For Quick Alerts
ALLOW NOTIFICATIONS  
For Daily Alerts

ಎಲ್‌ಪಿಜಿ ದುಬಾರಿ: ಮತ್ತೆ ಸಿಲಿಂಡರ್‌ ಬೆಲೆ ಏರಿಕೆ

|

ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ತಕ್ಷಣದಿಂದಲೇ ಜಾರಿಗೆ ಬರುವಂತೆ 14 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 3.50 ರೂಪಾಯಿ ಹೆಚ್ಚಳ ಮಾಡಿದೆ. ಇದರಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 14 ಕೆಜಿ ಸಿಲಿಂಡರ್ ಬೆಲೆ ರೂಪಾಯಿ 1003ಕ್ಕೆ ಏರಿದೆ.

ಮುಂಬೈನಲ್ಲಿ ಪ್ರತಿ ಸಿಲಿಂಡರ್‌ಗೆ ದೇಶೀಯ ಎಲ್‌ಪಿಜಿ ಬೆಲೆ 1002.50 ರೂಪಾಯಿ ಆಗಲಿದೆ. ಬೆಂಗಳೂರಿನಲ್ಲಿ ಈಗಾಗಲೇ ಸಾವಿರ ರೂಪಾಯಿ ದಾಟಿದ್ದು ಇನಷ್ಟು ಹೆಚ್ಚಾಗಲಿದೆ. ಆದರೆ, ಕೋಲ್ಕತ್ತಾದಲ್ಲಿ ಗ್ರಾಹಕರು 14 ಕೆಜಿ ಸಿಲಿಂಡರ್‌ಗೆ 1,029 ರೂಪಾಯಿ ಪಾವತಿ ಮಾಡಬೇಕಾಗಿದೆ.

ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಹೊರೆ: ಗ್ರಾಹಕರಿಗೆ ಮತ್ತೆ ಬರೆಎಲ್‌ಪಿಜಿ ಸಿಲಿಂಡರ್‌ನ ಬೆಲೆ ಹೊರೆ: ಗ್ರಾಹಕರಿಗೆ ಮತ್ತೆ ಬರೆ

ಅದೇ ಸಮಯದಲ್ಲಿ ಗ್ರಾಹಕರು ಗೃಹಬಳಕೆಯ ಸಿಲಿಂಡರ್‌ಗಾಗಿ ಇಂದಿನಿಂದ ಚೆನ್ನೈನಲ್ಲಿ 1,058.50 ರೂಪಾಯಿ ಖರ್ಚು ಮಾಡಬೇಕಾಗಿದೆ. ಮೇ 7 ರಂದು, 14.2 ಕೆಜಿ ದೇಶೀಯ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಸಿಲಿಂಡರ್‌ನ ಬೆಲೆಯನ್ನು 50 ರೂಪಾಯಿ ಹೆಚ್ಚಳ ಮಾಡಲಾಗಿದೆ.

ಎಲ್‌ಪಿಜಿ ದುಬಾರಿ: ಮತ್ತೆ ಸಿಲಿಂಡರ್‌ ಬೆಲೆ ಏರಿಕೆ

ಈ ತಿಂಗಳ ಆರಂಭದಲ್ಲಿ, ಮೇ 1 ರಂದು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ದೆಹಲಿಯಲ್ಲಿ102 ಏರಿಕೆ ಮಾಡಲಾಗಿದ್ದು ದರವು 2,355.5 ಕ್ಕೆ ತಲುಪಿದೆ. 5 ಕೆಜಿಯ ಎಲ್‌ಪಿಜಿ ವಾಣಿಜ್ಯ ಸಿಲಿಂಡರ್‌ನ ಬೆಲೆಯೂ ರೂಪಾಯಿ 655ಕ್ಕೆ ಏರಿಕೆಯಾಗಿದೆ.

ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಎಲ್ಲಾ ಬೆಲೆ ಪರಿಷ್ಕರಣೆಯನ್ನು ಸ್ಥಗಿತ ಮಾಡಲಾಗಿತ್ತು. ಆದರೆ ಚುನಾವಣೆಯ ನಂತರ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಬೆಲೆಗಳನ್ನು ನಿರಂತರವಾಗಿ ಹೆಚ್ಚಿಸಲಾಗುತ್ತಿದೆ. ಮಾರ್ಚ್ 22 ರಂದು ಸಬ್ಸಿಡಿ ಹೊಂದಿರುವ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನಲ್ಲಿ ರೂಪಾಯಿ 50 ಏರಿಕೆಯಾಗಿದೆ. ಇದಕ್ಕೂ ಮೊದಲು ಅಕ್ಟೋಬರ್ 6, 2021ರ ನಂತರ, ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ದರದಲ್ಲಿ ಯಾವುದೇ ಬದಲಾವಣೆ ಇರಲಿಲ್ಲ.

English summary

LPG Cylinder Price Hike: Domestic Cylinder Price Increased Again

LPG cylinder price hike: Domestic Cylinder Price Increased Again by Rs 3.50, check new rates.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X