For Quick Alerts
ALLOW NOTIFICATIONS  
For Daily Alerts

Amazon Layoffs : ಮ್ಯಾನೆಜರ್‌ಗಳು ಸೇರಿ 20,000 ಉದ್ಯೋಗಿಗಳ ವಜಾಗೊಳಿಸಲು ಅಮೆಜಾನ್ ಸಜ್ಜು!

|

ಜಾಗತಿಕವಾಗಿ ಹಲವಾರು ಟೆಕ್ ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡುತ್ತಿದೆ. ಹಣದುಬ್ಬರ, ನಷ್ಟ ಮೊದಲಾದ ಕಾರಣದಿಂದಾಗಿ ಉದ್ಯೋಗಿಗಳನ್ನು ಪ್ರಮುಖ ಸಂಸ್ಥೆಗಳು ವಜಾಗೊಳಿಸುತ್ತಲೇ ಇದೆ. ಈ ನಡುವೆ ಮುಂಬರುವ ದಿನದಲ್ಲಿ ಅಮೆಜಾನ್ ಒಂದಲ್ಲ ಎರಡಲ್ಲ ಬರೋಬ್ಬರಿ 20 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ಸಜ್ಜಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಅಮೆಜಾನ್ ಹವಲಾರು ಪ್ರದೇಶಗಳಲ್ಲಿ ವಿತರಣಾ ವಿಭಾಗಕ್ಕೆ ಸೇರಿದ ಜನರನ್ನು ಉದ್ಯೋಗದಿಂದ ವಜಾಗೊಳಿಸಬಹುದು. ಅಷ್ಟು ಮಾತ್ರವಲ್ಲದೆ ಮ್ಯಾನೆಜರ್‌ಗಳನ್ನು ಕೂಡಾ ಅಮೆಜಾನ್ ಉದ್ಯೋಗದಿಂದ ವಜಾಗೊಳಿಸಲಿದೆ. ಸಂಸ್ಥೆಯು ತಾಂತ್ರಿಕ ಸಿಬ್ಬಂದಿಗಳು ಸೇರಿದಂತೆ ಹಲವಾರು ಮಂದಿಯನ್ನು ಕೆಲಸದಿಂದ ವಜಾಗೊಳಿಸಲಿದೆ.

ಡಿಸೆಂಬರ್ ಕೊನೆಗೆ ಫುಡ್-ಡೆಲವರಿ ವಹಿವಾಟು ಸ್ಥಗಿತಗೊಳಿಸಲಿದೆ ಅಮೆಜಾನ್ ಇಂಡಿಯಾ!ಡಿಸೆಂಬರ್ ಕೊನೆಗೆ ಫುಡ್-ಡೆಲವರಿ ವಹಿವಾಟು ಸ್ಥಗಿತಗೊಳಿಸಲಿದೆ ಅಮೆಜಾನ್ ಇಂಡಿಯಾ!

ಇನ್ನು ಈ ಹಿಂದೆಯೂ ಸಂಸ್ಥೆಯು ಉದ್ಯೋಗಿಗಳನ್ನು ವಜಾಗೊಳಿಸುವ ಬಗ್ಗೆ ಮಾಹಿತಿ ನೀಡಿತ್ತು. ಸಿಇಒ ಆಂಡಿ ಜಸ್ಸಿ ಈ ಬಗ್ಗೆ ಸುಳಿವು ನೀಡಿದ್ದರು. ಆದರೆ ಎಷ್ಟು ಜನರನ್ನು ವಜಾ ಮಾಡಲಾಗುತ್ತದೆ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ. ಇನ್ನು ನವೆಂಬರ್‌ನಲ್ಲಿ ಹಲವಾರು ಮಾಧ್ಯಮಗಳಿಗೆ ಲಭ್ಯವಾದ ಮಾಹಿತಿ ಪ್ರಕಾರವಾಗಿ 10 ಸಾವಿರ ಮಂದಿಯನ್ನು ಕೆಲಸದಿಂದ ತೆಗೆದುಹಾಕಲಾಗುತ್ತದೆ ಎಂದು ವರದಿ ಮಾಡಲಾಗಿತ್ತು. ಆದರೆ ಈ ಸಂಖ್ಯೆಯು ದುಪ್ಪಟ್ಟಾಗಿದೆ. ಸಂಸ್ಥೆ 20 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಿದೆ ಎಂಬ ಮಾಹಿತಿ ಲಭಿಸಿದೆ.

