For Quick Alerts
ALLOW NOTIFICATIONS  
For Daily Alerts

ಕಳೆದ ವಾರದ ಟಾಪ್ 10 ಮೌಲ್ಯ: 2.53 ಟ್ರಿಲಿಯನ್ ರು ನಷ್ಟ

|

ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ಎಲ್ಲಾ ಕಂಪನಿಗಳು ಒಟ್ಟಾರೆ 2,53,394.63 ಕೋಟಿ ರು ಮೌಲ್ಯ ಇಳಿಸಿಕೊಂಡಿವೆ. ಇದಕ್ಕೂ ಹಿಂದಿನ ವಾರದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL), ಇನ್ಫೋಸಿಸ್ ಹಾಗೂ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ (ಟಿಸಿಎಸ್) ಹೆಚ್ಚು ಲಾಭಗಳಿಸಿದ್ದವು. ಆದರೆ, ಜಾಗತಿಕ ಮಾರುಕಟ್ಟೆ ಏರಿಳಿತದ ನಡುವೆ ಸ್ಥಳೀಯ ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಾಣಲಾಗಿದೆ

ಎಫ್‌ಪಿಐಗಳು ಲಾರ್ಜ್-ಕ್ಯಾಪ್‌ಗಳು ಮತ್ತು ಆಯ್ದ ಮಿಡ್ ಕ್ಯಾಪ್‌ಗಳಾದ್ಯಂತ ಲಾಭವನ್ನು ಕಾಯ್ದಿರಿಸಿದ್ದರಿಂದ ಬೆಂಚ್‌ಮಾರ್ಕ್ ಸೂಚ್ಯಂಕಗಳು ಕಳೆದ ವಾರ ಸುಮಾರು ಶೇಕಡಾ 4 ಕುಸಿತ ಕಂಡವು. ವಾರದ ಆಧಾರದ ಮೇಲೆ, ಸೆನ್ಸೆಕ್ಸ್ 2,185.85 ಪಾಯಿಂಟ್ ಅಥವಾ 3.57 ರಷ್ಟು ಕಳೆದುಕೊಂಡರೆ, ನಿಫ್ಟಿ 638.60 ಪಾಯಿಂಟ್ ಅಥವಾ 3.49 ರಷ್ಟು ಕುಸಿದಿದೆ. ಒಟ್ಟಾರೆ, 2.53 ಟ್ರಿಲಿಯನ್ ರು ಮೌಲ್ಯ ಕಳೆದುಕೊಂಡಿವೆ.

ಕೊರೊನಾವೈರಸ್ ಹೊಸ ರೂಪಾಂತರಿ ಅಲೆಯಿಂದ ಷೇರುಪೇಟೆ ವಹಿವಾಟು ಭಾರಿ ನಷ್ಟ ಅನುಭವಿಸಿದ್ದವು, ಟಾಪ್ ಕಂಪನಿಗಳು ಭಾರಿ ನಷ್ಟ ಅನುಭವಿಸಿದ್ದವು. ಯಾವ ಕಂಪನಿ ಮೌಲ್ಯ ಎಷ್ಟಾಗಿದೆ ಎಂಬ ವಿವರ ಮುಂದೆ ಓದಿ..

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆ ಮೌಲ್ಯ 40,974.25 ಕೋಟಿ ರು ಇಳಿಕೆ ಕಂಡು 16,76,291.69 ರು ಆಗಿದೆ. ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸರ್ ಹಾಗೂ ಎರಡನೇ ಅತಿ ದೊಡ್ಡ ಸಂಸ್ಥೆ ಇನ್ಫೋಸಿಸ್ ಕಳೆದ ಒಂದು ವಾರದಲ್ಲಿ ಒಟ್ಟಿಗೆ1,09,498.10 ಕೋಟಿ ರು ಮೌಲ್ಯ ಕಳೆದುಕೊಂಡಿವೆ

