For Quick Alerts
ALLOW NOTIFICATIONS  
For Daily Alerts

ಲಾಕ್‌ಡೌನ್: ಇಲ್ಲಿ 200 ರು ಗೆ ದೇಹ ಮಾರಾಟ ಮಾಡಿಕೊಳ್ಳುತ್ತಿರುವ ಹುಡುಗಿಯರು

|

ನಿಜ ಕೊರೊನಾವೈರಸ್ ಅದೆಷ್ಟೋ ಜನರಿಗೆ ನರಕವನ್ನು ತೋರಿಸುತ್ತಿದೆ. ಈ ಮಹಾಮಾರಿಯನ್ನು ನಿಯಂತ್ರಿಸಲು ಸರ್ಕಾರಗಳೇ ಹೈರಾಣಾಗಿ ನೆಲಕಚ್ಚುತ್ತಿವೆ. ಕಾರ್ಮಿಕರು, ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು, ಬಡವರು, ನಿರ್ಗತಿಕರು ಬದುಕಂತು ಅಯೋಮಯವಾಗಿದೆ.

 

ಲಾಕ್‌ಡೌನ್ ಸಮಯದಲ್ಲಿ ಉದ್ಯೋಗವಿಲ್ಲದೇ ಆದಾಯವಿಲ್ಲದೇ ತಿನ್ನಲು ಪಡಿಪಾಟಲು ಪಡುತ್ತಿದ್ದಾರೆ. ಕಳೆದ ಮೂರು ತಿಂಗಳಿನಿಂದ ಅನ್ನಕ್ಕಾಗಿ ಅರಸುತ್ತಿದ್ದಾರೆ. ಆದರೆ ಕೊರೊನಾವೈರಸ್ ಹಾವಳಿ ಅವರನ್ನು ಮತ್ತಷ್ಟು ಹಣ್ಣುಗಾಯಿ ನೀರುಗಾಯಿ ಮಾಡುತ್ತಿದೆ.

ಇಂತಹುದೇ ಲಾಕ್‌ಡೌನ್ ನ ಕೆಟ್ಟ ಘೋರ ಸ್ವರೂಪ ಕಂಡು ಬರುತ್ತಿದೆ ಉತ್ತರ ಪ್ರದೇಶದ ಕೆಲ ಬುಡುಕಟ್ಟು ಕುಟುಂಬಗಳಲ್ಲಿ. ಈ ಬಗ್ಗೆ ಇಂಡಿಯಾ ಟುಡೇ ಸಮಗ್ರ ವರದಿ ಲಾಕ್‌ಡೌನ್ ನಿಂದ ತೊಂದರೆಗೆ ಸಿಲುಕಿರುವ ಬುಡುಕಟ್ಟು ಹೆಣ್ಣು ಮಕ್ಕಳು ಗಣಿಗಳಲ್ಲಿ 150 ರಿಂದ 200 ರುಪಾಯಿಗೆ ದೇಹ ಮಾರಾಟ ಮಾಡಿಕೊಂಡು ಬದುಕುವಂತಹ ಪರಿಸ್ಥಿತಿಯನ್ನು ತೋರಿಸಿದೆ.

