For Quick Alerts
ALLOW NOTIFICATIONS  
For Daily Alerts

ಮೊಟೊರೊಲಾದಿಂದ 10 ಸಾವಿರದೊಳಗಿನ ಮೊಟೊ E7 ಪ್ಲಸ್ ಫೋನ್ ಬಿಡುಗಡೆ

|

ಮೊಟೊರೊಲಾದಿಂದ ಭಾರತದಲ್ಲಿ ಹೊಸದಾಗಿ ಮೊಟೊ E7 ಪ್ಲಸ್ ಬಿಡುಗಡೆ ಮಾಡಲಾಗಿದೆ. ಈ ಹೊಸ E ಸರಣಿಯ ಸ್ಮಾರ್ಟ್ ಫೋನ್ ಫೀಚರ್ ಗಳು ಬಜೆಟ್ ಸೆಗ್ಮೆಂಟ್ ನೊಳಗೆ ಬರುವಂಥದ್ದಾಗಿವೆ. ಡ್ಯುಯಲ್ ಕ್ಯಾಮೆರಾ, ಕ್ವಾಲ್ ಕಾಮ್ ಸ್ನ್ಯಾಪ್ ಡ್ರ್ಯಾಗನ್ ಚಿಪ್ ಸೆಟ್ ಹೊಂದಿದೆ. ಮೊಟೊ E7 ಪ್ಲಸ್ ಫೋನ್ ಒಂದೇ ಅವತರಣಿಕೆಯಲ್ಲಿ ಸಿಗಲಿದ್ದು, ಬೆಲೆ 9,499 ರುಪಾಯಿ.

4GB RAM ಹಾಗೂ 64GB ಆಂತರಿಕ ಸಂಗ್ರಹ ಸಾಮರ್ಥ್ಯದ ಒಂದೇ ಫೋನ್ ಅವತರಣಿಕೆ ಖರೀದಿಗೆ ಸಿಗಲಿದೆ. ಹೈಬ್ರಿಡ್ ಸಿಮ್ ಕಾರ್ಡ್ ಹಾಗೂ ಮೆಮೊರಿ ಕಾರ್ಡ್ ಸ್ಲಾಟ್ ಇರಲಿದ್ದು, 512GB ತನಕ ಸಪೋರ್ಟ್ ಮಾಡುತ್ತದೆ. ಮಿಸ್ಟಿ ಬ್ಲ್ಯೂ ಹಾಗೂ ಟ್ವಿಲೈಟ್ ಆರೇಂಜ್ ಹೀಗೆ ಎರಡು ಬಣ್ಣದಲ್ಲಿ ಸಿಗಲಿದೆ.

ಮೊಟೊರೊಲಾದಿಂದ 10 ಸಾವಿರದೊಳಗಿನ ಮೊಟೊ E7 ಪ್ಲಸ್ ಫೋನ್ ಬಿಡುಗಡೆ

ಹೊಸ ಸ್ಮಾರ್ಟ್ ಫೋನ್ ಮಾರಾಟ ಸೆಪ್ಟೆಂಬರ್ 30ನೇ ತಾರೀಕಿನ ಮಧ್ಯಾಹ್ನ 12 ಗಂಟೆಯಿಂದ ಫ್ಲಿಪ್ ಕಾರ್ಟ್ ನಲ್ಲಿ ಆರಂಭವಾಗುತ್ತದೆ. ಮೊಟೊ E7 ಪ್ಲಸ್ ಡಿಸ್ ಪ್ಲೇ 6.5 ಇಂಚು ಇರಲಿದ್ದು, ಎಚ್ ಡಿ+ ರೆಸಲ್ಯೂಷನ್ ಇರುತ್ತದೆ. 5000 mAh ಸಾಮರ್ಥ್ಯದ ಬ್ಯಾಟರಿ ಒಳಗೊಂಡಿರುತ್ತದೆ. ಡ್ಯುಯಲ್ ಕ್ಯಾಮೆರಾದಲ್ಲಿ ಪ್ರೈಮರಿ ಲೆನ್ಸ್ 48 MP ಹಾಗೂ ಸೆಕೆಂಡರಿ 2 MP ಇರುತ್ತದೆ. ಫಿಂಗರ್ ಪ್ರಿಂಟ್ ಸೆನ್ಸರ್ ಪ್ರೈಮರಿ ಕ್ಯಾಮೆರಾದ ಕೆಳಗೆ ಇರುತ್ತದೆ. ಇನ್ನಷ್ಟು ವಿಶೇಷಗಳನ್ನು ಈ ಫೋನ್ ಹೊಂದಿದೆ.

English summary

Motorola E7 Plus Budget Smart Phone Launched In India Below 10000 Rupees

Motorola has launched it's budget smart phone moto E7 plus below 10,000 rupees in India. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X