For Quick Alerts
ALLOW NOTIFICATIONS  
For Daily Alerts

ಆರ್‌ಬಿಐ ಎಂಪಿಸಿ ಸಭೆ: ಇಲ್ಲಿದೆ ಪ್ರಮುಖ ಹೈಲೈಟ್ಸ್

|

ಆರ್‌ಬಿಐ ಹಣಕಾಸು ವರ್ಷ 2022-23ರಲ್ಲಿ ನಾಲ್ಕನೇ ಎಂಪಿಸಿ ಸಭೆಯನ್ನು ನಡೆಸಿದ್ದು, ಮತ್ತೆ ರೆಪೋ ದರವನ್ನು ಏರಿಕೆ ಮಾಡಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ರೆಪೋ ದರವನ್ನು ಮತ್ತೆ 50 ಮೂಲಾಂಕ ಏರಿಕೆ ಘೋಷಣೆ ಮಾಡಿದ್ದಾರೆ.

 

ಹಣದುಬ್ಬರದ ಕಾರಣದಿಂದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಮುಖ ವಿತ್ತೀಯ ನೀತಿಯಲ್ಲಿ ಬದಲಾವಣೆ ಮಾಡಿದೆ. ಕಳೆದ ತಿಂಗಳಿನಲ್ಲಿಯೂ ಆರ್‌ಬಿಐ ರೆಪೋ ದರವನ್ನು 50 ಮೂಲಾಂಕ ಏರಿಕೆ ಮಾಡಿತ್ತು. ಈಗ ಮತ್ತೆ 50 ಮೂಲಾಂಕ ಹೆಚ್ಚಳ ಮಾಡಿದ್ದು, ಇದರಿಂದಾಗಿ ರೆಪೋ ದರವು ಶೇಕಡ 5.4ಕ್ಕೆ ಏರಿಕೆಯಾಗಿದೆ.

Breaking: ರೆಪೋ ದರ ಮತ್ತೆ 50 ಮೂಲಾಂಕ ಏರಿಸಿದ ಆರ್‌ಬಿಐ

ಸತತ ಮೂರನೇ ಬಾರಿಗೆ ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡಿದೆ. ಸಾಮಾನ್ಯವಾಗಿ ಆರ್‌ಬಿಐ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿದರೂ ಅದು ಸಾಲದ ಬಡ್ಡಿದರ ಹಾಗೂ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರದ ಮೇಲೆ ಪ್ರಭಾವ ಉಂಟು ಮಾಡುತ್ತದೆ.

ಆರ್‌ಬಿಐ ಎಂಪಿಸಿ ಸಭೆ: ಇಲ್ಲಿದೆ ಪ್ರಮುಖ ಹೈಲೈಟ್ಸ್

ಈಗ ಆರ್‌ಬಿಐ ರೆಪೋ ದರವನ್ನು ಹೆಚ್ಚಳ ಮಾಡಿರುವ ಕಾರಣದಿಂದಾಗಿ ಸಾಲದ ಬಡ್ಡಿದರ ಹಾಗೂ ಎಫ್‌ಡಿ ದರವು ಕೂಡಾ ಏರಿಕೆಯಾಗಲಿದೆ. ಸಾಲದ ಬಡ್ಡಿದರ ಏರಿಕೆ ಜನರ ಇಎಂಐ ಹೊರೆಯನ್ನು ಹೆಚ್ಚಿಸಿದರೆ, ಎಫ್‌ಡಿ ಹೊಂದಿರುವವರಿಗೆ ಲಾಭವಾಗಲಿದೆ. ಎಂಪಿಸಿ ಸಭೆಯ ಬಗ್ಗೆ ಇಲ್ಲಿದೆ ಪ್ರಮುಖ ಹೈಲೈಟ್ಸ್ ಮುಂದೆ ಓದಿ.....