20,000 ಉದ್ಯೋಗಿಗಳ ವಜಾಗೊಳಿಸಲು ಅಮೆಜಾನ್ ಸಜ್ಜು!

ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದೇಕೆ?

ಮುಂದಿನ ಕೆಲವು ತಿಂಗಳುಗಳ ಕಾಲ ಹಲವಾರು ಜನರನ್ನು ಉದ್ಯೋಗದಿಂದ ವಜಾ ಮಾಡಲಾಗುತ್ತಿದೆ. ಈ ಪ್ರಕ್ರಿಯೆ ಹಲವಾರು ತಿಂಗಳುಗಳ ಕಾಲ ನಡೆಯಲಿದೆ. ಸಂಸ್ಥೆಯು ಎಲ್ಲ ಪೂರ್ವಭಾವಿ ತಯಾರಿ ನಡೆಸಿದ ಬಳಿಕ ಈ ಬಗ್ಗೆ ಮಾಹಿತಿ ನೀಡುತ್ತದೆ. ಕೆಲಸವನ್ನು ಕಳೆದುಕೊಳ್ಳುವವರ ಸಂಖ್ಯೆಯು ಹೆಚ್ಚಾಗುವ ಸಾಧ್ಯತೆಯೂ ಕೂಡಾ ಇದೆ. ಪ್ರಮುಖವಾಗಿ ನಷ್ಟವನ್ನು ಸರಿದೂಗಿಸಲು, ಖರ್ಚನ್ನು ಕಡಿತಗೊಳಿಸಲು ಸಂಸ್ಥೆಯು ಈ ಕ್ರಮಕ್ಕೆ ಮುಂದಾಗಿದೆ ಎಂದು ಈ ಹಿಂದೆ ಅಮೆಜಾನ್ ಸಿಇಒ ತಿಳಿಸಿದ್ದಾರೆ.

ನಮ್ಮ ವಾರ್ಷಿಕ ಯೋಜನೆಯು ಹೊಸ ವರ್ಷದಲ್ಲಿಯೂ ಮುಂದುವರಿಯಲಿದೆ. ಅಂದರೆ ಹಲವಾರು ಮಂದಿಯನ್ನು ನಾವು ಕೆಲಸದಿಂದ ವಜಾಗೊಳಿಸುತ್ತೇವೆ. ಯಾರು ಕೆಲಸ ಕಳೆದುಕೊಳ್ಳುತ್ತಾರೆ ಎಂದು ನಾವು ಆ ಉದ್ಯೋಗಿಗಳಿಗೆಯೇ ಮಾಹಿತಿ ನೀಡುತ್ತೇವೆ. ಈ ಮಾಹಿತಿಯನ್ನು 2023ರಲ್ಲಿ ನೀಡಲಾಗುತ್ತದೆ ಎಂದು ಈ ಹಿಂದೆ ತಿಳಿಸಲಾಗಿತ್ತು.

ಎಷ್ಟು ಜನರನ್ನು ನಾವು ವಜಾಗೊಳಿಸುತ್ತೇವೆ ಎಂಬ ಬಗ್ಗೆ ಮಾಹಿತಿ ಈಗ ನೀಡಲಾಗದು. ಆದರೆ ಆಯಾ ವಿಭಾಗಕ್ಕೆ ಸಂಬಂಧಿಸಿದ ಮುಖ್ಯಸ್ಥರು ನಿಮಗೆ ಈ ಬಗ್ಗೆ ಸರಿಯಾದ ಸಮಯಕ್ಕೆ ಮಾಹಿತಿ ನೀಡಲಿದ್ದಾರೆ ಎಂದು ಈ ಹಿಂದೆ ಹೇಳಿದ್ದರು. ಹಾಗೆಯೇ ಯಾರು ಉದ್ಯೋಗವನ್ನು ಕಳೆದುಕೊಳ್ಳುತ್ತಾರೋ ಅವರೊಂದಿಗೆ ನಾವು ನೇರವಾಗಿ ಮಾತುಕತೆ ನಡೆಸುತ್ತೇವೆ. ಆ ಬಳಿಕ ಅವರನ್ನು ಉದ್ಯೋಗದಿಂದ ವಜಾಗೊಳಿಸಲಾಗುತ್ತದೆ ಎಂದು ಅಮೆಜಾನ್ ಸಿಇಒ ಹೇಳಿದ್ದರು.

English summary

Layoff Wagon: Amazon may fire 20,000 employees including top managers says report

Amazon is reportedly planning to lay off around 20,000 employees from the company. A huge layoff in Amazon will take take place in the coming months.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X