚಿನ ಉದ್ಯೋಗ ಒದಗಿಸಬೇಕಾದ ದಾರಿ ಕಂಡುಕೊಳ್ಳಬೇಕಿದೆ.

ಕುವೈತ್ ಉದ್ಯೋಗದ ಕನಸು ಕಂಡವರಿಗೆ ಶಾಕಿಂಗ್ ನ್ಯೂಸ್

ಕೊರೊನಾದಿಂದ ಉದ್ಭವಿಸಿರುವ ಬಿಕ್ಕಟ್ಟಿನ ಪರಿಣಾಮವಾಗಿ ಸರ್ಕಾರಿ ಸ್ವಾಮ್ಯದ ಕುವೈತ್ ಏರ್ ವೇಸ್ ನಿಂದ ಕಳೆದ ವಾರವಷ್ಟೇ ಸಾವಿರದೈನೂರು ವಲಸಿಗ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ನಿರ್ಧರಿಸಲಾಗಿದೆ.

English summary

Kuwait Wants To Reduce Migrant Population

To maintain demographic balance, Kuwait wants to reduce migrant population.
Story first published: Thursday, June 4, 2020, 8:27 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X