ಚಿತ್ರಕೂಟ್ ಭಾಗದ ಬಡ ಬುಡಕಟ್ಟು ಕುಟುಂಬಗಳು

ಚಿತ್ರಕೂಟ್ ಭಾಗದ ಬಡ ಬುಡಕಟ್ಟು ಕುಟುಂಬಗಳು

ಉತ್ತರ ಪ್ರದೇಶದ ಬುಂದೇಲ್‌ಖಂಡ್ ನ ಚಿತ್ರಕೂಟ್ ಭಾಗದ ಬಡ ಬುಡಕಟ್ಟು ಕುಟುಂಬಗಳ ಅಪ್ರಾಪ್ತ ಬಾಲಕಿಯರನ್ನು ಅಕ್ರಮ ಗಣಿಗಳಲ್ಲಿ ಕೆಲಸ ಮಾಡಲು ಒತ್ತಾಯಿಸಲಾಗುತ್ತದೆ. ಆದರೆ, ಗುತ್ತಿಗೆದಾರರು ಮತ್ತು ಮಧ್ಯವರ್ತಿಗಳು ಅವರಿಗೆ ವೇತನವನ್ನು ಸುಲಭವಾಗಿ ಪಾವತಿಸುವುದಿಲ್ಲ. ಏಕೆಂದರೆ ಈ ಹುಡುಗಿಯರು ತಮ್ಮ ಅಲ್ಪ ವೇತನಕ್ಕೆ ಬದಲಾಗಿ ತಮ್ಮ ದೇಹವನ್ನು ವ್ಯಾಪಾರ ಮಾಡಬೇಕಾದ ಪರಿಸ್ಥಿತಿ ಬಂದೊಂದಗಿದೆ. ಇಲ್ಲಿ ಬಡತನವು ಎಷ್ಟು ಭದ್ರವಾಗಿದೆ ಎಂದರೆ, ಸಣ್ಣ ಹುಡುಗಿಯರು ತಮ್ಮ ಕುಟುಂಬದ ಜವಾಬ್ದಾರಿಗಳನ್ನು ಭರಿಸಬೇಕು ಮತ್ತು ಮನೆಯ ಆದಾಯಕ್ಕೆ ಕೊಡುಗೆ ನೀಡಬೇಕಾಗುತ್ತದೆ. ಚಿತ್ರಕೂಟ್‌ನ ಬೆಟ್ಟಗಳಲ್ಲಿ ಸುಮಾರು 50 ಕಲ್ಲು ಕ್ರಷರ್‌ಗಳು ಕಾರ್ಯನಿರ್ವಹಿಸುತ್ತಿವೆ. ಹಸಿವು ಮತ್ತು ನಿರುದ್ಯೋಗದ ವಿರುದ್ಧ ಹೋರಾಡುವ ಕೋಲ್ ಬುಡಕಟ್ಟು ಜನಾಂಗದವರಿಗೆ ಈ ಗಣಿಗಳಲ್ಲಿ ಕಲ್ಲು ಪುಡಿ ಮಾಡುವವರಾಗಿ ಕೆಲಸ ಮಾಡುವುದನ್ನು ಬಿಟ್ಟು ಬೇರೆ ಉದ್ಯೋಗದ ಮೂಲಗಳಿಲ್ಲ.

200 ರಿಂದ 300 ರುಪಾಯಿಗೆ ದೇಹ ಮಾರಾಟ

200 ರಿಂದ 300 ರುಪಾಯಿಗೆ ದೇಹ ಮಾರಾಟ

12-14 ವರ್ಷ ವಯಸ್ಸಿನ ಹುಡುಗಿಯರು ಅಕ್ರಮ ಗಣಿಗಳಲ್ಲಿ ಕೆಲಸ ಮಾಡುತ್ತಾರೆ. ಅಲ್ಲಿ ಅವರ ಗುತ್ತಿಗೆದಾರರು ಮತ್ತು ಮಧ್ಯವರ್ತಿಗಳು ಹುಡುಗಿಯರ ದೇಹವನ್ನು 200 ರಿಂದ 300 ರೂಗಳ ಅಲ್ಪ ವೇತನಕ್ಕೆ ಮಾರಾಟ ಮಾಡಲು ಒತ್ತಾಯಿಸುತ್ತಾರೆ. ಅಂದರೆ ವೈಶ್ಯಾವಾಟಿಕೆ ನಡೆಸಲು ಪ್ರಚೋಧಿಸುತ್ತಾರೆ. ಕೆಲಸ ಹುಡುಕಲು ಗಣಿಗಳಿಗೆ ಹೋದಾಗ, ಗುತ್ತಿಗೆದಾರರು ತಮ್ಮ ದೇಹವನ್ನು ಸಹ ಮಾರಾಟ ಮಾಡಬೇಕಾಗುತ್ತದೆ ಎಂಬ ಷರತ್ತಿನ ಮೇಲೆ ಅವರನ್ನು ನೇಮಿಸಿಕೊಳ್ಳಲು ಒಪ್ಪುತ್ತಾರೆ.

