For Quick Alerts
ALLOW NOTIFICATIONS  
For Daily Alerts

ನಾಗಾಲ್ಯಾಂಡ್ ಸರ್ಕಾರದಿಂದ ನಾಯಿ ಮಾಂಸ ಮಾರಾಟ ನಿಷೇಧಕ್ಕೆ ನಿರ್ಧಾರ

|

ನಾಗಾಲ್ಯಾಂಡ್ ಸರ್ಕಾರ ನಾಯಿ ಮಾಂಸದ ಮಾರಾಟವನ್ನು ನಿಷೇಧ ಮಾಡಲು ನಿರ್ಧರಿಸಿದೆ. ಇದರ ಜತೆಗೆ ವಾಣಿಜ್ಯ ಆಮದು, ನಾಯಿ ವ್ಯಾಪಾರ ಹಾಗೂ ಮಾರುಕಟ್ಟೆಯನ್ನು ಸಹ ನಿಷೇಧಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ನಾಗಾಲ್ಯಾಂಡ್ ಮುಖ್ಯ ಕಾರ್ಯದರ್ಶಿ ತೆಮ್ಜೆನ್ ಟಾಯ್ ಟ್ವೀಟ್ ಮಾಡಿದ್ದಾರೆ.

 

ಫೆಡರೇಷನ್ ಆಫ್ ಇಂಡಿಯನ್ ಪ್ರೊಟೆಕ್ಷನ್ ಆರ್ಗನೈಸೇಷನ್ (ಎಫ್ ಐಎಪಿಒ) ನಾಗಾಲ್ಯಾಂಡ್ ಸರ್ಕಾರಕ್ಕೆ ಹೊಸದಾಗಿ ಮನವಿ ಸಲ್ಲಿಸಿತ್ತು. ನಾಯಿ ಮಾಂಸ ಮಾರಾಟ ನಿಷೇಧ ಹಾಗೂ ಕಳ್ಳ ಸಾಗಣೆ ಹಾಗೂ ನಾಯಿ ಮಾಂಸ ಸೇವನೆ ತಡೆಗೆ ಸಂಬಂಧಿಸಿದಂತೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಕೇಳಲಾಗಿತ್ತು. ಪ್ರಾಣಿ ರಕ್ಷಣೆ ಕಠಿಣ ಕಾನೂನುಗಳನ್ನು ಜಾರಿಗೊಳಿಸಬೇಕು ಎಂದಿತ್ತು.

 

'8 ಕೋಟಿಯ' ಅಲಾಸ್ಕನ್ ಮಾಲಾಮ್ಯೂಟ್ ತಳಿ ಆನ್ ಲೈನ್ ನಲ್ಲಿ ಒಂದೆರಡು ಲಕ್ಷ'8 ಕೋಟಿಯ' ಅಲಾಸ್ಕನ್ ಮಾಲಾಮ್ಯೂಟ್ ತಳಿ ಆನ್ ಲೈನ್ ನಲ್ಲಿ ಒಂದೆರಡು ಲಕ್ಷ

ಚೀನಾದಲ್ಲಿ ವಿವಾದಾತ್ಮಕ ಯುಲಿನ್ ನಾಯಿ ಮಾಂಸ ಹಬ್ಬ ಜೂನ್ 30, 2020ಕ್ಕೆ ಕೊನೆಯಾದ ಮೇಲೆ ಜಾಗತಿಕ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿತ್ತು. ಆದರೆ ಭಾರತದಲ್ಲಿ ಮಾಂಸಕ್ಕಾಗಿ ನಾಯಿಗಳ ಬಳಕೆ ಮುಂದುವರಿದಿದ್ದರ ಬಗ್ಗೆ ಆಕ್ರೋಶ ಕೇಳಿಬರುತ್ತಿತ್ತು. ಈಚೆಗೆ ದಿಮಾಪುರ್ 'ಪ್ರಾಣಿ ಬಜಾರ್'ನಲ್ಲಿ ಭಯಂಕರ ಸ್ಥಿತಿಯಲ್ಲಿ ಕಂಡು ಆಕ್ಷೇಪ ಬಂದಿತ್ತು.

ನಾಗಾಲ್ಯಾಂಡ್ ಸರ್ಕಾರದಿಂದ ನಾಯಿ ಮಾಂಸ ಮಾರಾಟ ನಿಷೇಧಕ್ಕೆ ನಿರ್ಧಾರ

ವರದಿಗಳ ಪ್ರಕಾರ ಈಗಲೂ ಅಸ್ಸಾಂನಿಂದ ನಾಗಾಲ್ಯಾಂಡ್ ಗೆ ಈಗಲೂ ನಿತ್ಯ ನಾಯಿಗಳ ಕಳ್ಳಸಾಗಣೆ ನಡೆಯುತ್ತದೆ. ಜತೆಗೆ ಪಶ್ಚಿಮ ಬಂಗಾಲದಿಂದಲೂ ಬರುತ್ತದೆ. ಅಸ್ಸಾಂನಲ್ಲಿ ನಾಯಿ ಹಿಡಿಯುವವರಿಗೆ (ಕಳ್ಳ ಸಾಗಣೆ ಮಾಡುವುದಕ್ಕೆ) ಒಂದು ನಾಯಿಗೆ 50 ರುಪಾಯಿ ನೀಡಲಾಗುತ್ತದೆ. ಅದೇ ನಾಯಿಯನ್ನು ನಾಗಾಲ್ಯಾಂಡ್ ನಲ್ಲಿ ಹೋಲ್ ಸೇಲ್ ದರವಾಗಿ 1000 ರುಪಾಯಿಗೆ ಮಾರಲಾಗುತ್ತದೆ.

ನಾಗಾಲ್ಯಾಂಡ್ ನಲ್ಲಿ ನಾಯಿ ಮಾಂಸವನ್ನು ಕೇಜಿಗೆ 200 ರುಪಾಯಿಯಂತೆ ಮಾರಲಾಗುತ್ತದೆ. ಅಂದರೆ ಒಂದು ನಾಯಿ 2,000 ರುಪಾಯಿ ಸಿಕ್ಕಂತಾಗುತ್ತದೆ. ಇದು ನಾಯಿ ಹಿಡಿಯುವವರಿಗೆ ನೀಡುವ ಮೊತ್ತಕ್ಕೆ 40ರಿಂದ 50 ಪಟ್ಟು ಹೆಚ್ಚು ಮೊತ್ತ ಸಿಕ್ಕಂತಾಗುತ್ತದೆ. 2016ರಲ್ಲಿ ನಾಯಿ ಮಾಂಸ ನಿಷೇಧ ಮಾಡಲು ನಾಗಾಲ್ಯಾಂಡ್ ಸರ್ಕಾರ ಮುಂದಾಗಿತ್ತು. ಆದರೆ ಆ ನಂತರ ಯಾವ ಬೆಳವಣಿಗೆಯೂ ಆಗಿರಲಿಲ್ಲ.

English summary

Nagaland Government Bans Dog Meat

Nagaland government decided to ban dog meat sale.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X