For Quick Alerts
ALLOW NOTIFICATIONS  
For Daily Alerts

ರೈಲ್ವೆಗೆ ಕೋಟಿ ಕೋಟಿ ಆದಾಯ ತಂದುಕೊಟ್ಟ ಟಿಕೆಟ್ ಇನ್ ಸ್ಪೆಕ್ಟರ್ ಗಳು

|

ನಮ್ಮದೇ ಸರ್ಕಾರ ತಾನೇ ಎಂದು ಆದಾಯಕ್ಕೆ ಕತ್ತರಿ ಹಾಕುವವರು ಇರುವಂತೆಯೇ ಸರ್ಕಾರಕ್ಕೆ ಆದಾಯ ತರುವ ಜನರ ಶ್ರಮ ಕೂಡ ಇರುತ್ತದೆ. ರೈಲ್ವೆಯ ಟಿಕೆಟ್ ಪರೀಕ್ಷಕರೊಬ್ಬರು 2019ರಲ್ಲಿ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 22,680 ಮಂದಿಯಿಂದ 1.51 ಕೋಟಿ ರುಪಾಯಿ ವಸೂಲಿ ಮಾಡಿದ್ದಾರೆ.

 

ಕೇಂದ್ರೀಯ ರೈಲ್ವೆಯ ಫ್ಲೈಯಿಂಗ್ ಸ್ಕ್ವಾಡ್ ನ ಎಸ್. ಬಿ. ಗಲಂದೆ ಕಳೆದ ವರ್ಷ ಅತ್ಯಧಿಕ ಆದಾಯ ಗಳಿಸಿಕೊಟ್ಟಿದ್ದಾರೆ. ಇವರ ರೀತಿಯಲ್ಲೇ 2019ರಲ್ಲಿ 1 ಕೋಟಿಗೂ ಹೆಚ್ಚು ಮೊತ್ತದ ದಂಡ ರೂಪದ ಆದಾಯ ತಂದುಕೊಟ್ಟ ಇತರ ಮೂವರಿದ್ದಾರೆ. ಎಂ.ಎಂ.ಶಿಂಧೆ, ಡಿ.ಕುಮಾರ್ ಮತ್ತು ಜಿ.ರವಿಕುಮಾರ್ ಕೂಡ ಆದಾಯ ತಂದಿದ್ದಾರೆ.

 

ಗಲಂದೆ, ಶಿಂಧೆ ಮತ್ತು ಡಿ. ಕುಮಾರ್ ದೂರ ಪ್ರಯಾಣದ ರೈಲು ಪ್ರಯಾಣದ ಮೇಲೆ ದಂಡ ವಸೂಲಿ ಮಾಡಿದರೆ, ಜಿ. ರವಿಕುಮಾರ್ ಅವರು ಮುಂಬೈ ಸಬರ್ಬನ್ ನೆಟ್ ವರ್ಕ್ ನಲ್ಲಿ ವಸೂಲಿ ಮಾಡಿದ್ದಾರೆ. ಅಂದ ಹಾಗೆ ಟ್ರಾವೆಲ್ ಟಿಕೆಟ್ ಇನ್ಸ್ ಪೆಕ್ಟರ್ ಗಳು ಪ್ರಯಾಣಿಕರ ಬಳಿ ಟಿಕೆಟ್ ಇದೆಯೇ ಎಂದು ಪರಿಶೀಲಿಸಿ, ಇಲ್ಲದೆ ಪ್ರಯಾಣಿಸುತ್ತಿರುವವರಿಂದ ದಂಡ ವಸೂಲಿ ಮಾಡಬಹುದು.

ರೈಲ್ವೆಗೆ ಕೋಟಿ ಕೋಟಿ ಆದಾಯ ತಂದುಕೊಟ್ಟ ಟಿಕೆಟ್ ಇನ್ ಸ್ಪೆಕ್ಟರ್ ಗಳು

ಶಿಂಧೆ 16035 ಪ್ರಯಾಣಿಕರಿಂದ 1.07 ಕೋಟಿ, ಡಿ. ಕುಮಾರ್ 15234 ಪ್ರಯಾಣಿಕರಿಂದ 1.02 ಕೋಟಿ, ರವಿಕುಮಾರ್ 20,657 ಪ್ರಯಾಣಿಕರಿಂದ 1.45 ಕೋಟಿ ರುಪಾಯಿ ದಂಡ ವಸೂಲಿ ಮಾಡಿದ್ದಾರೆ. 2019ರಲ್ಲಿ ಕೇಂದ್ರ ರೈಲ್ವೆಯಿಂದ 37.64 ಪ್ರಕರಣದಿಂದ 192.51 ಕೋಟಿ ವಸೂಲಿ ಮಾಡಿದ್ದರೆ, 2018ರಲ್ಲಿ 34.09 ಲಕ್ಷ ಪ್ರಯಾಣಿಕರಿಂದ 168.30 ಕೋಟಿ ವಸೂಲಿ ಮಾಡಲಾಗಿದೆ.

ಈ ಟಿಕೆಟ್ ಇನ್ ಸ್ಪೆಕ್ಟರ್ ಗಳಿಗೆ ನಗದು ಬಹುಮಾನ, ಪ್ರಮಾಣಪತ್ರ ನೀಡಿ ಸನ್ಮಾನ ಮಾಡಲಾಗಿದೆ ಎಂದು ಕೇಂದ್ರೀಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಶಿವಾಜಿ ಸುತರ್ ಹೇಳಿದ್ದಾರೆ.

English summary

More Than Crore Revenue By Central Railway Inspectors

Central railway inspectors collected more than crore rupees from ticket less passengers. Here is the complete details.
Story first published: Friday, January 24, 2020, 16:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X