ಟಿಸಿಎಸ್ ಹಾಗೂ ಇನ್ಫೋಸಿಸ್

ಟಿಸಿಎಸ್ ಹಾಗೂ ಇನ್ಫೋಸಿಸ್

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) ಮೌಲ್ಯ ಭಾರಿ ಕುಸಿತ ಕಂಡು 14,18,530.72 ಕೋಟಿ ರು ಆಗಿದೆ. ಇನ್ಫೋಸಿಸ್ ಕಳೆದ ಒಂದು ವಾರದಲ್ಲಿ ಮೌಲ್ಯ ಇಳಿಸಿಕೊಂಡು 7,51,144.40 ಕೋಟಿ ರು ಮೌಲ್ಯ ಹೊಂದಿದೆ.

ಪ್ರಮುಖ ಬ್ಯಾಂಕುಗಳ ಮೌಲ್ಯ

ಪ್ರಮುಖ ಬ್ಯಾಂಕುಗಳ ಮೌಲ್ಯ

ಎಚ್‌ಡಿಎಫ್‌ಸಿ 13,563.15 ಕೋಟಿ ರು ಇಳಿಕೆ ಕಂಡು 8,42,876.13 ಕೋಟಿ ರು ತಲುಪಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 4,863.91 ಕೋಟಿ ರು ಏರಿಸಿಕೊಂಡು 4,48,729.47 ಕೋಟಿ ರು ಮೌಲ್ಯಕ್ಕೆ ಏರಿದೆ. ಐಸಿಐಸಿಐ ಬ್ಯಾಂಕ್ 10,811.98 ಕೋಟಿ ರು ಏರಿಕೆ ಕಂಡು 5,58,699.39 ಕೋಟಿ ರು ತಲುಪಿದೆ.

ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್

ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್

ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ 9,938.77 ಕೋಟಿ ರು ಇಳಿಕೆ ಕಂಡು 5,45,622.08 ಕೋಟಿ ರು ಮೌಲ್ಯ ಉಳಿಸಿಕೊಂಡಿದೆ. ಬಜಾಜ್ ಫೈನಾನ್ಸ್ 27,653.67 ಕೋಟಿ ರು ಏರಿಸಿಕೊಂಡು 4,45,033.13 ಕೋಟಿ ರುಗೆ ಇಳಿಕೆ ಕಂಡಿದೆ.
ಇದೇ ವೇಳೆ ಎಚ್‌ಡಿಎಫ್‌ಸಿ ಬ್ಯಾಂಕ್ 22,003.75 ಕೋಟಿ ರು ಮೌಲ್ಯ ಇಳಿಕೆ ಕಂಡು 4,69,422.38 ಕೋಟಿ ರು ತಲುಪಿದೆ. ಭಾರ್ತಿ ಏರ್ ಟೆಲ್ ಸಂಸ್ಥೆ ಮೌಲ್ಯಗಳು 14,087.05 ಕೋಟಿ ರು ಇಳಿಸಿಕೊಂಡು 3,81,723.36 ಕೋಟಿ ರುಗೆ ಹೆಚ್ಚಳ ಕಂಡಿದೆ.

ಟಾಪ್ 10 ಕಂಪನಿಗಳು

ಟಾಪ್ 10 ಕಂಪನಿಗಳು

ಒಟ್ಟಾರೆ, ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಐಸಿಐಸಿಐ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ಎಚ್‌ಡಿಎಫ್‌ಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬಜಾಜ್ ಫೈನಾನ್ಸ್ ಹಾಗೂ ಭಾರ್ತಿ ಏರ್ ಟೆಲ್.

English summary

M-cap of top-10 most valued companies erodes by over Rs 2.53 trn

The top-10 most valued companies suffered a combined erosion of Rs 2.53 lakh crore in market valuation last week, as the domestic equity benchmarks witnessed heavy selling
Story first published: Sunday, January 23, 2022, 16:30 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X