For Quick Alerts
ALLOW NOTIFICATIONS  
For Daily Alerts

ಬಿಡುಗಡೆಯಾದ ಆರು ತಿಂಗಳೊಳಗೆ ಯುನಿಕಾರ್ನ್ ಆದ ಮೆನ್ಸಾ ಬ್ರಾಂಡ್ಸ್‌!

|

ಮಿಂತ್ರಾದ ಮಾಜಿ ಸಿಇಒ ಮತ್ತು ಮೆಡ್‌ಲೈಫ್ ಸಹಸಂಸ್ಥಾಪಕ ಅನಂತ್ ನಾರಾಯಣನ್ ಸ್ಥಾಪಿಸಿದ ಬ್ರಾಂಡ್ಸ್‌ ಸಂಗ್ರಾಹಕ ಮತ್ತು ರೋಲ್-ಅಪ್ ಸಂಸ್ಥೆಯಾದ ಮೆನ್ಸಾ ಬ್ರಾಂಡ್ಸ್, ಯುನಿಕಾರ್ನ್ ಕ್ಲಬ್‌ಗೆ ಪ್ರವೇಶಿಸಿದೆ. ಆಲ್ಫಾ ವೇವ್ ವೆಂಚರ್ಸ್ ನೇತೃತ್ವದ ಹೊಸ ಫಂಡ್‌ 135 ಮಿಲಿಯನ್ ಡಾಲರ್‌ ಸಂಗ್ರಹದ ಬಳಿಕ ಮೆನ್ಸಾ ಬ್ರಾಂಡ್ಸ್ ಯುನಿಕಾರ್ನ್ ಆಗಿದೆ.

ಪ್ರೋಸಸ್ ವೆಂಚರ್ಸ್ ಹೊಸ ಹೂಡಿಕೆದಾರರಾಗಿದೆ. ಇದರಿಂದಾಗಿ ಮೆನ್ಸಾ ಬ್ರಾಂಡ್ಸ್‌ ಆರಂಭವಾದ ಆರು ತಿಂಗಳೊಳಗೆ ಒಂದು ಬಿಲಿಯನ್‌ ಡಾಲರ್‌ಗಿಂತಲೂ ಅಧಿಕ ಮೌಲ್ಯವನ್ನು ಗಳಿಸಿದ್ದು, ಯುನಿಕಾರ್ನ್‌ಗಳ ಗುಂಪಿಗೆ ಪ್ರವೇಶಿಸಿದೆ. ಒಂದು ಬಿಲಿಯನ್‌ ಡಾಲರ್‌ ಅಥವಾ ಅದಕ್ಕಿಂತ ಹೆಚ್ಚು ಹೂಡಿಕೆಯನ್ನು ಹೊಂದಿರುವ ಸಂಸ್ಥೆಗಳು ಭಾರತದಲ್ಲಿ ಯುನಿಕಾರ್ನ್ ಗುಂಪಿಗೆ ಸೇರುತ್ತದೆ.

ಐಟಿಆರ್‌ ದಾಖಲಿಗೂ ಮುನ್ನ ಎಐಎಸ್‌ ಮೂಲಕ ನಿಮ್ಮ ಆದಾಯ ಪರಿಶೀಲಿಸುವುದುದು ಹೇಗೆ?ಐಟಿಆರ್‌ ದಾಖಲಿಗೂ ಮುನ್ನ ಎಐಎಸ್‌ ಮೂಲಕ ನಿಮ್ಮ ಆದಾಯ ಪರಿಶೀಲಿಸುವುದುದು ಹೇಗೆ?

ಮೆನ್ಸಾ ಒಟ್ಟಾರೆಯಾಗಿ ಈಕ್ವಿಟಿ ಮತ್ತು ಸಾಲ ನಿಧಿಯಾಗಿ 300 ಮಿಲಿಯನ್ ಡಾಲರ್‌ ಅನ್ನು ಸಂಗ್ರಹಿಸಿದೆ. "ಈಗಾಗಲೇ ಮೆನ್ಸಾ ಹನ್ನೆರಡು ಬ್ರಾಂಡ್‌ಗಳನ್ನು ಸ್ವಾಧೀನಪಡಿಸಿಕೊಂಡಿದೆ. ಹಾಗೆಯೇ ಅಂತಹ ಇನ್ನೂ 20 ಡೀಲ್‌ಗಳು ಮುಕ್ತಾಯ ಮಾಡಲಿದೆ," ಎಂದು ಅನಂತ್ ನಾರಾಯಣನ್ ತಿಳಿಸಿದ್ದಾರೆ. ಮೆನ್ಸಾ ತನ್ನ ಖಾತೆಯನ್ನು ಅಭಿವೃದ್ದಿ ಮಾಡುವ ನಿಟ್ಟಿನಲ್ಲಿ ನಿಧಿಯನ್ನು ಬಳಕೆ ಮಾಡಲು ಮುಂದಾಗಿದೆ. ಹಾಗೆಯೇ ಹೊಸ ಬಂಡವಾಳವನ್ನು ಹೂಡಿಕೆ ಮಾಡಿ ಅದನ್ನು ಟೆಕ್‌ ವೇದಿಕೆಗಳ ಹಾಗೂ ಇತರ ಬೆಳವಣಿಗೆಗಾಗಿ ಬಳಸಲಿದೆ.