ಎಂಪಿಸಿ ಸಭೆಯ ಹೈಲೈಟ್ಸ್

* ರೆಪೋ ದರ 50 ಮೂಲಾಂಕ ಏರಿಕೆ ಮಾಡಲಾಗಿದ್ದು ರೆಪೋ ದರವು 5.4ಕ್ಕೆ ತಲುಪಿದೆ. ಸತತ ಮೂರನೇ ಬಾರಿಗೆ ದರ ಏರಿಕೆ ಮಾಡಲಾಗಿದೆ.
* 2019ರಲ್ಲಿ ಕೊರೊನಾ ಸಾಂಕ್ರಾಮಿಕಕ್ಕೂ ಮುನ್ನ ಇದ್ದ ರೆಪೋ ದರದ ಮಟ್ಟಕ್ಕೆ ಹೆಚ್ಚಳ ಮಾಡಲಾಗಿದೆ.
* ಮೇ 2022ರ ಬಳಿಕ ಹಣದುಬ್ಬರ ಕಾರಣದಿಂದಾಗಿ ಆರ್‌ಬಿಐ ರೆಪೋ ದರದಲ್ಲಿ 140 ಮೂಲಾಂಕ ಏರಿಕೆ ಮಾಡಿದೆ.
* 2022-23ರ ಸಾಲಿನ ಜಿಡಿಪಿ ಬೆಳವಣಿಗೆ ದರವನ್ನು ಶೇಕಡ 7.2ಕ್ಕೆ ಕಾಯ್ದಿರಿಸಲಾಗಿದೆ
* 2022-23ರ ಜಿಡಿಪಿ ಬೆಳವಣಿಗೆ ದರ: ತ್ರೈಮಾಸಿಕ 1 (Q1) ಶೇಕಡ 16.2, Q2 ಶೇಕಡ 6.2, Q3 ಶೇಕಡ 4.1, Q4 ಶೇಕಡ 4
* 2023-24ರ Q1 ನೈಜ ಜಿಡಿಪಿ ಬೆಳವಣಿಗೆ ದರವನ್ನು ಶೇಕಡ 6.7ಕ್ಕೆ ಕಾಯ್ದಿರಿಸಲಾಗಿದೆ.
* 2022-23ರ ರಿಟೇಲ್ ಹಣದುಬ್ಬರವನ್ನು ಕೂಡಾ ಶೇಕಡ 6.7ಕ್ಕೆ ಕಾಯ್ದಿರಿಸಲಾಗಿದೆ
* ಹಣದುಬ್ಬರ ದರ: Q2 ಶೇಕಡ 7.1, Q3 ಶೇಕಡ 6.4, Q4 ಶೇಕಡ 5.8, Q1:2023-24 ಶೇಕಡ 5
* ಹಣಕಾಸು ವರ್ಷ 2023ರಲ್ಲಿ ಆಗಸ್ಟ್ 3ರವರೆಗೆ 13.3 ಬಿಲಿಯನ್ ಡಾಲರ್ ಹಣಕಾಸು ಹೊರ ಹರಿವು ಆಗಿದೆ.
* ರೂಪಾಯಿಯ ಏರಿಳಿತದ ಮೇಲೆ ಕಣ್ಣಿರಿಸಲು ಆರ್‌ಬಿಐ ನಿರ್ಧಾರ
* ಈ ವರ್ಷದಲ್ಲಿ ಆಗಸ್ಟ್ 4ರವರೆಗೆ ರೂಪಾಯಿ ಯುಎಸ್ ಡಾಲರ್ ಎದುರು ಶೇಕಡ 4.7ರಷ್ಟು ಕುಸಿತ ಕಂಡಿದೆ.
* ದರ ಪರಿಷ್ಕರಣಾ ಸಮಿತಿಯ ಮುಂದಿನ ಸಭೆಯನ್ನು ಸೆಪ್ಟೆಂಬರ್ 28-30ರಂದು ಇರಿಸಲಾಗಿದೆ.

English summary

MPC Meeting: RBI Hikes Repo Rate, Here's Key Highlights

MPC Meeting: RBI Hikes Repo Rate, Here's Key Highlights, Read on...
Story first published: Friday, August 5, 2022, 14:06 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X