ಒಂದಕ್ಕಿಂತ ಹೆಚ್ಚು ಪುರುಷರು ಶೋಷಣೆಯಲ್ಲಿ ತೊಡಗುತ್ತಾರೆ
 

ಒಂದಕ್ಕಿಂತ ಹೆಚ್ಚು ಪುರುಷರು ಶೋಷಣೆಯಲ್ಲಿ ತೊಡಗುತ್ತಾರೆ

ನಮ್ಮ ಉದ್ಯೋಗಗಳು ಬೇಕಾದರೆ ನಾವು ಅವರ ಷರತ್ತುಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ನೊಂದ ಬಾಲಕಿಯರು ಹೇಳುತ್ತಾರೆ. ನಮ್ಮನ್ನು ಹಣದಿಂದ ಆಮಿಷಕ್ಕೆ ಒಳಪಡಿಸುತ್ತಾರೆ ಮತ್ತು ಕೆಲವೊಮ್ಮೆ ಒಂದಕ್ಕಿಂತ ಹೆಚ್ಚು ಪುರುಷರು ಶೋಷಣೆಯಲ್ಲಿ ತೊಡಗುತ್ತಾರೆ. ಬೇಡವೆಂದು ಹೇಳಿದರೆ, ಅವರು ನಮ್ಮನ್ನು ಬೆಟ್ಟದಿಂದ ಕೆಳಕ್ಕೆ ಎಸೆಯುವ ಬೆದರಿಕೆ ಹಾಕುತ್ತಾರೆ ಎನ್ನುತ್ತಾರೆ.

ದೇಹ ಮಾರಿಕೊಳ್ಳುವಂತೆ ಮಾಡುತ್ತಿದ್ದಾರೆ

ದೇಹ ಮಾರಿಕೊಳ್ಳುವಂತೆ ಮಾಡುತ್ತಿದ್ದಾರೆ

ಚಿತ್ರಕೂಟ್‌ನಲ್ಲಿರುವ ಈ ಅಪ್ರಾಪ್ತ ಬಾಲಕಿಯರು ಬಡತನದ ಬೇಗೆಗೆ ಬೆಂದಿದ್ದಾರೆ. ತಿಂಗಳುಗಳ ಕಾಲದ ಲಾಕ್‌ಡೌನ್ ಅವರನ್ನು ತೀವ್ರವಾಗಿ ಹೈರಾಣಾಗಿಸಿದೆ ಮತ್ತು ಶೋಷಣೆಗೆ ಹೆಚ್ಚು ಗುರಿಯಾಗಿದ್ದಾರೆ. ಲಾಕ್‌ಡೌನ್ ಮೂರು ತಿಂಗಳಿನಿಂದ ಮುಂದುವರೆದಿದೆ ಮತ್ತು ಅವರು ತಮ್ಮ ಕುಟುಂಬವನ್ನು ಪೋಷಿಸಲು ಕೆಲಸಕ್ಕಾಗಿ ತೀವ್ರವಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇಂತಹ ಸಮಯದಲ್ಲಿ ಅಕ್ರಮ ಗಣಿಗಳಲ್ಲಿನವರು ಬಾಲಕಿಯರನ್ನು ದೇಹ ಮಾರಿಕೊಳ್ಳುವಂತೆ ಮಾಡುತ್ತಿದ್ದಾರೆ. ಗುತ್ತಿಗೆದಾರರು ಮತ್ತು ಮಧ್ಯವರ್ತಿಗಳು ತಮ್ಮ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ ಮತ್ತು ತಮ್ಮ ಮಕ್ಕಳನ್ನು ಲೈಂಗಿಕವಾಗಿ ಬಳಸುತ್ತಾರೆ. ವಿರೋಧಿಸಲು ಅಸಹಾಯಕರಾಗಿದ್ದಾರೆ ಎಂದು ಅವರ ಕುಟುಂಬಗಳು ಹೇಳುತ್ತವೆ ಎಂದು ವರದಿ ಹೇಳುತ್ತದೆ. ಈ ಬಗ್ಗೆ ಉತ್ತರ ಪ್ರದೇಶ ಮಕ್ಕಳ ಸಂರಕ್ಷಣಾ ಆಯೋಗದ ಗಮನವನ್ನು ವರದಿ ಸೆಳೆದಿದೆ.

Read more about: uttar pradesh
English summary

Minor Girls Forced to Trade Bodies for Rs 150-200 Daily During Lockdown

Lockdown Effect: Harassment On Minor Girls In Uttra Pradesh Illegal Mines
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X