ಎಲ್ ಜಿ ಪಾಲಿಮರ್ಸ್ ವಿಷಾನಿಲ ದುರಂತವು ಕಂಪೆನಿ ಬೇಜವಾಬ್ದಾರಿ: ಸಮಿತಿ

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಮೇ 7, 2020ರಲ್ಲಿ ನಡೆದಿದ್ದ ಎಲ್ ಜಿ ಪಾಲಿಮರ್ಸ್ ವಿಷಾನಿಲ ದುರಂತ, ಆ ದಿನ ಹನ್ನೆರಡು ಮಂದಿ ಸಾವನ್ನಪ್ಪಿದ್ದು ನೆನಪಿದೆಯಾ? ಆ ದುರಂತದ ಬಗ್ಗೆ ವರದಿ ನೀಡುವುದಕ್ಕಾಗಿ ಸರ್ಕಾರ ನೇಮಿಸಿದ್ದ ಸಮಿತಿಯು ತನಿಖೆ ನಡೆಸಿ, ತನ್ನ ಅಭಿಪ್ರಾಯವನ್ನು ನೀಡಿದೆ. ಈ ಬಗ್ಗೆ ಸಮಿತಿಯ ವರದಿ ಮಂಗಳವಾರ (ಜುಲೈ 7, 2020) ಬಿಡುಗಡೆ ಮಾಡಲಾಗಿದೆ.

ಆ ವರದಿಯ ಪ್ರಕಾರ, ಜನರು ವಾಸಿಸದ ಸ್ಥಳಕ್ಕೆ ಎಲ್ ಜಿ ಪಾಲಿಮರ್ಸ್ ಘಟಕವನ್ನು ಸ್ಥಳಾಂತರಿಸುವಂತೆ ಶಿಫಾರಸು ಮಾಡಲಾಗಿದೆ. ದಕ್ಷಿಣ ಕೊರಿಯಾದ ಅತಿದೊಡ್ಡ ಪೆಟ್ರೋಕೆಮಿಕಲ್ ಉತ್ಪಾದಕ ಕಂಪೆನಿ ಎಲ್ ಜಿ ಕೆಮಿಕಲ್ ಗೆ ಸೇರಿದ ಒಂದು ಘಟಕ ಈ ಎಲ್ ಜಿ ಪಾಲಿಮರ್ಸ್. ಇದು ಬೇಜವಾಬ್ದಾರಿಯಿಂದ ನಡೆದುಕೊಂಡಿದೆ. ಎಲ್ ಜಿ ಪಾಲಿಮರ್ಸ್ ಘಟಕದ ಎಚ್ಚರಿಕೆ ವ್ಯವಸ್ಥೆಯು ಕೆಲಸ ಮಾಡುತ್ತಿರಲಿಲ್ಲ ಎಂದು ಸಮಿತಿ ಹೇಳಿದೆ.

ಎಲ್ ಜಿ ಪಾಲಿಮರ್ಸ್ ವಿಷಾನಿಲ ದುರಂತವು ಕಂಪೆನಿ ಬೇಜವಾಬ್ದಾರಿ: ಸಮಿತಿ

ಮೇ 7ನೇ ತಾರೀಕಿನ ಬೆಳ್ಳಂಬೆಳಗ್ಗೆ ವಿಶಾಖಪಟ್ಟಣದಲ್ಲಿ ಇರುವ ಎಲ್ ಜಿ ಪಾಲಿಮರ್ಸ್ ನಿಂದ ವಿಷಯುಕ್ತ ಸ್ಟೈರೀನ್ ಅನಿಲ ಬಿಡುಗಡೆ ಆಗಿತ್ತು. ಮಲಗಿದ್ದ ಸ್ಥಳದಲ್ಲೇ ಹಲವರು ಸಮಸ್ಯೆಗೆ ಗುರಿಯಾದರು ಹಾಗೂ ಹನ್ನೆರಡು ಮಂದಿ ಸಾವನ್ನಪ್ಪಿದ್ದರು. ಈ ಘಟನೆ ನಂತರ ಜನರು ವ್ಯಾಪಕ ಆಕ್ರೋಶ ಹೊರಹಾಕಿದ್ದರು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+