For Quick Alerts
ALLOW NOTIFICATIONS  
For Daily Alerts

ಸತತ 4 ತಿಂಗಳುಗಳಲ್ಲಿ ಎಲ್‌ಪಿಜಿ ಸಿಲಿಂಡರ್ ದರ ಏರಿಕೆಯ ಬಿಸಿ

By ಮಂಜುಳಾ
|

ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿ) ತನ್ನ ಮಾಸಿಕ ಬೆಲೆ ಪರಿಷ್ಕರಣೆಯಲ್ಲಿ ಸಬ್ಸಿಡಿ ರಹಿತ 14.2 ಕೆಜಿಯ ಎಲ್‌ಪಿಜಿ(ಲಿಕ್ವಿಡ್ ಪೆಟ್ರೋಲಿಯಂ ಗ್ಯಾಸ್) ನ ಬೆಲೆಯನ್ನು ಭಾರತದ ಕೆಲವು ನಗರಗಳಲ್ಲಿ ಭಾನುವಾರ (ಡಿಸೆಂಬರ್ 1) ಸರಾಸರಿ 15 ರುಪಾಯಿಗಳಷ್ಟು ಏರಿಸಿದೆ. ಅಂತರಾಷ್ಟ್ರೀಯ ಕಚ್ಚಾ ತೈಲವಸ್ತುಗಳ ಬೆಲೆಗಳ ಕುಸಿತದ ಹೊರತಾಗಿಯೂ, ನಾಲ್ಕು ತಿಂಗಳುಗಳಲ್ಲಿ ಸಿಲಿಂಡರ್ ಬೆಲೆ ಸತತ ಏರಿಕೆಯನ್ನು ಕಂಡಿದೆ.

ನಾಲ್ಕು ಮೆಟ್ರೋ ನಗರಗಳಲ್ಲಿ ಅಕ್ಟೋಬರ್ ತಿಂಗಳುಗಳಲ್ಲಿ ಸಬ್ಸಿಡಿ ರಹಿತ ಎಲ್‌ಪಿಜಿ 14.2 ಕೆ.ಜಿಯ ಸಿಲಿಂಡರ್ ಗಳ ಬೆಲೆಯಲ್ಲಿ ಸರಾಸರಿ 13.5 ರುಪಾಯಿಗಳಷ್ಟು ಹೆಚ್ಚಳವನ್ನು ಕಂಡಿತ್ತು. ನವೆಂಬರ್ ತಿಂಗಳಿನಲ್ಲಿ ಪ್ರತಿ ಸಿಲಿಂಡರ್‌ಗೆ 76.50 ರೂಪಾಯಿಗಳಷ್ಟು ದರ ಏರಿಕೆಯಾಗಿತ್ತು.

ಸತತ 4 ತಿಂಗಳುಗಳಲ್ಲಿ ಎಲ್‌ಪಿಜಿ ಸಿಲಿಂಡರ್ ದರ ಏರಿಕೆಯ ಬಿಸಿ

ಅಂತರರಾಷ್ಟ್ರೀಯ ಕಚ್ಚಾ ದರಗಳು ಮತ್ತು ರುಪಾಯಿ ವಿನಿಮಯ ದರಗಳ ಆಧಾರದ ಮೇಲೆ ಸರಕಾರಿ ಸ್ವಾಮ್ಯದ ತೈಲ ರಿಟೈಲರ್(ಚಿಲ್ಲರೆ ವ್ಯಾಪಾರಿಗಳು) ಗಳು ಈ ದರಗಳನ್ನು ನಿಗದಿಪಡಿಸುತ್ತಾರೆ. ದೇಶದ ಪ್ರಮುಖ ನಗರಗಳಲ್ಲಿನ ದರ ಬದಲಾವಣೆ ಈ ಕೆಳಗಿನಂತಿದೆ.

ನಗರಗಳುಪ್ರಸ್ತುತ ದರ(ಡಿ 1, 2019ಕ್ಕೆ ಅನ್ವಯವಾಗುವಂತೆ) ಹಿಂದಿನ ದರಬದಲಾವಣೆ
ದೆಹಲಿ695 ರುಪಾಯಿ681.50 ರುಪಾಯಿ13.50 ರುಪಾಯಿ
ಕೋಲ್ಕತ್ತಾ725.50 ರುಪಾಯಿ706 ರುಪಾಯಿ19.50 ರುಪಾಯಿ
ಮುಂಬೈ665 ರುಪಾಯಿ651 ರುಪಾಯಿ14 ರುಪಾಯಿ
ಚೆನ್ನೈ714 ರುಪಾಯಿ696 ರುಪಾಯಿ18 ರುಪಾಯಿ

ಭಾರತದಲ್ಲಿ ಪ್ರತೀ ಮನೆಗೂ ವರ್ಷಕ್ಕೆ ಗರಿಷ್ಟ 12 ಎಲ್ ಪಿಜಿ ಸಿಲಿಂಡರ್ ಗಳನ್ನು ಸಬ್ಸಿಡಿ ದರದಲ್ಲಿ ಪಡೆಯುವ ಅವಕಾಶವಿದೆ. ಅಲ್ಲದೇ, ಈ ಸಿಲಿಂಡರ್ ಗಳನ್ನು ಖರೀದಿಸುವ ಸಮಯದಲ್ಲಿ ಪೂರ್ಣ ಬೆಲೆ ತೆತ್ತು ಖರೀದಿಸಬೇಕಾಗಿದ್ದು ನಂತರ ಸಬ್ಸಿಡಿಯನ್ನು ಗ್ರಾಹಕರ ಬ್ಯಾಂಕ್ ಖಾತೆಗೆ ಸರಕಾರದಿಂದ ಜಮೆ ಮಾಡಲಾಗುತ್ತದೆ.

ಸಬ್ಸಿಡಿ ಪಡೆಯಲಾಗುವ ಈ ಸಿಲಿಂಡರ್ ಗಳ ಬೆಲೆ ಮತ್ತು ತೆರಿಗೆ ದರಗಳಲ್ಲಿ ಬದಲಾವಣೆಗಳ ಆಧಾರದ ಮೇಲೆ ಪ್ರತೀ ತಿಂಗಳು ಸಿಲಿಂಡರ್ ಖರೀದಿ ದರದಲ್ಲಿ ಏರುಪೇರಾಗುತ್ತದೆ. ಜೊತೆಗೆ, ಈ ಸಿಲಿಂಡರ್‌ಗಳ ಮೇಲೆ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ ) ಯನ್ನು ಮಾರುಕಟ್ಟೆ ದರಗಳ ಮೇಲೆ ಲೆಕ್ಕ ಹಾಕಲಾಗುತ್ತದೆ. ಗ್ರಾಹಕರು ತಮ್ಮ ಸ್ವ ಇಚ್ಚೆಯಿಂದ ಸಬ್ಸಿಡಿಯಿಂದ ಹೊರಗುಳಿಯುವ ಆಯ್ಕೆಯನ್ನೂ ಸಹ ಹೊಂದಬಹುದು.

English summary

LPG Cylinder Prices Raised For The 4th Strait Month

Prices of non-subsidized 14.2kg LPG cylinders were raised by an average of Rs 15. This is the 4th month of increase in rates.
Story first published: Monday, December 2, 2019, 19:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X