 ಬಿಡುಗಡೆಯಾದ ಆರು ತಿಂಗಳೊಳಗೆ ಯುನಿಕಾರ್ನ್ ಆದ ಮೆನ್ಸಾ ಬ್ರಾಂಡ್ಸ್‌!

"ನಾವು ನಿಜವಾಗಿಯೂ ಪ್ಲಾಟ್‌ಫಾರ್ಮ್ ನ್ಯೂಟ್ರಲ್‌ಗಳು. ನಮ್ಮ ಬ್ರ್ಯಾಂಡ್‌ಗಳು ಅಮೆಜಾನ್, ಫ್ಲಿಪ್‌ಕಾರ್ಟ್, ಮೀಶೋ ಮತ್ತು ಇತರ ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಇರುತ್ತವೆ. ನಾವು ಹೆಚ್ಚಿನ ಸಂಸ್ಥಾಪಕರನ್ನು ಪಡೆಯಲು ಹಾಗೂ ಬ್ರ್ಯಾಂಡ್‌ಗಳನ್ನು ಬೆಂಬಲಿಸಲು ಉತ್ಸುಕರಾಗಿದ್ದೇವೆ," ಎಂದು ಕೂಡಾ ಅನಂತ್ ನಾರಾಯಣನ್ ಹೇಳಿದರು.

"ನಾವು ತಂತ್ರಜ್ಞಾನ ಮತ್ತು ಡಿಜಿಟಲ್ ಬ್ರ್ಯಾಂಡ್ ನಿರ್ಮಾಣದ ಮೇಲೆ ಆಳವಾದ ಗಮನವನ್ನು ಹರಿಸುತ್ತೇವೆ. ಇದು ಹಾಗೂ ಜನರು ನಾವು ಮೂರು ಪಟ್ಟು ಅಧಿಕ ಬೆಳವಣಿಗೆ ಹೊಂದಲು ಅವಕಾಶ ಮಾಡಿಕೊಂಟ್ಟಿದ್ದಾರೆ. ನಾವು ಭಾರತದಿಂದ ಜಾಗತಿಕ ಬ್ರ್ಯಾಂಡ್‌ಗಳನ್ನು ನಿರ್ಮಿಸುವುದಕ್ಕೆ ಅಧಿಕ ಆದ್ಯತೆಯನ್ನು ನೀಡುತ್ತೇವೆ," ಎಂದು ಕೂಡಾ ಮಿಂತ್ರಾದ ಮಾಜಿ ಸಿಇಒ ಮತ್ತು ಮೆಡ್‌ಲೈಫ್ ಸಹಸಂಸ್ಥಾಪಕ ಅನಂತ್ ನಾರಾಯಣನ್ ಮಾಹಿತಿ ನೀಡಿದ್ದಾರೆ.

ಎಸ್‌ಬಿಐ ಚಿನ್ನದ ಸಾಲ: ಬಡ್ಡಿಯೆಷ್ಟು?, ಇಲ್ಲಿದೆ ವಿವರಎಸ್‌ಬಿಐ ಚಿನ್ನದ ಸಾಲ: ಬಡ್ಡಿಯೆಷ್ಟು?, ಇಲ್ಲಿದೆ ವಿವರ

ಯುಎಸ್‌ ಮೂಲದ ಥ್ರಾಸಿಯೊ 2018 ರಲ್ಲಿ ಈ ವ್ಯವಹಾರ ಮಾದರಿಯನ್ನು ಆರಂಭ ಮಾಡಿದ್ದು, ಈಗ ಭಾರತದಲ್ಲಿಯೂ ಈ ವ್ಯವಹಾರದ ಮಾದರಿ ಆರಂಭವಾಗುತ್ತಿದೆ ಎಂದು ವರದಿ ಆಗಿದೆ. ಈ ಉದ್ಯಮದಲ್ಲಿ ಗಮನಾರ್ಹವಾಗಿ ಬಂಡವಾಳ ಸಂಗ್ರಹವಾಗಿದೆ. ಸ್ಪರ್ಧೆಯು ಅಧಿಕವಾಗುತ್ತಿದೆ.

ಹೊಸ ಬ್ಯ್ರಾಂಡ್‌ ನಿರ್ಮಾಣ ಮಾಡುವತ್ತ ಚಿತ್ತ ನೆಟ್ಟರೆ ಉತ್ತಮ

"ಭಾರತದಲ್ಲಿ ಹಲವಾರು ಬ್ಯ್ರಾಂಡ್‌ಗಳು ಇಲ್ಲ. ಅದರಿಂದಾಗಿ ಹೆಚ್ಚಿನ ಜನರು ಹೊಸ ಬ್ರ್ಯಾಂಡ್‌ಗಳನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರೆ ಉತ್ತಮ," ಎಂದು ನಾರಾಯಣನ್‌ ಅಭಿಪ್ರಾಯಿಸಿದ್ದಾರೆ. ಕಳೆದ ತಿಂಗಳು, ಮೆನ್ಸಾ ಕಾರಗಿರಿ, ಪ್ರಿಯಾಸಿ, ಡೆನ್ನಿಸ್ ಲಿಂಗೋ, ಇಶಿನ್, ಹಬ್ಬರ್‌ಹೋಮ್, ಅನುಭೂತಿ, ಹೆಲಿಯಾ, ವಿಲನ್‌ನಂತಹ ಬ್ರ್ಯಾಂಡ್‌ಗಳನ್ನು ಸ್ವಾಧೀನಪಡಿಸಿಕೊಂಡಿದೆ. ಮೆನ್ಸಾ ಈ ಬ್ರ್ಯಾಂಡ್‌ಗಳ ಶೇಕಡ 51 ರಿಂದ ಶೇಕಡ 75 ರವರೆಗೆ ಪಾಲನ್ನು ಆಯ್ಕೆ ಮಾಡುತ್ತದೆ. ಹಾಗೆಯೇ ಸಂಸ್ಥಾಪಕರೊಂದಿಗೆ ಬೆಳೆಯುವ ಗುರಿಯನ್ನು ಹೊಂದಿದೆ. ಮೆನ್ಸಾ ಹೆಚ್ಚಾಗಿ ಫ್ಯಾಷನ್, ಸೌಂದರ್ಯ, ನಿವಾಸಕ್ಕೆ ಸೇರಿದ ಬ್ರಾಂಡ್‌ಗಳ ಮೇಲೆ ಕೇಂದ್ರೀಕರಿಸುತ್ತಿದೆ.

ನಾರಾಯಣನ್ ಅವರ ಪ್ರಕಾರ, ಇದುವರೆಗೆ ಸ್ವಾಧೀನಪಡಿಸಿಕೊಂಡಿರುವ ಹೆಚ್ಚಿನ ಬ್ರ್ಯಾಂಡ್‌ಗಳು ಮೆನ್ಸಾ ಜೊತೆಗೆ ಸೇರಿದ ವರ್ಷದಲ್ಲಿ ಶೇಕಡ ನೂರರಷ್ಟು ಬೆಳವಣಿಗೆ ಹೊಂದಿದೆ. ಮೆನ್ಸಾ ಬ್ರ್ಯಾಂಡ್‌ಗಳ ಬೆಳವಣಿಗೆ ಮತ್ತು ಮಾರ್ಜಿನ್ ಅನ್ನು ವೇಗವಾಗಿಸುತ್ತದೆ," ಎಂದು ಆಲ್ಫಾ ವೇವ್ ವೆಂಚರ್ಸ್ (ಫಾಲ್ಕನ್ ಎಡ್ಜ್ ಕ್ಯಾಪಿಟಲ್) ನ ಸಹಸ್ಥಾಪಕ ಮತ್ತು ಪಾಲುದಾರ ನವ್ರೋಜ್ ಉದ್ವಾಡಿಯಾ ಅಭಿಪ್ರಾಯಿಸಿದ್ದಾರೆ.

English summary

Ex-Myntra CEO's startup Mensa Brands turns unicorn within six months of launch

Mensa Brands turns unicorn within six months of launch.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X